ಮಠ ಗುರುಗಳು ಸಮಾಜದ ಬಡ ಮಕ್ಕಳಿಗೆ ಜ್ಞಾನ, ಸಂಸ್ಕಾರ ಸಂಸ್ಕೃತಿಯನ್ನು ಬಿತ್ತಿದರು – ಗುರುಮಹಾಂತ ಶ್ರೀಗಳು.

ಹುನಗುಂದ ಜನೇವರಿ.28

ಸಮಾಜದ ಬಡ ಮಕ್ಕಳಿಗೆ ಜ್ಞಾನದ ಅರಿವು ನೀಡುವುದರೊಂದಿಗೆ ಸಂಸ್ಕಾರ, ಸಂಸ್ಕೃಂತಿಯನ್ನು ಲಿಂ, ಗುರುಬಸವಾರ್ಯ ಮಠ ಗುರುಗಳು ಬಿತ್ತಿದ್ದಾರೆ ಎಂದು ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು ಹೇಳಿದರು.ರವಿವಾರ ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಯಕಯೋಗಿ ಲಿಂ,ಶ್ರೀ ಗುರುಬಸವಾರ್ಯ ಮಠ ಗುರುಗಳ 45. ನೆಯ ಪುಣ್ಯ ಸ್ಮರಣಿ ಅಂಗವಾಗಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಔಷಧಿ ವಿತರಣೆ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಅವರು,ಶಿಕ್ಷಣದ ಜ್ಞಾನ ದೀವಿಗೆ ಹಚ್ಚಲು, ಬಿತ್ತಲು ಈ ಭೂಮಿಗೆ ಬಂದವರಲ್ಲಿ ಮಠ ಗುರುಗಳು ಒಬ್ಬರು.ಮಠ ಗುರುಗಳಲ್ಲಿ ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ವಿಚಾರಗಳ ಸಂಸ್ಕಾರವನ್ನು ನೀಡಿದರು. ಸಮಾಜದ ಏಳ್ಗೆಗಾಗಿ ಜೀವನ ತ್ಯಾಗ ಮಾಡಿದ್ದಷ್ಟೆ ಅಲ್ಲ ತನು, ಮನ, ಧನ, ಅರ್ಪಿಸಿ ಶಿಕ್ಷಣ ಸಂಸ್ಥೆಯ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ ಎಂದರು.ದಾವಣಗೇರಿ ಶಿವಗಂಗೋತ್ರಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ.ಬಿ.ಡಿ.ಕುಂಬಾರ ಮಾತನಾಡಿ ವಿದ್ಯೆ,ಅನ್ನ,ವಸತಿ ನೀಡಿದ ಮಠ ಗುರುಗಳು ತ್ರಿವಿಧ ದಾಸೋಹಿಗಳಾಗಿದ್ದರು.ಅಷ್ಟೆಯಲ್ಲ ಅವರೊಬ್ಬರು ಕಾಯಕಯೋಗಿ ಕೂಡಾ ಹೌದು.ಇತರೆ ಶಿಕ್ಷಕರಗಿಂತ ಭಿನ್ನವಾಗಿದ್ದ ಮಠ ಗುರೂಜಿಯವರು ಮಕ್ಕಳಲ್ಲಿಯೇ ದೈವತ್ವ ಕಂಡಿರು. ತಮ್ಮ ಸರಳ ಜೀವನದ ಮೂಲಕ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಹಿಮರು. ಅವರ ಶ್ರಮ ಮತ್ತು ತ್ಯಾಗದ ಫಲವಾಗಿ ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಗೆ ಅಕ್ಷರ ದಾಸೋಹ ನೀಡುತ್ತಿದೆ. ಅವರಿಂದ ಅಕ್ಷರಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೊಡ್ಡ ಹುದ್ದೆಯಲ್ಲಿದ್ದಾರೆ.ಡಾ.ಡಿ.ಎಸ್.ಪಾವಟೆಯವರು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದಾಗ ಮಠ ಗುರುಗಳು ವಿಜಯ ಮಹಾಂತೇಶ ಕಾಲೇಜು ಪ್ರಾರಂಭಿಸಲು ಅನುಮತಿಯನ್ನು ತಂದಿದ್ದನ್ನು ನಾವು ಸ್ಮರಿಸಿ ಕೊಳ್ಳಬೇಕು ಎಂದರು.ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ ಮಠಗಳ ಗುರುಗಳ ಆದರ್ಶಗಳನ್ನು ನಿರಂತರವಾಗಿ ಮುಂದುವರೆಸುವ ಸಲುವಾಗಿ ಈ ಪುಣ್ಯ ಸ್ಮರಣೆ ಮಾಡುತ್ತಿದ್ದೇವೆ.ಯಾವ ಮನುಷ್ಯ ತನ್ನ ಸಲುವಾಗಿ ಬದುಕುತ್ತಾನೋ ಅವನನ್ನು ಸಮಾಜ ನೆನಪು ಇಡೋದಿಲ್ಲ, ಯಾವ ವ್ಯಕ್ತಿ ಸಮಾಜಕ್ಕಾಗಿ ಕೆಲಸ ಮಾಡತ್ತಾರೋ ಅಂತವರನ್ನು ಸಮಾಜ ನಿರಂತರ ಸ್ಮರಣೆ ಮಾಡುತ್ತದೆ. ನಮ್ಮ ಸಂಘ ಅನ್ನ, ಅರಿವು ಮತ್ತು ಅಕ್ಷರ ಧ್ಯೇಯವನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ ಎಂದರು.ಬಾಗಲಕೋಟಿಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಶ್ರೀಕುಮಾರೇಶ್ವರ ಆಸ್ಪತ್ರೆ ವ, ಸಂಶೋಧನಾ ಕೇಂದ್ರದ ತಜ್ಞ ವೈದ್ಯರಿಂದ ವೈದ್ಯಕೀಯ ತಪಾಷಣೆ ನಡೆಯಿತು. ಇದರಲ್ಲಿ ಹೃದಯ, ಕಣ್ಣು, ಕಾರ್ಡಿಯೋಲಜಿ, ಬಿಪಿ, ಶುಗರ, ಥೈರೇಡ ಹೀಗೆ ಎಲ್ಲಾ ಬಗೆಯ ತಪಾಣೆಗಳನ್ನು ನಡೆಸಿ ಉಚಿತ ಔಷಧಿ ನೀಡಲಾಗಿತು. ಶಿರೂರಿನ ಮಹಾಂತ ತೀರ್ಥದ ಬಸವಲಿಂಗ ಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಂಗಣ್ಣ ಚಿನಿವಾಲರ,ಸದಸ್ಯರಾದ ಸಂಗಣ್ಣ ನಾಗರಾಳ,ಶಿವಪ್ಪ ನಾಗೂರ,ಬಸವರಾಜ ರಕ್ಕಸಗಿ,ರಾಮನಗೌಡ ಬೆಳ್ಳಿಹಾಳ,ವಿ.ಮ ಸಂಘದ ನಿರ್ದೇಶಕರಾದ ಬಸವರಾಜ ಕೆಂದೂರ,ಅರುಣೋದಯ ದುದ್ಗಿ,ವೀರಣ್ಣ ಬಳೂಟಗಿ,ದೇಸಾಯಪ್ಪ ಹವಾಲ್ದಾರ, ಡಾ.ಎಚ್.ಎಸ್. ಮುದಗಲ್,ರವಿ ಹುಚನೂರ ಇತರರು ಇದ್ದರು.ವಿ.ಮ. ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಆಢಳಿತಾಧಿಕಾರಿ ಶಶಿಕಲಾ ಕಡಿ ಪ್ರಾಸ್ತಾವಿಕ ಮಾತನಾಡಿದರು.ಎಸ್.ಆರ್.ಚಿತ್ತರಗಿ,ಎಂ.ಎಂ, ಮಾಟೂರ ನಿರೂಪಿಸಿದರು.ಸಂಗಣ್ಣ ಚಿನಿವಾಲ ವಂದಿಸಿದರು.

ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button