ಪ್ರಪಂಚದಲ್ಲೇ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು – ಯಶವಂತರಾಯಗೌಡ ಪಾಟೀಲ.
ಇಂಡಿ ಜನೇವರಿ.27

ಇಡೀ ಪ್ರಪಂಚದಲ್ಲೇ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ, ಸರ್ವ ಧರ್ಮ ಸಹಿಷ್ಣುತೆ ಗಣತಂತ್ರ ವ್ಯವಸ್ಥೆಯ ಮೂಲ ಆಶಯ. ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಎಂದು ಶಾಸಕ, ವಿಧಾನಸಭೆ ಅಂದಾಜು ಸಮೀತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.ಅವರು ಶುಕ್ರವಾರ ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ 75.ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ದೇಶ ಹಾಗೂ ವ್ಯಕ್ತಿಯ ಆತ್ಮ ಗೌರವ ಪ್ರತೀಕವಾಗಿರುವ ಸಂವಿಧಾನ ತೋರುವ ಬೆಳಕಿನಲ್ಲಿ ಜವಾಬ್ದಾರಿಯ ಹೆಜ್ಜೆ ಹಾಕೋಣ ಎಂದ ಅವರು, ಇಂಡಿ ತಾಲೂಕು ಸತತ ಬರಗಾಲ ಪೀಡಿತ ಪ್ರದೇಶವಾಗಿದೆ. ಈ ಭಾಗದ ನೀರಾವರಿ ಕಾರ್ಯಗಳು ಸಮರೋಪಾದಿಯಲ್ಲಿ ಆಗಬೇಕಾಗಿದೆ. ಅದಕ್ಕಾಗಿ ಪ್ರಥಮ ಪ್ರಾಮುಖ್ಯತೆ ನೀಡ ಬೇಕಾಗಿದೆ ಎಂದ ಅವರು ಈ ಶತಮಾನ ಕಂಡ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳ ನಡೆ-ನುಡಿ ಪಾಲಸಿ ನಮ್ಮ ಯುವಕರು ಅವರ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಈ ದಿನದಂದು ಇಡೀ ದೇಶವೇ ಸಂಭ್ರಮಿಸುತ್ತದೆ. ಈ ದಿನ ಸಂವಿಧಾನ ಜಾರಿಯಾದ ದಿನವಾಗಿದೆ. ದೇಶದ ನಾಗರಿಕರಾದ ನಾವು ಸಂವಿಧಾನವನ್ನು ಗೌರವಿಸಿ, ಸಂವಿಧಾನದ ಆಶಯದಂತೆ ಬದುಕಿ ಬಾಳೋಣ ಎಂದರು.ತಹಸೀಲ್ದಾರ ಬಿ.ಎಸ್. ಕಡಕಭಾವಿ, ತಾಪಂ ಇಒ ಬಾಬು ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಅಲಗೂರ, ಡಿವೈಎಸ್‌ಪಿ ಜಗದೀಶ ಎಸ್.ಎಚ್, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮತ್ತಿತರಿದ್ದರು.ಬಸವರಾಜ ಗೊರನಾಳ ನಿರೂಪಿಸಿದರು.ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಹೆಸ್ಕಾಂ ಎಇಇ ಎಸ್.ಆರ್. ಮೆಂಡೆಗಾರ,. ಎಸ್.ಆರ್. ರುದ್ರವಾಡಿ, ಲೋಕೋಪಯೋಗಿ ಅಧಿಕಾರಿ ದಯಾನಂದ ಮಠ ಸೇರಿದಂತೆ ಮತ್ತಿತರರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ