ಕೋಡಿಹಳ್ಳಿಯಲ್ಲಿ 75.ನೇ ಗಣರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಕೋಡಿಹಳ್ಳಿ ಜನೇವರಿ.27

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ 75.ನೇ ಗಣ ರಾಜ್ಯೋತ್ಸವವನ್ನು ಸ.ಹಿ.ಪ್ರಾ.ಶಾಲೆ ಕೋಡಿಹಳ್ಳಿಯಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಈ ದಿನ ಕಾರ್ಯಕ್ರಮದಧ್ವಜಾರೋಹಣವನ್ನು ಎಸ್. ಡಿ. ಎಂ.ಸಿ ಅಧ್ಯಕ್ಷರು ಆದ ಶ್ರೀಯುತ ಡಿ.ನಾಗರಾಜು ನೆರವೇರಿಸಿದರು, ನಂತರಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ಪ್ರಭಾತ್ ಭೇರಿ ಜಾಥಾ ಮಾಡಲಾಯಿತು.ನಂತರ ಎಸ್.ಡಿ.ಎಂ.ಸಿ ಅಧ್ಯಕ್ಷರು ಆದ ಶ್ರೀಯುತ ನಾಗರಾಜುರವರು ಈ ಕಾರ್ಯಕ್ರಮವನ್ನು ಕುರಿತು ಪ್ರಾಸ್ತಾವಿಕ ನುಡಿಯಲ್ಲಿ ಮಕ್ಕಳು ಓದುವುದರ ಜೊತೆಗೆ ನಮ್ಮ ದೇಶದ ಮಹಾನ್ ವ್ಯಕ್ತಿಗಳ ದೇಶ ಭಕ್ತಿ ಹಾಗೂ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯರು ಆದ ಶ್ರೀಯುತ ಎಚ್.ಜಗನ್ನಾಥ್ ರವರು ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ರವರು ರಚಿಸಿದ ಭಾರತದ ಸಂವಿಧಾನದ ಅರ್ಥ, ಪೀಠಿಕೆ,ಹಾಗೂ ಅದರ ಮಹತ್ವದ ಬಗ್ಗೆ ವಿವರಿಸಿದರು ಮತ್ತು ಪ್ರತಿ ವರ್ಷದಂತೆ ನಾವು ಗಣರಾಜ್ಯೋತ್ಸವದ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಾ ಬಂದಿದ್ದೇವೆ ಎಂದು ಬಹಳ ಅರ್ಥ ಪೂರ್ಣವಾಗಿ ತಿಳಿಸಿದರು. ನಂತರ ಮಕ್ಕಳಿಂದ 75.ನೇ ಗಣರಾಜ್ಯೋತ್ಸವ ಕುರಿತು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಭಾಷಣ ಮಾಡಿದರು,

ನಂತರ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ಸುಶೀಲಮ್ಮರವರು ಮಾತನಾಡಿ ಭಾರತದ ಸಂವಿಧಾನವು ಲಿಖಿತ ರೂಪದಲ್ಲಿದೆ ಇದು ವಿಶ್ವದಲ್ಲಿಯೇ ಅತ್ಯಂತ ಉತ್ತಮ ಹಾಗೂ ವಿಸ್ತಾರವಾಗಿದೆ ಮಕ್ಕಳು ನಿತ್ಯ ಇದನ್ನು ಓದಿ ತಮ್ಮ ಜ್ಞಾನಾರ್ಜನೆ ಹೆಚ್ಚಿಸಿ ಕೊಳ್ಳಬೇಕು ಎಂದರು,ನಂತರ ಈ ಶಾಲೆಯ 2003-04 ನೆಯ ಸಾಲಿನ ಹಾಗೂ 2005-06 ನೆಯ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಶಾಲೆಗೆ ಎರಡು ಬೀರು( ಅಲ್ಮೇರಾ) ಕೊಡುಗೆಯಾಗಿ ನೀಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ.ಎಂ ಸಿ ಅಧ್ಯಕ್ಷರು ಆದ ಶ್ರೀಯುತ ಡಿ. ನಾಗರಾಜು ವಹಿಸಿದ್ದರು,ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು,ಈ ಕಾರ್ಯಕ್ರಮಕ್ಕೆ ಊರಿನ ಸಮಸ್ತ ಗ್ರಾಮಸ್ಥರು,ಯುವಕರು, ಮಹಿಳೆಯರು, ಮಕ್ಕಳು ಭಾಗಹಿಸಿದ್ದರು.ಎಸ್.ಡಿ.ಎಂ.ಸಿ ಉಪಾಧ್ಯಕ್ಷರು ಆದ ಶ್ರೀಯುತ ಶಿವಾರೆಡ್ಡಿ.ಕೆ.ಬಿ,ಸದಸ್ಯರಾದ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಜ್ಯೋತಿ. ಟಿ ಮತ್ತು ಶಾರದಾ ವಿದ್ಯಾರ್ಥಿಗಳು ನಡೆಸಿಕೊಟ್ಟರು, ಬಸವರಾಜ ಜಿ. ಟಿ ಸಹ ಶಿಕ್ಷಕರು ಸ್ವಾಗತಿಸಿದರು,ಎಲ್. ರತ್ನಮ್ಮ ಸಹ ಶಿಕ್ಷಕಿ ನಿರೂಪಿಸಿದರು,ಆರ್. ಆಶಾ ಸಹ ಶಿಕ್ಷಕಿಯರು ವಂದಿಸಿದರು.ಜೆ.ಸುಪ್ರಿಯಾ ಸಹ ಶಿಕ್ಷಕಿಯರು ಎಲ್ಲ ಮಕ್ಕಳಿಗೆ ಸಹಿ ವಿತರಿಸಿದರು. ಒಟ್ಟಾರೆಯಾಗಿ ಎಲ್ಲರ ಸಹಕಾರದೊಂದಿಗೆ ಈ ದಿನದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ ಇಳಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button