ಹುನಗುಂದ ದಿಂದ ಗಜೇಂದ್ರಗಡಕ್ಕೆ ನೂತನ ಬಸ್ ಸಂಚಾರ ಆರಂಭ – ಪ್ರತಿ ನಿತ್ಯ 3 ಟ್ರಿಪ್.
ಹುನಗುಂದ ಅಕ್ಟೋಬರ್.17

ಹುನಗುಂದ ಬಸ್ ಘಟಕದಿಂದ ಹೊಸದಾಗಿ ಹುನಗುಂದ ದಿಂದ ಗಜೇಂದ್ರಗಡ ಬಸ್ಸ ಸಂಚಾರವನ್ನು ಆರಂಭಿಸಲಾಗಿದ್ದು ಹುನಗುಂದ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಪ್ರಯಾಣಿಕರು ಇದರ ಅನುಕೂಲತೆಯನ್ನು ಪಡೆದು ಕೊಳ್ಳಬೇಕೆಂದು ಸಂಚಾರಿ ನಿರೀಕ್ಷಕ ಬಿ.ಎನ್. ಅಡಿಹಾಳ ಹೇಳಿದರು. ಪಟ್ಟಣದ ಸಾರ್ವಜನಿಕರ ಬಹು ದಿನದ ಬೇಡಿಕೆ ಮತ್ತು ಸಾರ್ವಜನಿಕರ ಮತ್ತು ನಾಗರಿಕ ವೇದಿಕೆಯ ಒತ್ತಾಯದ ಮೇರೆಗೆ ಮೇಲಾಧಿಕಾರಿಗಳ ಸೂಚನೆಯಂತೆ ಹುನಗುಂದ ಗಜೇಂದ್ರಗಡ ನೂತನ ಮಾರ್ಗಕ್ಕೆ ಮಂಗಳವಾರ 7.3೦ ಗಂಟೆಗೆ ಬಸ್ಗೆ ಪೂಜೆಯನ್ನು ಸಲ್ಲಿಸಿ ಹೊಸ ಮಾರ್ಗವನ್ನು ಪ್ರಾರಂಭಿಸಲಾಯಿತು.ಪ್ರತಿ ನಿತ್ಯ ಬೆಳಗ್ಗೆ 7.3೦ ಗಂಟೆಗೆ,ಮಧ್ಯಾಹ್ನ 1.3೦ ಗಂಟೆಗೆ ಹಾಗೂ ಸಾಯಂಕಾಲ 4 ಗಂಟೆಗೆ ಪ್ರತಿ ನಿತ್ಯ 3 ಟ್ರಿಫ್ ಸಂಚಾರ ಮಾಡಲಿದೆ ಎಂದರು.ಸಾಮಾಜಿಕ ಹಿರಿಯ ಹೋರಾಟಗಾರ ನಿವೃತ್ತ ನೌಕರ ಜಿ.ಬಿ. ಕಂಬಾಳಿಮಠ ಮಾತನಾಡಿ ಹುನಗುಂದ ಘಟಕದಿಂದ ನೂತನ ಮಾರ್ಗಗಳಿಗೆ ಬಸ್ಸು ಸಂಚಾರ ಆರಂಭಿಸಿರೋದು ನಿಜಕ್ಕೂ ಸಂತಸ ತಂದಿದೆ.ಬೇರೆ ಘಟಕಗಳಿಂದ ನಗರಕ್ಕೆ ಬರುವ ಬಸ್ಸುಗಳು ಕನಿಷ್ಟ ಸಮಯವಾದರೂ ಇಲ್ಲಿ ನಿಲ್ಲಿಸುವ ಸಮಯ ಹೊಂದಬೇಕು.ಬಸ್ಸು ಬಂತು ಅನ್ನುತ್ತಲೆ ಹೋಗಿಯೆ ಬಿಟ್ಟಿರುತ್ತದೆ.ಇದರಿಂದ ಪ್ರಯಾಣಿಕರು ಪರದಾಡುತ್ತಾರೆ.ನಮ್ಮ ಪಟ್ಟಣ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶದ ಜನರು ನಮ್ಮ ಘಟಕದ ಈ ನೂತನ ಬಸ್ಸಿನ ಸೌಲಭ್ಯ ಪಡೆದು ಮತ್ತೊಬ್ಬರಿಗೆ ಈ ಸಾರಿಗೆ ಮಾಹಿತಿ ನೀಡಬೇಕು. ಈ ಘಟಕದಿಂದ ಆರಂಭಿಸಲಾಗಿರುವ ಎಲ್ಲಾ ಮಾರ್ಗಗಳಿಗೂ ಪ್ರಯಾಣಿಕರ ಗರಿಷ್ಟ ಸಂಖ್ಯೆ ಇದ್ದೆ ಇರುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನೂತನ ಮಾರ್ಗಗಳನ್ನು ಸಾರಿಗೆ ಅಧಿಕಾರಿಗಳು ಪ್ರಾರಂಭಿಸಬೇಕು ಎಂದರು.ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಬಸವರಾಜ ಕಮ್ಮಾರ,ದುರಗಪ್ಪ ಹಾದಿಮನಿ,ಮಲ್ಲಿಕಾರ್ಜುನ ಹೊಸಮನಿ, ವೀರೇಶ ಕುರ್ತಕೋಟಿ,ವೀರನಗೌಡ ಪಾಟೀಲ,ರಾಜು ಬಡಿಗೇರ, ಚಂದ್ರು ಗಂಗೂರ,ಬಾಳಪ್ಪ ಕಲಾಲ,ಸಾರಿಗೆ ನಿಯಂತ್ರಕ ಷಣ್ಮುಖಪ್ಪ ಆನೆಹೊಸೂರ, ನಿರ್ವಾಹಕರಾದ ಎಚ್.ಎಚ್. ಜಗ್ಗಲ,ಎಚ್.ಎಚ್. ವಾಲಿಕಾರ,ಮಲ್ಲು ದೇವರೆಡ್ಡಿ ಸೇರಿದಂತೆ ಸಾರಿಗೆ ಸಿಬ್ಬಂದಿ ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ