ಸಂವಿಧಾನದ ರಕ್ಷಣೆ ಈ ದೇಶದ ಎಲ್ಲಾ ಪ್ರಜೆಗಳ ಜವಾಬ್ದಾರಿ – ಡಾ. ಎನ್.ಟಿ. ಶ್ರೀ ನಿವಾಸ್ ಶಾಸಕರು.

ಹೊಸಪೇಟೆ ಜನೇವರಿ.27

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಬಿ ಜೆಡ್ ಜಮೀರ್ ಅಹಮದ್ ರವರು 26.ರಂದು ಜನೇವರಿ ಜಿಲ್ಲಾ ಕೇಂದ್ರ ದಿಂದ ಸಂವಿಧಾನ ಜಾಗೃತಿ ಜಾಥದ ರಥವನ್ನು ಚಾಲನೆ ನೀಡಿ, ನಂತರ ವಿಜಯನಗರ ಜಿಲ್ಲೆಯ ಮೊದಲನೆಯದಾಗಿ ಕೂಡ್ಲಿಗಿ ತಾಲೂಕನ್ನು ಸಂವಿಧಾನದ ಜಾಗೃತಿ ಜಾಥದ ರಥಯಾತ್ರೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ, ಕೂಡ್ಲಿಗಿ ಪಟ್ಟಣದಲ್ಲಿ ಜನೇವರಿ 26.ರಂದು ಕರ್ನಾಟಕ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಜಾಥವನ್ನು ರಥದಲ್ಲಿ ಸ್ಥಬ್ದ ಚಿತ್ರದ ಸಂವಿಧಾನದ ಪೀಠಿಕೆಯನ್ನು ಅಳವಡಿಸಿ ಜನರಲ್ಲಿ ಸಂವಿಧಾನದ ಆಶಯಗಳನ್ನು ಅರಿವು ಮೂಡಿಸುವ ಸಲುವಾಗಿ ಕೈಗೊಂಡಿರುವ ಈ ಜಾಗೃತಿ ಜಾಥವನ್ನು ಮಾನ್ಯ ಕೂಡ್ಲಿಗಿ ಶಾಸಕರಾದ ಡಾಕ್ಟರ್ ಎನ್.ಟಿ.ಶ್ರೀನಿವಾಸ್ ರವರು ಸಂವಿಧಾನ ಜಾಗೃತಿ ರಥವನ್ನು ಕೊಟ್ಟೂರು ರಸ್ತೆಯ ಶ್ರೀ ವಾಲ್ಮೀಕಿ ಸಮುದಾಯದ ಭವನದ ಮುಂಭಾಗದಿಂದ ನೂರಾರು ವಿದ್ಯಾರ್ಥಿಗಳು ಅಧಿಕಾರಿ ವರ್ಗದವರು ಊರಿನ ಮುಖಂಡರುಗಳ ಮಾನ್ಯ ತಹಶೀಲ್ದಾರರು ತಾಲೂಕಿನ ಸರ್ಕಾರದ ಮುಖ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಚಾಲನೆ ನೀಡಿದರು.

ಈ ಸಂವಿಧಾನ ಜಾಗೃತಿ ರಥ ಯಾತ್ರೆಯು ಜನೇವರಿ 26. ರಿಂದ 30 ರವರೆಗೆ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಒಳಗೊಂಡಿರುವ ಹಳ್ಳಿಗಳನ್ನು ಸಂವಿಧಾನ ಜಾಗೃತಿ ಜಾಥಾ ರಥವು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಜಗದೀಶ್ ದಿಡಗೂರು ರವರು ತಿಳಿಸಿದ್ದಾರೆ. ಕೂಡ್ಲಿಗಿಯ ಪ್ರಮುಖ ರಸ್ತೆಗಳಲ್ಲಿ ವಿವಿಧ ವಾದ್ಯಗಳೊಂದಿಗೆ ರಥವನ್ನು ಕೂಡ್ಲಿಗಿ ಪಟ್ಟಣಕ್ಕೆ ಸ್ವಾಗತಿಸಿ ಕೊಂಡಿದ್ದು ನಂತರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನೆರೆದಂತಹ ಎಲ್ಲರೂ ಸಂವಿಧಾನ ಪೀಠಿಕೆಯನ್ನು ವಚನ ಪ್ರೇರಿತರಾಗಿ ಶಾಸಕರನ್ನೊಳಗೊಂಡು ಓದಿದರು ಚಾಲನೆ ನೀಡಿದ ಮಾನ್ಯ ಡಾಕ್ಟರ್ ಎನ್.ಟಿ.ಶ್ರೀನಿವಾಸ್ ರವರು ಸಂವಿಧಾನ ಕುರಿತು ಮಾತನಾಡುತ್ತಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತವಲ್ಲ ಅವರೊಬ್ಬ ಮಹಾನ್ ಶಕ್ತಿ ಈ ದೇಶಕ್ಕೆ ಸರ್ವರಿಗೂ ನ್ಯಾಯವನ್ನು ಸಿಗುವಂತಹ ಸರ್ವ ಶ್ರೇಷ್ಠ ಸಂವಿಧಾನವನ್ನು ರಚಿಸಿ ದೇಶದಲ್ಲಿ ಜೀವಿಸುವಂತಹ ಪ್ರತಿಯೊಬ್ಬರ ಜೀವ ಸಂಕುಲಕ್ಕೂ ಹಾಗೂ ಮಾನವ ವ್ಯಕ್ತಿಯು ತಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಸರ್ವ ಧರ್ಮಗಳು ಸಮಾನತೆಯಿಂದ ನಡೆದು ಕೊಳ್ಳಲು ಸಂವಿಧಾನದಲ್ಲಿ ರಚಿಸಿ, ಬಲಿಷ್ಠ ಭಾರತವಾಗಿ ಬೆಳೆಯಲು ಸಾವಿರಾರು ಹೋರಾಟಗಾರರ ಪ್ರಾಣ ಬಲಿದಾನಗಳಿಂದ ಭಾರತ ದೇಶ ಸ್ವಾತಂತ್ರ್ಯ ರಾಷ್ಟ್ರವಾದ ನಂತರ ಭಾರತ ದೇಶಕ್ಕೆ ಸಂವಿಧಾನವನ್ನು ರಕ್ಷಿಸಿ ಕೊಟ್ಟಂತಹ ಮಹಾನ್ ಮಾನವತವಾದಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಸ್ಮರಿಸೋಣ ಹಾಗೂ ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ಈ ದೇಶದ ಎಲ್ಲಾ ನಾಗರಿಕರ ಮೇಲೆ ಇದೆ ಎಲ್ಲರೂ ಸಮಾನತೆಯಿಂದ ಬಾಳೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ತಾಶಿಲ್ದಾರ್ರಾದ ಶ್ರೀಮತಿ ರೇಣುಕಾ, ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಮಲ್ಲೇಶಪ್ಪ ಮಲ್ಲಾಪುರ್, ದಲಿತ ಮುಖಂಡರಾದ ಶ್ರೀ ಉಮೇಶ್, ಕಾವಲಿ ಶಿವಪ್ಪ ನಾಯಕ,ಡಿಎಚ್ ದುರ್ಗೇಶ್, ಎಸ್ ದುರ್ಗೇಶ್, ಜಿಂಕಲ್ ನಾಗಮಣಿ,ಪಿ ಸಂತೋಷ್ ಕುಮಾರ್,ಓಬಣ್ಣ, ಕೆ, ಮೂಗಪ್ಪ, ಬಿ ಮಹೇಶ, ಹಾಗೂ ಎಲ್ಲಾ ಸರ್ಕಾರಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button