ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಪ್ರಾರಂಭೋತ್ಸವದ ನಿಮಿತ್ತವಾಗಿ ಹೋಳಿಗೆ ಸೀಕರಣೆ ಊಟ ಬಡಿಸಿದ – ಶಿಕ್ಷಕರ ವೃoದ.
ಕಲಕೇರಿ ಮೇ.31

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಸರಕಾರಿ ಉರ್ದು ಶಾಲೆ ಮತ್ತು ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಮೂರು ಶಾಲೆಗಳನ್ನು ಶುಕ್ರವಾರ ದಿನಾಂಕ 31.5.2024. ಮೂರು ಶಾಲೆಯ ಮುಖ್ಯ ಗುರುಗಳು ಮೂರು ಶಾಲೆಯ ಗುರುಮಾತೆ ಅವರು ಮೂರು ಶಾಲೆಯ ಶಿಕ್ಷಕರು ಮೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯಿತಿಯ ಸದಸ್ಯರು ಎಲ್ಲರೂ ಸೇರಿದಂತೆ ಮಕ್ಕಳನ್ನು ಸ್ವಾಗತವನ್ನು ಮಾಡಿಕೊಂಡು ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮುದ್ದು ಮಕ್ಕಳಿಗೆ ಶಾಲೆಯ ಪ್ರಾರಂಭೋತ್ಸವದ ನಿಮಿತ್ಯವಾಗಿ ಹೋಳಿಗೆ ಸೀಕರಣೆ ಮಕ್ಕಳಿಗೆ ಊಟ ಮಾಡಿಸಿದರು.

ಬಹಳ ವಿಜೃಂಭಣೆಯಿಂದ ಶಾಲೆಗಳು ಪ್ರಾರಂಭೋತ್ಸವದ ಎಲ್ಲಾ ಮಕ್ಕಳಿಗೆ ಸ್ವಾಗತವನ್ನು ಕೋರಿ ಮಕ್ಕಳನ್ನು ಶಿಕ್ಷಕರು ಬಹಳ ಉನ್ನತ ಮಟ್ಟಕ್ಕೆ ಅವರನ್ನು ಬೆಳೆಸಬೇಕು ಎಂದು ಈ ಸಂದರ್ಭದಲ್ಲಿ ಸುಧಾಕರ್ ಅಡಿಕಿ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಸಿ ಆರ್ ಸಿ ನಾಯ್ಕೋಡಿ ಇವರು ಕೂಡ ಎಲ್ಲಾ ಶಿಕ್ಷಕರು ಮಕ್ಕಳನ್ನ ಒಂದು ಉನ್ನತಮಟ್ಟಕ್ಕೆ ತಾವು ಬೆಳೆಸಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.