ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಲ್ಲಿ – ಕರ್ನಾಟಕ ರಾಜ್ಯೋತ್ಸವ ಆಚರಣೆ.
ಹುಲ್ಲೂರು ನ.02

ಮುದ್ದೇಬಿಹಾಳ ತಾಲೂಕಿನ ಹುಲ್ಲೂರಿನ SND NATIONAL PUBLIC ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕನ್ನಡದ ಧ್ವಜಾರೋಹಣ ಮಾಡುವುದ್ರ ಮೂಲಕ ಆಚರಿಸಲಾಯಿತು. ಎಲ್ಲಾ ಶಿಕ್ಷಕರು ಇಳಕಲ್ ಸೀರೆಯಲ್ಲಿ ಮಿಂಚಿದರು. ಶಾಲೆಯಲ್ಲಿ ಪೂಜೆ ಸಲ್ಲಿಸಿ ನಂತರ ಮುದ್ದೇಬಿಹಾಳ ತಾಲೂಕಾ ಆಡಳಿತದ ವತಿಯಿಂದ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇದೆ ಶಾಲೆಯ ವಿದ್ಯಾರ್ಥಿಯನ್ನು ಅಕ್ಕ ಮಹಾದೇವಿ ಸ್ಥಬ್ಧ ಚಿತ್ರ ಮಾಡಿ ಮೆರವಣಿಗೆ ಮಾಡಲಾಯಿತು. ತಾಲೂಕಾ ವತಿಯಿಂದ ಕೊಡ ಮಾಡುವ ಬಹುಮಾನದಲ್ಲಿ ದ್ವಿತೀಯ ಸ್ಥಾನ ಪಡೆದು ಬಹುಮಾನ ಪಡೆದು ಕೊಂಡರು. ಪ್ರತಿಯೊಂದು ಕಾರ್ಯಕ್ರಮಗಳನ್ನು ಸಹ ವೈವಿಧ್ಯಮಯವಾಗಿ ಆಚರಿಸುತ್ತಾ ಗ್ರಾಮೀಣ ಜನರ ಗಮನ ಸೆಳೆದ ಏಕೈಕ ಶಾಲೆ ಎಂದು ಸಂಸ್ಥೆ ಅಧ್ಯಕ್ಷರಾದ ಶ್ರೀ ಎಮ್.ಎಸ್ ಕೊಪ್ಪ ಅವರು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ರೇಖಾ.ಎಮ್ ಎಸ್. ರತ್ನಾ, ಶಿಲ್ಪಾ, ರೇಖಾ ಗೌಡರ್, ಐಶ್ವರ್ಯ, ಭಾಗ್ಯಶ್ರೀ, ಇತರ ಎಲ್ಲಾ ಸಿಬ್ಬಂದಿ ವರ್ಗ ಇದ್ದರು ಎಚ್ ಆರ್ ಬಾಗಲಕೋಟ ನಿರೂಪಿಸಿದರು. ದಶರಥ ಸ್ವಾಗತಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

