ಬೇಂದ್ರೆ ಅಜ್ಜ ನನ್ನಜ್ಜ…..

ಪ್ರೀತಿಯ ನನ್ನಜ್ಜನ ಬಗ್ಗೆ ಏನೆಂದು ಬರೆಯಲಿ ನಾನು
ಕರುನಾಡಿಗೆ ವರಕವಿಯಾಗಿ ಸಿಕ್ಕ ನನ್ನಜ್ಜ ನೀನುಬೇಂದ್ರೆ ನನ್ನಜ್ಜ ಎನ್ನುವುದ ಕೇಳಲು ಅದೆಷ್ಟು ಚೆನ್ನ
ಕವಿಯೆಂದರೆ ಬೇಂದ್ರೆ ಅಜ್ಜನಂಗಿರಬೇಕೆನ್ನುವರು ನಿನ್ನನೋವ ಮರೆಸಿ ನಗು ಉಕ್ಕಿಸುವ ಕವಿತೆಗಳೇ ಸುಂದರ
ಜನರ ಭಾವಕ್ಕೆ ಹೊಂದುವ ನಿಮ್ಮ ಬರಹವೇ ಸುಮಧುರಕನ್ನಡ ಮಣ್ಣಿನ ಸಾಹಿತ್ಯ ಲೋಕದ ತಾರೆಯಾಗಿರುವೆ
ಕನ್ನಡ ಸಿರಿತನವನ್ನು ಉಳಿಸಲು ಸ್ಪೂರ್ತಿಯಾಗಿರುವೆಅಂದಿಗೂ ಇಂದಿಗೂ ಎಂದೆಂದಿಗೂ ನಿಮ್ಮ ಬರಹಗಳು ಅನನ್ಯ
ಕನ್ನಡ ಠಾಗೂರ್ ಬೇಂದ್ರೆ ಅಜ್ಜನ ಬರಹ ಓದಿ ಕಲಿಯುತ್ತಿರುವ ನಾವೇ ಧನ್ಯನೀನು ನೀನಾಗಿರು ಮನುಜನೆಂದು ಕೂಗಿದ್ದು ನನ್ನಜ್ಜ
ಸಾವಿಗೆ ಹೆದರಬೇಡ ವೆಂದು ಕಲಿಸಿದ್ದು ನನ್ನಜ್ಜ ನನ್ನಜ್ಜ…ಅಶ್ವಿನಿ ನಕ್ಷತ್ರ ✍️
