ನೇಮಿರಾಜ್ ನಾಯ್ಕ್ ಶಾಸಕರಿಗೆ ಸಮಯ ಪ್ರಜ್ಞೆ ಇಲ್ಲವಂತೆ.

ಕೊಟ್ಟೂರು ಜನೇವರಿ.31

ಒಂದು ಕಾರ್ಯಕ್ರಮ ಎಂದರೆ ಅದು ಸಾರ್ವಜನಿಕರಿಗೆ ಅಧಿಕಾರಿಗಳಿಗೆ ಹಾಗೂ ಪತ್ರಿಕೆ ಮಾಧ್ಯಮದವರಿಗೆ ಇರಬೇಕಾದಂತ ಜವಾಬ್ದಾರಿ ಕೆಲವೊಂದು ಸೌಲತ್ತು ಪಡೆಯಬೇಕಾದರೆ ಕೆಲವೊಂದು ಕಾರ್ಯಕ್ರಮಗಳು ನೆರವೇರಿಸ ಬೇಕೆಂದರೆ ಅಲ್ಲಿರುವ ಮುಂಜಾಗ್ರತೆ ಕ್ರಮ ವಹಿಸಬೇಕು ಮತ್ತು ಅದು ಸಾರ್ವಜನಿಕರಿಗೆ ಯಾವ ರೀತಿಯ ತೊಂದರೆ ಯಾಗದಂತೆ ಇರಬೇಕು ಎಂದಲ್ಲ ಮಾಡುವ ಅಧಿಕಾರಿಗಳಿಗೆ ನಮ್ಮ “ಸಿಹಿ ಕಹಿ” ಪತ್ರಿಕೆ ಹಾಗೂ “ಎಸ್ ಕೆ ನ್ಯೂಸ್ ಚಾನೆಲ್’ ವತಿಯಿಂದ ಒಂದು ಸೆಲ್ಯೂಟ್!ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೆಳಿಗ್ಗೆ 11:00ಗೆ ನಡೆಯುವ ಕಾರ್ಯಕ್ರಮ 1: 15.ಕ್ಕೆ ಪ್ರಾರಂಭವಾಯಿತು.ಇದಕ್ಕೆ ಅಲ್ಲಿ ಬಂದಿರುವ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ತೋಟದ ರಾಮಣ್ಣ ಹಾಗೂ ಕೆಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು ಏಕೆಂದರೆ ಅಲ್ಲಿ ನೆರೆದಿರ್ತಕ್ಕಂತ ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ತೊಂದರೆ ಯಾಗುತ್ತದೆ ಇದಕ್ಕೆ ಹೊಣೆ ಯಾರು ಎಂದೆಲ್ಲಾ ತಹಶೀಲ್ದಾರರಿಗೆ ಕೆಲ ಸಾರ್ವಜನಿಕರು ಪ್ರಶ್ನೆ ಮಾಡಿದರು ತದ ನಂತರ“ಪಂಚ ಗ್ಯಾರಂಟಿ ಫಲಾನುಭವಿಗಳ ಸಮಾವೇಶ” ಕಾರ್ಯಕ್ರಮ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ನೇಮಿರಾಜ ನಾಯ್ಕ್ ಶಾಸಕರು, ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಇವರು ವಹಿಸಿಕೊಂಡಿದ್ದು, ಅನ್ನಭಾಗ್ಯ, ಗೃಹಲಕ್ಷಿ, ಗೃಹ ಜ್ಯೋತಿ ಯೋಜನೆಯಡಿ ಸೌಲಭ್ಯವನ್ನು ಪಡೆದ ಫಲಾನುಭವಿಗಳ ಪೈಕಿ ಸಾಂಕೇತಿಕವಾಗಿ ಐದೈದು ಜನರಿಗೆ ಯೋಜನೆಯ ಪ್ರಮಾಣ ಪತ್ರಗಳನ್ನು ವಿತರಿಸಿದರು. ತಹಶೀಲ್ದಾರರಾದ ಅಮರೇಶ ಜಿ.ಕೆ ಸ್ವಾಗತಿಸಿದರೆ, ರವಿಕುಮಾರ್.ವೈ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮದ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಯನ್ನು ನುಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ನಸರುಲ್ಲಾ, ಪಟ್ಟಣ ಪಂಚಾಯಿತಿ ಸದಸ್ಯರಾದ ಮರಬದ ಕೊಟ್ರೇಶ, ಜಿ ಸಿದ್ದಯ್ಯ ಹಾಜರಿದ್ದರು. ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಮಾಲುಂಬಿ.ಬಿ ಶಿಶು ಯೋಜನೆ ಅಭಿವೃದ್ಧಿ ಅಧಿಕಾರಿಗಳು, ಕೂಡ್ಲಿಗಿ ಶಕ್ತಿ ಯೋಜನೆ ಬಗ್ಗೆ ಮರಿಲಿಂಗಪ್ಪ, ಡಿಪೋ ಮ್ಯಾನೇಜರ್ ಕೂಡ್ಲಿಗಿ ಗೃಹ ಜ್ಯೋತಿ ಯೋಜನೆ ಬಗ್ಗೆ ಪ್ರಕಾಶ ಪತ್ತೆನೂರು ಎಇಇ, ಜೆಸ್ಕಾಂ ಕೂಡ್ಲಿಗಿ; ಅನ್ನಭಾಗ್ಯ ಯೋಜನೆ ಬಗ್ಗೆ ಬಿ ಮಂಜುನಾಥ ಆಹಾರ ನಿರೀಕ್ಷಕರು, ಕೊಟ್ಟೂರು ಇವರು ಮಾಹಿತಿಯನ್ನು ನೀಡಿದರು. ಪದ್ಮನಾಭ ಕರಣಂ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೂಡ್ಲಿಗಿ ಈರಣ್ಣ, ಕಾರ್ಯದರ್ಶಿ ಎಪಿಎಂಸಿ; ಶರಣಪ್ಪ ಶಾಖಾಧಿಕಾರಿಗಳು ಜೆಸ್ಕಾಂ ಕೊಟ್ಟೂರು, ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಡಿ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿ.ಮ.ಗುರುಬಸವರಾಜ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ಪಂಚ ಯೋಜನೆಗಳು ಪ್ರಾರಂಭವಾದಾಗಿನಿಂದ ಇಂದಿನವರೆಗೆ ಶಕ್ತಿ ಯೋಜನೆ ಅಡಿ 41,95,357,ಫಲಾನುಭವಿಗಳು ಪ್ರಯಾಣಿಸಿದ್ದು, 14,80,59,706/- ರೂ. ಖರ್ಚಾಗಿರುತ್ತದೆ, ಅನ್ನಭಾಗ್ಯ ಯೋಜನೆಯಲ್ಲಿ 20,228 ಫಲಾನುಭವಿಗಳು, ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 24,799 ಫಲಾನುಭವಿಗಳು, ಗೃಹ ಲಕ್ಷ್ಮಿ ಯೋಜನೆ ಯಡಿ 60,127 ಫಲಾನುಭವಿಗಳಿಗೆ ರೂ.12,02,54,000/- ಪಾವತಿಸಲಾಗಿದೆ; ಯುವ ನಿಧಿ ಯೋಜನೆ ಅಡಿ 8 ವಿದ್ಯಾರ್ಥಿಗಳು (ಎಸ್ಸಿ-1, ಎಸ್ಟಿ-2, ಒಬಿಸಿ-4, ಸಾಮಾನ್ಯ-1) ಫಲಾನುಭವಿಗಳು ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button