“ಭಾರತ ಮಾತೆಯ ಕುಡಿಗಳು ಜಗವ ಬೆಳಗುವ ನಕ್ಷತ್ರಗಳು”…..

ಕರುನಾಡ ಜನ್ಮಧಾತೆ ಭಾರತಾಂಬೆ
ಪುಣ್ಯ ಪುರುಷರ ನಾಡು
ಬುದ್ಧ ಬಸವ ಅಂಬೇಡ್ಕರ್ ಸಮಾನತೆಯ
ಬೀಡು
ವಿವೇಕ ರವೀಂದ್ರನಾಥ ಪಂಪ ಕುವೇಂಪು
ಬೇಂದ್ರೆ
ವಿಶ್ವ ಮಾನವೀಯತೆಯ ಗೂಡು
ಕಿತ್ತೂರ ಚೆನ್ನಮ್ಮ ಸಂಗೊಳ್ಳಿ ರಾಯಣ್ಣ
ಶ್ರೀಕೃಷ್ಣ ದೇವರಾಯರು ಮೈಸೂರ ಒಡೆಯರ
ಆದರ್ಶತನವು ಜಗದಿ ಅಮರವು
ಡಾ.ಶಿವಕುಮಾರ ಮಹಾಸ್ವಾಮಿಜೀ
ಪಂಡಿತ ಪುಟ್ಟರಾಜ ಗವಾಯಿ
ಶ್ರೀಸಿದ್ಧೇಶ್ವರರು ಆದ್ಯಾತ್ಮಿಕತೆಯು
ಜಗದ ದೇವರ ಗುಡಿಯಲಿ
ಕನಕದಾಸ ಪುರಂದರ ಸಂತ ಕಬೀರರ
ಕಾಳಿದಾಸ
ಸರ್ವಜ್ಞ ಜನಮನದಿ ನಿತ್ಯ ಸತ್ಯ ಸುವಾಣಿ
ವಿವಿಧತೆಯಲಿ ಏಕತೆಯ
ಸರ್ವಜನಾಂಗದ ಬೀಡು
ಬೇಲೂರು ಹಳೇಬೀಡು ಬದಾಮಿ
ಪಟ್ಟದಕಲ್ಲು ಹಂಪಿಯ ಐತಿಹಾಸಿಕ
ಚಿರಕಾಲ ಮೆರಗು
ಕರುನಾಡು ಚಿನ್ನ ಶ್ರೀಗಂಧದ ಬೀಡು ಕೃಷಿ
ತೋಟಗಾರಿಕೆ
ಜ್ಞಾನ ತಂತ್ರಜ್ಞಾನ ವಿಜ್ಞಾನ ವಿಶ್ವದಿ
ಮಾದರಿತನದ ಹಿರಿಮೆ
ಪ್ರಜಾಪ್ರಭುತ್ವದ ಸಂವಿಧಾನ ರಾಜನೀತಿ
ಜಗದ ಬೆಳಗು
ಭಾರತ ಮಾತೆಯ ಕುಡಿಗಳು
ಜಗವ ಬೆಳಗುವ ನಕ್ಷತ್ರಗಳು
ಜೈಹಿಂದ ಸದಾ ಘೋಷ ಮೊಳಗುವುದು
ಭಾರತೀಯರ ಮನ ಮನದಲಿ
ವಂದೇ ಮಾತರಂ.

-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ