ಬಾಳೆ ಹೊನ್ನೂರಿನ ಸುನೀಲ್ ರವರನ್ನು ಎನ್ ಆರ್ ಪುರ ತಾಲೂಕ ಸಂಘಟನಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.
ಚಿಕ್ಕಮಗಳೂರ ಫೆಬ್ರುವರಿ.6

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೋll ಕೃಷ್ಣಪ್ಪ ಸ್ಥಾಪಿತ ರಿ, ನಂ 386/2020–21. ಸಂಘಟನೆಯ ರಾಜ್ಯ ಸಂಚಾಲಕರಾದ ಡಿಆರ್ ಪಾಂಡುರಂಗ ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ, ಚಿಕ್ಕಮಂಗಳೂರು ಜಿಲ್ಲಾ ಸಮಿತಿ ಪುನರ್ ರಚನೆ, ಹಾಗೂ ರಾಜ್ಯ ಸಮಿತಿ ಸಭೆಯನ್ನು ನಡೆಸಲಾಯಿತು. ಈ ಸಭೆಗೆ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್, ಕೊಡಿಗಲ್ ರಮೇಶ್, ಭರಮಪ್ಪ, ಎ ಎಲ್ ಬಾಸ್ಕರ್, ಟಿ ಎನ್ ಗೋವಿಂದಪ್ಪ, ಎಚ್ ಮುನಿಯಪ್ಪ, ಹಾಗೂ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ, ಎಂ ವಿ ಭವಾನಿ, ಪಿ ವಿಜಯಲಕ್ಷ್ಮಿ, ತಿಪ್ಪಮ್ಮ, ಶಿವಮೊಗ್ಗ ಜಿಲ್ಲಾ ಸಂಚಾಲಕಿಯಾದ ಸುನಿತಾ ರಾಜ್, ಉಪಸ್ಥಿತರಿದ್ದು, ಮೈಸೂರು ರಾಜ್ಯ ವಿಭಾಗೀಯ ಸಂಚಾಲಕರಾಗಿ ಕಡೂರು ಕೃಷ್ಣಪ್ಪರವರನ್ನು ಆಯ್ಕೆ ಮಾಡಲಾಯಿತು, ಶಿವಮೊಗ್ಗದ ಸುನಿತಾ ರಾಜರವರನ್ನು ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು,

ಇದೇ ಸಂದರ್ಭದಲ್ಲಿ ಎನ್ನಾರ್ ಪುರದ ವಸಂತ್ ಕುಮಾರ್ ರವರನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಎನ್ ಆರ್ ಪುರದ ಅಬ್ದುಲ್ ರೆಹಮಾನ್, ಸುಬ್ರಮಣ್ಯ, ರಾಜೇಶ್, ಶೃಂಗೇರಿಯ ಶಬರೀಶ್ ಆರ್, ಕಡೂರಿನ ಓಂಕಾರಪ್ಪ, ಮೈಲಾರಪ್ಪ ತರೀಕೆರೆಯ ಗುರುಮೂರ್ತಿ, ಬೇಲೇನಹಳ್ಳಿ ನವೀನ, ಜಿಲ್ಲಾ ಖಜಾಂಚಿಯಾಗಿ ಕಡೂರಿನ ಸಚಿನ್ ರವರನ್ನು ಆಯ್ಕೆ ಮಾಡಲಾಯಿತು. ಕಡೂರು ತಾಲೂಕು ಸಂಚಾಲಕರಾಗಿ ಮೇಲಿನ ಹಳ್ಳಿ ಪ್ರಭು, ತಾಲೂಕು ಸಂಘಟನಾ ಸಂಚಾಲಕರಾಗಿ ಬಾಸುರ್ ಹರೀಶ್, ಸಿದ್ದಾರ್ಥ ನಗರದ ಹನುಮಂತರಾಯ, ಹುಲ್ಲಳ್ಳಿ ಶಿವಣ್ಣ ರವರನ್ನು ಆಯ್ಕೆ ಮಾಡಲಾಯಿತು. ಅಜ್ಜಂಪುರ ತಾಲೂಕು ಸಂಚಾಲಕರಾಗಿ ವೆಂಕಟ ಬೋವಿ ರವರನ್ನು ಆಯ್ಕೆ ಮಾಡಲಾಯಿತು. ಶೃಂಗೇರಿ ಕ್ಷೇತ್ರ ಸಂಚಾಲಕರಾಗಿ ಮಂಜುನಾಥ ಶೆಟ್ಟಿ ಕೊಪ್ಪ ರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಸಂಚಾಲಕರಾದ ಸತೀಶ್, ಚಿತ್ರದುರ್ಗ ಜಿಲ್ಲಾ ಸಂಘಟನಾ ಸಂಚಾಲಕರಾದ ಆನಂದ, ಡಾವಣಗೇರಿ ಜಿಲ್ಲಾ ಸಂಚಾಲಕರಾದ ಶ್ರೀನಿವಾಸ್ ಹರಿಹರ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳಿಗೆ ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ ರವರು ಶುಭ ಹಾರೈಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ