ಚಿರತಗುಂಡು ಮಾರಮ್ಮನ ಜಾತ್ರೆ – ಮಾಜಿ ಸಚಿವ ಶ್ರೀರಾಮುಲು ಅವರಿಂದ ದೇವಿ ದರ್ಶನ.
ಕಾನಾ ಹೊಸಹಳ್ಳಿ ಫೆಬ್ರುವರಿ.9

ಕೂಡ್ಲಿಗಿ ತಾಲೂಕಿನ ಚಿರತಗುಂಡು ಗ್ರಾಮದ ಶ್ರೀ ಮಾರಮ್ಮ ದೇವಿಯ ಜಾತ್ರೆ ಯಶಸ್ಸಿಯಾಗಿ ನಡೆಯುತ್ತಿದ್ದು, ಬಿಜೆಪಿ ಮಾಜಿ ಸಚಿವರು ಶ್ರೀರಾಮುಲು ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ನಂತರ ಗ್ರಾಮದ ಹಲವಾರು ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದ ಅವರು, ಪ್ರತಿ ವರ್ಷವೂ ಸಹ ಶ್ರೀ ಮಾರಮ್ಮನ ದೇವಿಯ ಜಾತ್ರೆ ವೈಭವದಿಂದ ನಡೆಯುತ್ತಿದ್ದು, ಈ ಜಾತ್ರೆಗೆ ಸುತ್ತಮುತ್ತ ಗ್ರಾಮದಿಂದ ಸಾವಿರಾರು ಸಂಖ್ಯೆಯ ಭಕ್ತರು ಸೇರ್ಪಡೆಯಾಗಿ ದೇವಿ ಜಾತ್ರೆಯನ್ನು ಯಶಸ್ಸಿಯಾಗಿ, ಸಂಪ್ರದಾಯ ಬದ್ದವಾಗಿ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.
ಗ್ರಾಮೀಣ ಸೊಗಡು ಕೋಲಾಟದಲ್ಲಿ ಭಾಗವಹಿಸಿ ಅವರೊಂದಿಗೆ ಕೋಲಾಟ ಆಡಿದರು. ನಮ್ಮ ಸಂಸ್ಕತಿ ಮತ್ತು ಸಂಸ್ಕಾರವನ್ನು ಕಾಣಲು ನಾವು ಇಂದು ಗ್ರಾಮೀಣ ಭಾಗಗಳನ್ನು ಆಶ್ರಯಿಸ ಬೇಕಿದೆ. ಕಾರಣ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಎಲ್ಲಾ ಜಾತ್ರೆ, ಉತ್ಸವ ಕಾರ್ಯಕ್ರಮಗಳು ಮೂಲ ಸಂಪ್ರದಾಯಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತವೆ. ಇಂದಿಗೂ ಗ್ರಾಮದಲ್ಲಿ ನಡೆಯುವ ಬಹುತೇಕ ಎಲ್ಲಾ ಕಾರ್ಯಕ್ರಮಗಳು ಅರ್ಥ ಪೂರ್ಣವಾಗಿವೆ. ನಾನು ಸಹ ದೇವಿಯ ದರ್ಶನ ಪಡೆದು ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಲೋಕೇಶ್ ವಿ ನಾಯಕ, ಗುಂಡುಮುಣುಗು ಪ್ರಕಾಶ್, ಚಂದ್ರಮೌಳಿ, ಸುದರ್ಶನ್, ಪಾಪೇಶ್, ಗುಡೇಕೋಟೆ ಬಸವರಾಜ, ಅಪೇನಹಳ್ಳಿ ವೆಂಕಟೇಶ್, ಧನಂಜಯ್ ಗೌಡ, ಚಿರತಗುಂಡು ತಿಪ್ಪಕ್ಕ ತಿಪ್ಪೇಸ್ವಾಮಿ, ಹೊಸಹಳ್ಳಿ ವೆಂಕಟೇಶ್, ಪೂಜಾರಹಳ್ಳಿ ಮಂಜುನಾಥ, ಹೂಡೇಂ ಸುರೇಶ್ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು. ಪಾಲ್ಗೊಂಡಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ