ಶಿಕ್ಷಣ ಪ್ರೇಮಿ ತಿಪ್ಪೇಸ್ವಾಮಿ ಇನ್ನೂ ನೆನಪು ಮಾತ್ರ.
ಕೂಡ್ಲಿಗಿ ಫೆಬ್ರುವರಿ.3

ಪಟ್ಟಣದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸಮೂಹ ವಿದ್ಯಾಸಂಸ್ಥೆಯ ಸ್ಥಾಪಕ ಕಾನಾ ಮಡುಗು ತಿಪ್ಪೇಸ್ವಾಮಿ(೬೬) ಶುಕ್ರವಾರ ಹೃದಯ ಘಾತದಿಂದ ದೈವಾ ಧೀನರಾಗಿದ್ದಾರೆ. ಮೂಲತಃ ತಾಲೂಕಿನ ಕಾನಾ ಮಡುಗಿನ ಗ್ರಾಮದವರಾದ ಕೆ.ಯಂ. ತಿಪ್ಪೇಸ್ವಾಮಿ ಅಪಾರ ಪರಿಶ್ರಮ ಜೀವಿ. ೧೯೮೨ರಲ್ಲಿ ಮೆಡಿಕಲ್ ಷಾಪ್‌ನೊಂದಿಗೆ ವ್ಯಾಪರೋಧ್ಯಮದಲ್ಲಿ ತೊಡಗಿಸಿಕೊಂಡರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಮಹತ್ವಕಾಂಕ್ಷೆಯಿಂದ ಅಂಗವಿಕಲರಿಗೆ ಶಾಲೆ, ವೃದ್ಧಾಶ್ರಮ, ಡಿ.ಇಡಿ. ಬಿ.ಇಡಿ. ಪ್ಯಾರ ಮೆಡಿಕಲ್, ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಹಗರಿಬೊಮ್ಮನಹಳ್ಳಿ, ಕಾನಮಡುಗು ಮತ್ತು ಕೂಡ್ಲಿಗಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಇದರಿಂದ ಗ್ರಾಮೀಣ ಪ್ರದೇಶವಾದ ತಾಲೂಕು ಕೇಂದ್ರಗಳಾದ ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿಗೆ ಭರಪೂರ ಶಿಕ್ಷಣ ನೀಡುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದು ಇತಿಹಾಸವಾಗಿದೆ. ಇದರಿಂದ ರಾಜಕೀಯ ರಂಗದಲ್ಲೂ ತೊಡಗಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರುವುದರ ಮೂಲಕ ಗುರುತಿಸಿಕೊಂಡರು. ಕಳೆದ ೧೫ವರ್ಷಗಳಿಂದ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾಗುವುದರೊಂದಿಗೆ, ಜಿಲ್ಲಾ ಸಂಘಟಕರಾಗಿ, ಪ್ರಸ್ತುತ ಬಿಜೆಪಿ ಮಂಡಲದ ಜಿಲ್ಲಾ ಉಪಾಧ್ಯಕ್ಷನಾಗಿದ್ದರು. ಪಟ್ಟಣದಲ್ಲಿ ವೈ.ಎಸ್.ಎಸ್. ಆಸ್ಪತ್ರೆಯನ್ನು ತೆರೆಯುವುದರ ಮೂಲಕ ಹಿಂದುಳಿದ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಿದರು. ಇತ್ತಿಚೆಗೆ ಕಟ್ಟಡ ನಿರ್ಮಾಣವಾಗುತ್ತಿರುವ ಆರ್ಯುವೇದ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಪಟ್ಟ ಪರಿಶ್ರಮ ಫಲ ನೀಡುತ್ತಿರುವಾಗಲೇ, ಹೃದಯಾಘಾತದಿಂದ ದೈವಾಧೀನರಾದ ತಿಪ್ಪೇಸ್ವಾಮಿಯವರನ್ನು ನೆನೆದು ಅವರ ಕುಟುಂಬ ಕಣ್ಣೀರ ಕಡಲಲ್ಲಿ ಮುಳುಗಿದೆ. ವೀರಶೈವ ವಿದಿ ವಿಧಾನದಲ್ಲಿ ಶನಿವಾರ ನಡೆದ ಅಂತ್ಯಕ್ರಿಯೆಗೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಷ.ಬ್ರ. ಪ್ರಶಾಂತ್‌ಸಾಗರ ಶಿವಾಚಾರ್ಯಸ್ವಾಮಿಗಳು, ನಂದಿಪುರ ಮಾಹೇಶ್ವರ ಸ್ವಾಮೀಜಿಗಳು, ಹಂಪಸಾಗರ ಶ್ರೀಗಳು, ಕಲ್ಯಾಣ ಸ್ವಾಮಿಗಳು, ಚಾನುಕೋಟಿ ಸಿದ್ದಲಿಂಗ ಶಿವಾಚಾರ್ಯ, ಕಾನಮಡುಗಿನ ಐಮುಡಿ ಶರಣಾರ್ಯರು, ಬ್ಲಾಕ್ ಕಾಂಗ್ರೆಸ್ ಎಂ. ಗುರುಸಿದ್ದನಗೌಡ, ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ, ಹಿರೇಕುಂಬಳಗುಂಟೆ ಟಿ. ಉಮೇಶ್, ಮಾದೇಹಳ್ಳಿ ನಜೀರ್, ಬಿಜೆಪೆಯ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಮಾಜಿ ಸಾರಿಗೆ ಸಚಿವ ಶ್ರೀರಾಮುಲು, ರಾಜ್ಯ ಎಸ್ಟಿ ಮೋರ್ಚದ ಅಧ್ಯಕ್ಷ ಬಂಗಾರು ಹನುಮಂತು. ರಾಜ್ಯ ಸರ್ಕಾರಿ ನೌಕರ ಸಂಘದ ಪಾಲ್ತೂರ್ ಶಿವರಾಜ್, ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ ಸೇರಿದಂತೆ ಸಂಘ ಸಂಸ್ಥೆಗಳ ಅಧ್ಯಕ್ಷರು, ರಾಜಕೀಯ ಧುರೀಣರು ಸೇರಿದಂತೆ ಅಪಾರ ಜನಸ್ತೋಮ ನೆರದಿದ್ದರು. ೩ಕೂಡ್ಲಿಗಿ೧: ಪಟ್ಟಣದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸಮೂಹ ವಿದ್ಯಾಸಂಸ್ಥೆಗಳ ಸ್ಥಾಪಕ ಕೆ.ಯಂ.ತಿಪ್ಪೇಸ್ವಾಮಿ ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ ಶನಿವಾರ ಅವರ ಜಮೀನಿನಲ್ಲಿ ನಡೆಯಿತು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ