ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು – ಪೋಷಕರ ಮುಖ್ಯ ಜವಾಬ್ದಾರಿ.
ಚಳ್ಳಕೆರೆ ಡಿ.30

ಕೋಡಿಹಳ್ಳಿ.ಟಿ.ಶಿವಮೂರ್ತಿ ಜಿಲ್ಲಾಧ್ಯಕ್ಷರು ದಲಿತ ಸಾಹಿತ್ಯ ಪರಿಷತ್, ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯಲ್ಲಿ ಇತ್ತೀಚಿಗೆ ಮಕ್ಕಳು ಒಂದಲ್ಲ ಒಂದು ರೀತಿಯ ಕಾರಣಗಳಿಂದ ಜೀವನದಲ್ಲಿ ತಮ್ಮ ಭವಿಷ್ಯದಲ್ಲಿ ಬಾಳಿ ಬದುಕಿ ತಂದೆ ತಾಯಿಗಳನ್ನು ಸಾಕುವ ಮುನ್ನವೇ ಮಕ್ಕಳು ಸಾವನ್ನಪ್ಪುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು.ಈಗಿನ ಕಾಲದಲ್ಲಿ ನಮ್ಮ ಆಹಾರ ಸೇವನೆ ಮತ್ತು ಪದ್ಧತಿಯಲ್ಲಿ ಮಕ್ಕಳು ಪಡೆಯುವದೆಂದರೆ ಏಳು ಜನ್ಮಗಳ ತಪಸ್ಸು ಮಾಡಿದ ಹಾಗೆ ಇರುತ್ತದೆ. ಈಗ ಆರತಿಗೆ ಒಬ್ಬಳು, ಕೀರ್ತಿಗೆ ಒಬ್ಬನು ಎಂಬಂತೆ ಎರಡು ಮಕ್ಕಳಿಗೆ ಸೀಮಿತವಾದ ಕುಟುಂಬಗಳು ಸಮಾಜದಲ್ಲಿ ಅತೀ ಹೆಚ್ಚು ಇರುವುದನ್ನು ನಾವು ಕಾಣಬಹುದು, ಈಗ ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ನಂತರ ಮತ್ತೆ ಮಕ್ಕಳು ಬೇಕೆಂದರೆ ಅದು ಸಾಧ್ಯವೇ ಇಲ್ಲ ಹಾಗಾಗಿ ಕಷ್ಟ ಕಾರ್ಪಣ್ಯಗಳನ್ನು ನಿಭಾಯಿಸುವುದು, ವಯೋವೃದ್ಧ ಸಮಯದಲ್ಲಿ ಲಾಲನೆ ಪಾಲನೆ ಪೋಷಣೆ ಮಾಡುವವರು ಇಲ್ಲದೇ ಅನಾಥ ಆಶ್ರಮ, ವೃದ್ಧಾಶ್ರಮಗಳ ಮೊರೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ ಹಾಗಾಗಿ ಮಕ್ಕಳನ್ನು ಅತೀ ಜಾಗರೊಕತೆ ಯಿಂದ ಸುರಕ್ಷತೆ ಇಂದ ಬೆಳೆಸುವುದು ಪ್ರತಿಯೊಬ್ಬ ತಂದೆ ತಾಯಿಗಳ ಪ್ರಮುಖ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ ಅಲ್ಲವೇ.ಇತ್ತೀಚಿಗೆ ಎರಡು ತಿಂಗಳ ಹಿಂದೆಯಷ್ಟೇ ಮಾನಸಿಕ ಖಿನ್ನತೆಗೆ ಒಳಗಾಗಿ ಬೇಡ ರೆಡ್ಡಿ ಹಳ್ಳಿ ಗ್ರಾಮದ ಯುವಕ ಮಹಾಲಿಂಗ ನೇಣಿಗೆ ಶರಣಾದ ಮೃತ ದುರ್ದೈವಿ, ನಂತರ ಕೋಡಿಹಳ್ಳಿ ಗ್ರಾಮದಲ್ಲಿ ಮಾನಸಿಕ ಒತ್ತಡಕ್ಕೆ ಮಣಿದು ತಿಪ್ಪೇಶ್ ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ, ಇದೇ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿ ಬೋರ್ ವೆಲ್ ಹತ್ತಿರ ವಿದ್ಯುತ್ ಪಸರಿಸಿ ಸ್ಪರ್ಶದಿಂದ ಲೋಕೇಶ್ ಎಂಬ ಯುವಕ ಮೃತ ಪಟ್ಟಿರುತ್ತಾನೆ, ತಳಕಿನ ಲಂಬಾಣಿ ಹಟ್ಟಿಯಲ್ಲಿ ಮತ್ತೋರ್ವ ಯುವಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದ, ನಂತರ ನಾಯಕನ ಹಟ್ಟಿ ಚಿಕ್ಕ ಕೆರೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ದುರ್ದೈವಿ, ಈ ಘಟನೆ ಮಾಸುವ ಮುನ್ನವೇ ದಿನಾಂಕ : 28/12/2024 ರಂದು ಹೊಸಹಳ್ಳಿ ಗ್ರಾಮದ ಯುವಕ ತಿಪ್ಪಯ್ಯನ ಕೋಟೆ ಕೆರೆಯಲ್ಲಿ ಈಜಲು ಹಾಗೂ ಮೀನು ಹಿಡಿಯಲು ಸ್ನೇಹಿತರ ಜೊತೆ ಹೋಗಿ ಶಿವಕುಮಾರ್ ಎಂಬ 20 ವರ್ಷದ ವಿದ್ಯಾರ್ಥಿ ಮೃತ ಪಟ್ಟಿರುತ್ತಾನೆ ಇವರ ಕುಟುಂಬ ಮತ್ತು ತಂದೆ ತಾಯಿಗಳ ಆಕ್ರಂದನ ಮುಗಿಲು ಮುಟ್ಟಿದೆ ಎಂದರೆ ತಪ್ಪಾಗಲಾರದು.ಈ ಘಟನೆಗಳಿಗೆ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಈ ಬಗ್ಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಆದ ಶ್ರೀ ಭಾರತಿ ಭಣಕಾರ್, ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆದ ಶ್ರೀ ಸವಿತಾ ಮೇಡಂ ನವರು ಮೃತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರ ದಿಂದ ಸಿಗುವ ಪರಿಹಾರವನ್ನು ಪೋಷಕರಿಗೆ ತಲುಪಿಸಬೇಕು, ಅಲ್ಲದೆ ಗ್ರಾಮೀಣ ಯುವ ಜನತೆಗೆ ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸುವ ಸುರಕ್ಷತಾ ಸಪ್ತಾಹ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಜೊತೆಗೆ ಸ್ವಾಸ್ತ್ಯ ಜೀವನ ನಡೆಸಲು ಅನುವು ಮಾಡಿ ಕೊಡಬೇಕು ಎಂದು ಚಿತ್ರದುರ್ಗ ಜಿಲ್ಲೆಯ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಆದ ಶ್ರೀಯುತ ಕೋಡಿಹಳ್ಳಿ. ಟಿ ಶಿವಮೂರ್ತಿ ಆಗ್ರಹಿಸಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸದ ಹಾಗೆ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ವರದಿ : ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ