ಕುದುರಿ ಸಾಲವಾಡಗಿಯಲ್ಲಿ ಸಂವಿಧಾನ ಜಾಗೃತಿ ಪೂರ್ವಭಾವಿ ಸಭೆ.
ಕುದುರಿ ಸಾಲವಾಡಗಿ ಫೆಬ್ರುವರಿ.6

ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮ ಪಚಾಯಂತಿಯಲ್ಲಿ. 12.02.2024 ರಂದು ಗ್ರಾಮಕ್ಕೆ ಸಂವಿಧಾನ ಜಾಗೃತಿ ತೇರು ಆಗಮಿಸಲಿದ್ದು ಗ್ರಾಮಸ್ಥರು ಎಲ್ಲರೂ ಸೇರಿ ಸ್ವಾಗತ ಮಾಡಬೇಕೆಂದು N. Y. ಗೋಲಗಂಡ ನೊಡಲ್ ಅಧಿಕಾರಿಗಳು ಹೇಳಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಿ ಎಸ್ ಬಡಿಗೇರ್ ಅವರು ಮಾತನಾಡಿ ಇಡೀ ಗ್ರಾಮಸ್ಥರು ಎಲ್ಲಾರೂ ಸೇರಿ ಸಂವಿಧಾನ ಜಾಗೃತಿ ಸ್ವಾಗತ ಮಾಡಬೇಕು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಎಲ್ಲಾ ಶಾಲಾ ಮಕ್ಕಳು ಎಲ್ಲರೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕುಂಭಮೇಳ ಡೊಳ್ಳು ಕುಣಿತ ಕೋಲಾಟ ಮುಂತಾದ ಶಾಲಾ ಮಕ್ಕಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದ ಎಲ್ಲಾ ಹಿರಿಯರು ನಿಮ್ಮ ಅಭಿಪ್ರಾಯಗಳನ್ನು ಹಾಗೂ ಯಾವ ಕಾರ್ಯಕ್ರಮವನ್ನು ಮಾಡಬೇಕೆಂದು ಎಲ್ಲರ ಅಭಿಪ್ರಾಯಗಳು ನಮಗೆ ಬಹಳ ಮುಖ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರ ಅಭಿಪ್ರಾಯಗಳನ್ನು ತೆಗೆದು ಕೊಂಡು ಈ ಕಾರ್ಯಕ್ರಮವನ್ನು ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ ಈ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದು ಕುದುರಿ ಸಾಲವಾಡಗಿಯ ಗ್ರಾಮ ಪಂಚಾಯತಿಯ ಬಿ ಎಸ್ ಬಡಿಗೇರ್ ಅಭಿವೃದ್ಧಿ ಅಧಿಕಾರಿಗಳು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಕುಂತಲಾ ಲಗಳಿ. ಉಪಾಧ್ಯಕ್ಷರಾದ ಮುತ್ತಪ್ಪ ಇಂಗಳಗಿ. ಗ್ರಾಮದ ಹಿರಿಯರಾದ ಸಚಿನ್ ಗೌಡ ಪಾಟೀಲ್, ಅನಿಲ್ ಗೌಡ ಪಾಟೀಲ, ಗುರುನಗೌಡ ಪಾಟೀಲ್, ಮಲ್ಲಣ್ಣ ಅಪ್ಪಣ್ಣನವರ್, ಆದಿಮಸಾ ಡವಳಗಿ ಈಶ್ವರಪ್ಪ ಉಪ್ಪಾರ್ ದುರ್ಗಪ್ಪ ಕಳ್ಳಿಮನಿ ಕಾಮಣ್ಣ ಭಜಂತ್ರಿ ಗುರುರಾಜ್ ಗುಡಿಮನಿ ಶಂಕ್ರಪ್ಪ ಮಾದರ್ ಮುದುಕಪ್ಪ ಕಳ್ಳಿಮನಿ ಹಾಗೂ ಗ್ರಾಮದ ಹಿರಿಯರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಶಾಲಾ ಶಿಕ್ಷಕರು ಅಪೂರ್ವ ಭಾವಿ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ:-ಮಹಾಂತೇಶ.ಹಿದಿಮನಿ