ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಅಭಿಯಾನ.
ಪಟ್ರೆಹಳ್ಳಿ ಮಾರ್ಚ್.6

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ಇಂದು ಪೋಷಕರ ಹಾಗೂ ಹಳೆ ವಿದ್ಯಾರ್ಥಿಗಳ ಸಭೆಯನ್ನು ಉದ್ಘಾಟಿಸಿ, ಎಸ್. ಡಿ.ಎಂ.ಸಿ ಅಧ್ಯಕರು ಆದ ಶ್ರೀಯುತ ವೈ.ಮಹೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಎಂಬ ಭೂತಕ್ಕೆ ಸಿಲುಕಿ ತಮ್ಮ ಮುಂದಿನ ಭವಿಷ್ಯವನ್ನು ಹಾಳು ಮಾಡಿ ಕೊಳ್ಳುತ್ತಿದ್ದಾರೆ ಹಾಗಾಗಿ ಮನೆಯಲ್ಲಿ ಪೋಷಕರು ವಿಶೇಷವಾಗಿ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದು ತಿಳಿಸಿದರು.

ಈ ಸಭೆಯಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸಲಾಯಿತು ನಂತರ ಶಾಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಜಾತ ರವರು, ಸಹ ಶಿಕ್ಷಕರಾದ ರೇಣುಕಮ್ಮ, ಗೀತಾ, ಉಷಾರಾಣಿ ,ಹೇಮಲತಾ, ರಾಧ, ಎಸ್. ಡಿ.ಎಂ.ಸಿ ಉಪಾಧ್ಯಕ್ಷರು ಆದ ಶ್ರೀಮತಿ ಕವಿತಾ ಬಾಯಿ ಸದಸ್ಯರಾದ ಕೃಷ್ಣ ನಾಯ್ಕ,ನಾಗರಾಜ್,ಶಕುಂತಲಾ, ಮಹಾಂತೇಶ್, ಸಿದ್ದಮ್ಮ ,ರೆಹಮತ್,ಗ್ರಾಮ ಪಂಚಾಯಿತಿ ಸದಸ್ಯರು ಆದ ಶ್ರೀಮತಿ ರತ್ನಮ್ಮ,ಹಾಗೂ ಎಲ್ಲ ಪೋಷಕರು,ಎಲ್ಲ ಹಳೇ ವಿದ್ಯಾರ್ಥಿಗಳು,ಮತ್ತು ಊರಿನ ಸಮಸ್ತ ನಾಗರೀಕರು ಹಾಗೂ ಯುವಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ:ಶಿವಮೂರ್ತಿ.ಚಳ್ಳಕೆರೆ