ಕಲಕೇರಿ ಗ್ರಾಮದಲ್ಲಿ ಎರಡನೇ ಹಂತದ ಆರೋಗ್ಯ ತಪಾಸಣಾ ಶಿಬಿರ ಮುಕ್ತಾಯ.

ಕಲಕೇರಿ ಜನೇವರಿ.30

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಇಂದು ಸಮುದಾಯ ಆರೋಗ್ಯ ಕೇಂದ್ರ ಕಲಕೇರಿ ಹಾಗೂ ಗ್ರಾಮ ಪಂಚಾಯಿತಿ ಕಲಕೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ಹಂತದ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ಕಲಕೇರಿಯ ಅಗಸಿ ಹತ್ತಿರ ಇರುವ ಹನುಮಾನ ದೇವಸ್ಥಾನದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜಅಹಮ್ಮದ ಸಿರಸಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕಲಕೇರಿ ಇವರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮ ಉದ್ಘಾಟಕರಾಗಿ ಡಾ. ಬಸವರಾಜ್ ಅರಕೇರಿ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯದ ಕಲಕೇರಿ ಇವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಬಸನಗೌಡ ಚೌದರಿ . ಪರಶುರಾಮ ದೊರೆಗೊಳ . ಸಲೀಂ ನಾಯ್ಕೋಡಿ. ದೇವೆಂದ್ರ ಬಡಿಗೇರ. ಖಾಸಿಂ ನೈಕೋಡಿ. ಇರಗಂಟಿ ಬಡಿಗೇರ್. ಸುಧಾಕರ ಅಡಿಕಿ ಸದಸ್ಯರು .ವಹಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರ ಕಲಕೇರಿ ಸಿಬ್ಬಂದಿಗಳಾದ ಶ್ರೀ ಎಂಡಿ ಮೋತಿಬಾಯಿ ಡಾ. ಸಂತೋಷ ತೆಂಗಳಿ ಶ್ರೀ ಅಬ್ಬಸಾ ಮಾಂಗ ಶ್ರೀ ಶಿವಕುಮಾರ ಶಾಂತಗಿರಿ ಶ್ರೀ ಸಿದ್ದು ಬ್ಯಾಲಾಳ ಸಮುದಾಯ ಆರೋಗ್ಯ ಅಧಿಕಾರಿಗಳಾದ ಕು.ಸುಶ್ಮಿತಾ ಕು. ಅನಿತಾ ಕು.ಆರತಿ ಹಾಗೂ ಕಲಕೇರಿಯ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ಡಾ. ಸಂತೋಷ ಟೆಂಗಳಿ ಮಾತನಾಡಿದರು ಈ ಕಾರ್ಯಕ್ರಮನ ಉದ್ದೇಶಿಸಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ಬಸವರಾಜ ಅರಕೇರಿ ಮಾತನಾಡಿ ಎರಡನೇ ಹಂತದ ಸಮುದಾಯ ಆಧಾರಿತ ತಪಾಸಣಾ ಶಿಬಿರದ ಉದ್ದೇಶಗಳನ್ನು ಕುರಿತು ವಿವರಿಸಿದರು 2030ರ ಒಳಗೆ ಎಚ್ಐವಿ /ಏಡ್ಸ್ ಸಿಪಿಲಿಸ್ ಮತ್ತು ಹೆಪಟೈಸ್ ಬಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಹಾಗೂ ಎಚ್ಐವಿ /ಏಡ್ಸ್ ಬಗ್ಗೆ ಭಯ ಬೇಡ ಅದರ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಿ ಯುವಕರು ದುಶ್ಚಟಗಳಿಂದ ದೂರವಿರಿ ಎಂದು ಕರೆ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಬಸನಗೌಡ ಚೌದರಿ ಮಾತನಾಡಿ ಸರ್ಕಾರದಿಂದ ಆಯೋಜನೆಗೊಂಡಿರುವ ಇಂತಹ ಕಾರ್ಯಕ್ರಮಗಳ ಸದುಪಯೋಗ ಜನರು ಪಡೆದು ಪಡೆದುಕೊಳ್ಳಬೇಕು. ಎಚ್ಐವಿ/ ಏಡ್ಸ್ ಅಂತ ಮಾರಕ ರೋಗಗಳ ಬಗ್ಗೆ ಜನರು ತಿಳಿದುಕೊಂಡು ರೋಗ ಬಂದ ಮೇಲೆ ಓಡಾಡುವ ಬದಲು ರೋಗ ಬರದೇ ಹಾಗೆ ತಮ್ಮ ಆರೋಗ್ಯ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ನಂತರ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಧಾಕರ್ ಅಡಿಕಿ ಮತ್ತು ನಬಿಲಾಲ್ ನಾಯ್ಕೋಡಿ ಮಾತನಾಡಿ ಗ್ರಾಮ ಪಂಚಾಯತಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಕೈಜೋಡಿಸಿ ಸಮಾಜದಲ್ಲಿ ಉಲ್ಭಣಿಸುವ ಮಾರಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಅಬ್ಬಸಾಬ ಮಾಂಗ ನಿರ್ವಹಿಸಿದರು. ವಂದನಾರ್ಪಣೆಯನ್ನು ಶ್ರೀ ಎಂಡಿ ಮೋತಿಬಾಯಿ ಮಾಡಿದರು. ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿ.ತಾಳಿಕೋಟಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button