ಕಬ್ಬರಗಿಯಲ್ಲಿ 75.ನೇ ಗಣರಾಜ್ಯೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಬ್ಬರಗಿ ಜನೇವರಿ.27

ಧ್ವಜಾರೋಹಣವನ್ನು ನೆರವೇರಿಸಿದ ಮುಖ್ಯೋಪಾಧ್ಯಾಯರಾದ ಶ್ರೀ ಮೈಲಾರಪ್ಪ ಹಾದಿಮನಿ ಅವರು ಮಾತನಾಡಿ ಸಂವಿಧಾನವು ಬಡವ ಬಲ್ಲಿದ ಮೇಲು ಕೀಳು ಜಾತಿ ಧರ್ಮ ಎಂಬ ಬೇಧವಿಲ್ಲದೆ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನವಾದ ಹಕ್ಕು ಮತ್ತು ಅವಕಾಶಗಳನ್ನು ನೀಡಿದೆ. ನಮ್ಮ ದೇಶದ ಸಂವಿಧಾನವು ವಿಶ್ವದ ಇತರ ಎಲ್ಲ ರಾಷ್ಟ್ರಗಳಿಗೆ ಮಾದರಿಯಾಗಿದೆ. ಈ ಸಂವಿಧಾನ ಜಾರಿಗೆ ಬರಲು ಕಾರಣರಾದ ಎಲ್ಲರನ್ನೂ ನಾವು ಸ್ಮರಿಸಬೇಕು ಎಂದರು. ಚಿತ್ರಕಲಾ ಶಿಕ್ಷಕ ತಿರುಪತಿ ಚಲವಾದಿ ಗಣರಾಜ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಬೃಹತ್ ಗಾತ್ರದ ಸಂವಿಧಾನ ಗ್ರಂಥದ ಮಾದರಿ, ಹಿಮಾಲಯ ಪರ್ವತದ ಮಾದರಿ ಹಾಗೂ ಬೃಹತ್ ಗಾತ್ರದ ಸಂವಿಧಾನ ಪೀಠಿಕೆಯ ಪ್ರದರ್ಶನ ಹಿನ್ನೆಲೆಯಲ್ಲಿ ಕೇಸರಿ ಬಿಳಿ ಹಸಿರು ಬಣ್ಣಗಳ ಬಟ್ಟೆಗಳನ್ನು ಬಳಸಿ ಆಕರ್ಷಣೀಯವಾಗಿ ಕಾಣುವಂತೆ ಮಾಡಿದ್ದರು. ಇವರ ಕಾರ್ಯವನ್ನು ಮುಖ್ಯೋಪಾಧ್ಯಾಯರು ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಗ್ರಾಮದ ಗಣ್ಯರು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಕ ಬಸವರಾಜ ಕೊರ್ತಿ ಹಾಗೂ ಸಮಾಜ ವಿಜ್ಞಾನ ಶಿಕ್ಷಕ ಚಿದಾನಂದ ಕಸ್ತೂರಿ ಮಾರ್ಗದರ್ಶನದಲ್ಲಿ ರಂಗೋಲಿಯಲ್ಲಿ ವಿವಿಧ ನಕ್ಷೆ ಮತ್ತು ವಿಜ್ಞಾನದ ಚಿತ್ರಗಳನ್ನು ಬಿಡಿಸಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಗ್ರಂಥದ ಬೃಹತ್ ಮಾದರಿ ಹಾಗೂ ಸಂವಿಧಾನ ಪೀಠಿಕೆಗಳನ್ನು ಜಾಥಾದ ಮೂಲಕ ಪ್ರದರ್ಶನ ಮಾಡಲಾಯಿತು. ದೈಹಿಕ ಶಿಕ್ಷಕ ಸಂಗಮೇಶ ತೆಗ್ಗಿನಮನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಲೇಜಿಮ್ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಶಿಕ್ಷಕರಾದ ಚನ್ನಪ್ಪ ಅಂಬಿಗೇರ ಪ್ರಾರ್ಥಿಸಿದರು ಸುಖಮುನಿ ಆಂದೇಲಿ ಸ್ವಾಗತಿಸಿದರು‌ ಪ್ರಶಾಂತ ವಗ್ಯಾನವರ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಶರಣಪ್ಪ ಅಧಿಕಾರಿ ವಂದಿಸಿದರು ಶಿವಪ್ರಕಾಶ್ ಸಜ್ಜನ ಕಾರ್ಯಕ್ರಮ ನಿರೂಪಿಸಿದರು.

ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ ಇಳಕಲ್

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button