ಕೆಚಮಲ್ಲನಹಳ್ಳಿ ಪ್ರೌಢ ಶಾಲೆಯಲ್ಲಿ ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.
ಕೆಂಚಮಲ್ಲನಹಳ್ಳಿ ಫೆಬ್ರುವರಿ.8

ಕಾನ ಹೊಸಹಳ್ಳಿ ಹೋಬಳಿಗೆ ಸಂಬಂಧಿಸಿದ ಆಲೂರು ಗ್ರಾ.ಪಂ ವ್ಯಾಪ್ತಿಯ ಕೆಂಚಮಲ್ಲನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ಎಸ್ಡಿಎಂಸಿ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಗುರುಮೂರ್ತಿ, ಉಪಾಧ್ಯಕ್ಷರಾಗಿ ದಾದವಾಲಿ ಆಯ್ಕೆಯಾಗಿದ್ದಾರೆ ಎಂದು ಶಾಲೆ ಮುಖ್ಯಗುರುಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಎಲ್ಲಾರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಉಮಾದೇವಿ ಅಂಜಿನಪ್ಪ, ಗ್ರಾ.ಪಂ ಸದಸ್ಯರು ಶಿವಕುಮಾರ, ಕೆ ಎಂ ಶಂಕ್ರಪ್ಪ, ಪೆನ್ನಪ್ಪ, ಮುಖ್ಯ ಶಿಕ್ಷಕರು ಕೊಟ್ರೇಶ್, ಎಸ್ಡಿಎಂಸಿ ಸದಸ್ಯರಾದ ನಾಗೇಶ್, ಜೋತಮ್ಮ ಜಾತಪ್ಪ, ಸುಮಲತಾ, ಮಾಂತೇಶ್, ಅಂಜಪ್ಪ, ಗಾತ್ರಪ್ಪ, ಮಮತಾಜ್ ಹಾಗೂ ಊರಿನ ಯುವಕರು ಶಾಂತ, ಓಬಳೇಶ್, ದುರುಗೇಶ್ ಉಪಸಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ