2024.ರ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ.

ಕೊಟ್ಟೂರು ಫೆಬ್ರುವರಿ.3

ಕೊಟ್ಟೂರು ಪಟ್ಟಣದ ಗಂಗೋತ್ರಿ ಬಿ ಎಸ್ ಡಬ್ಲ್ಯೂ ಪದವಿ ಮಹಾ ವಿದ್ಯಾಲಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ -2024ರ ಶಿಬಿರವನ್ನು ದಿನಾಂಕ 2.2.2024 ರಿಂದ 8 2024ರ ವರೆಗೆ ಆಯೋಜಿಸಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ಸಂಜೆ ನೆರವೇರಿಸಲಾಯಿತು.ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ಜೆ ಎನ್ ವೀರ ಸಂಗಯ್ಯ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ತಮ್ಮ ಹಿತ ನುಡಿಗಳನ್ನು ಹೇಳಿದರು ಹಿಂದಿನ ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸಿ ಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಜೊತೆಗೆ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಇವುಗಳ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕು ಪ್ರಸ್ತುತ ದಿನ ಮಾನಗಳಲ್ಲಿ ಪ್ರತಿಯೊಬ್ಬ ನಾಗರಿಕರು ಪ್ರಜ್ಞಾವಂತ ರಾಗಬೇಕು ಎಂದು ಹೇಳಿದರು.ನಂತರ ಕಾರ್ಯಕ್ರಮ ಶ್ರೀಯುತ ಚಟ್ರಿಕಿ ಬಸವರಾಜ್ ಅಧ್ಯಕ್ಷರು ಶ್ರೀ ಗುರು ಬಸವೇಶ್ವರ ವಿದ್ಯಾ ಅಭಿವೃದ್ಧಿ ಸಂಸ್ಥೆ ಉದ್ಘಾಟಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ.ಎಸ್. ಶಿವನಗುತ್ತಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಮತ್ತು ಅದರ ಗುರಿ ಉದ್ದೇಶಗಳನ್ನ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ತಮ್ಮ ನುಡಿಗಳನ್ನಾಡಿದರು.ಶ್ರೀಮತಿ ನಿರ್ಮಲ ಶಿವನ ಗುತ್ತಿ ಪ್ರಾಂಶುಪಾಲರು ಭಾಗೀರಥಿ ಪದವಿಪೂರ್ವ ಕಾಲೇಜ್ ಇವರು ಮಾತನಾಡಿ ನಮ್ಮ ವಿದ್ಯಾರ್ಥಿಗಳು ನಿಮ್ಮ ಗ್ರಾಮಕ್ಕೆ ಬಂದಿದ್ದಾರೆ ಅವರನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ ಜೊತೆಗೆ ಸಹಕಾರವನ್ನು ನೀಡಿ ಶಿಬಿರವನ್ನು ಯಶಸ್ವಿ ಗೊಳಿಸಿ ಕೊಡಬೇಕೆಂದು ಹೇಳಿದರು.ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಸಿ.ಬಿ. ರಜತ್. ನಿರ್ದೇಶಕರಾದ ಶ್ರೀಮತಿ ರಚನಾ ರಜತ್, ಊರಿನ ಮುಖಂಡರಾದ ಶಿವಣ್ಣ, ಕಂದಮೂರ್ತಿ, ಶಿಬಿರದ ಸಂಯೋಜರಾದ ಶಶಿಕಿರಣ್ ಕೆ, ಕೊಟ್ರೇಶ್ ಪಿ.ಕೆ.ಎಂ ಉಪಸ್ಥಿದ್ದರುಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಗಂಗೋತ್ರಿ ಬಿ ಎಸ್ ಡಬ್ಲ್ಯೂ ಪದವಿ ಕಾಲೇಜಿನ ಪ್ರಾಚಾರ್ಯರಾದ ಗುರುಬಸವರಾಜ್ ಎ.ಎಂ.ಎಂ, ಆಡಿದರು,ಕಾರ್ಯಕ್ರಮವನ್ನು ಮೇರಿ ರಿಚ್ಮಂಡ್ ತಂಡ ನಿರ್ವಹಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button