ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳೋಣ ಎಂದ – ಹನುಮಂತಪ್ಪ.ಟಿ.ವಕೀಲರು.

ಕೊಟ್ಟೂರು ಫೆಬ್ರುವರಿ.11

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಕೊಟ್ಟೂರಿನಲ್ಲಿ ಶನಿವಾರ ಫೆಬ್ರವರಿ 10 ರಂದು ತಾಲೂಕು ಆಡಳಿತವತಿಯಿಂದ ಕಾಯಕ ಶರಣರ ದಿನಾಚರಣೆ ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಂದು ಶ್ರೇಷ್ಠ ಯುಗದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ಎಲ್ಲಾ ಸಮುದಾಯ ಜಾತಿ ಜನಾಂಗದ ಶಿವ ಶರಣರು ತಮ್ಮ ಕಾಯಕವನ್ನೇ ದೇವರೆಂದು ನಂಬಿ ಕೆಲಸದ ಜೊತೆ ಜೊತೆಗೆ ತಮ್ಮ ಸಂಸ್ಕೃತಿಯನ್ನು ಜ್ಞಾನವನ್ನು ವಚನಗಳ ಮೂಲಕ ಮುಂದಿನ ಪೀಳಿಗೆಗಳಿಗೆ ಬಿಟ್ಟು ಕೊಟ್ಟು ಹೋಗಿದ್ದಾರೆ. ಅಂತ ವಚನಗಳು 12ನೇ ಶತಮಾನದಲ್ಲಿ ಏನೆಲ್ಲಾ ಸೃಷ್ಟಿಯಾಗಿತ್ತು ಆ ಸಾಮಾಜಿಕ ಪರಿಸರ ನಮ್ಮೆಲ್ಲರಿಗೂ ಮಾದರಿ ಎಂದು ಅಮರೇಶ್ ಜಿ ಕೆ ತಹಸಿಲ್ದಾರರು ಹೇಳಿದರು. ತದನಂತರ ಶರಣರು ತಮ್ಮ ತಮ್ಮ ಕಾಯಕದ ಹಾಗೂ ಜ್ಞಾನದ ಮೂಲಕ ಚಿಂತನೆ ಮಾಡುತ್ತಾ ಅಲ್ಲಮಪ್ರಭು ನೇತೃತ್ವದಲ್ಲಿ ಎಲ್ಲಾ ಸರ್ವಜಾತಿ ಸರ್ವಧರ್ಮೀಯರು ಸೇರಿ ಇದರಲ್ಲಿ ಭಾಗವಹಿಸಿ ಸಮಾಜವನ್ನು ಬದಲಾವಣೆ ಮಾಡಬೇಕೆಂದು ಅಕ್ಷರ ಬಿತ್ತಿಸಿದರು ಅವುಗಳೇ ವಚನಗಳಾಗಿ ಇವತ್ತು ವಚನ ಸಾಹಿತ್ಯದಲ್ಲಿ ಅತ್ಯಂತ ಅಮೂಲ್ಯವಾದ ತತ್ವಗಳು ಅಳವಡಿಕೆ ಇದೆ ಅದೇ ತತ್ವಗಳ ಮಾದರಿಯಲ್ಲಿ ನಮ್ಮ ಭಾರತದ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಸಮಾಜ ಮತ್ತು ಜಾತ್ಯತೀತತೆ ಪ್ರಜಾಸತ್ತಾತ್ಮಕ ಮತ್ತು ಭ್ರಾತೃತ್ವ ಎಂಬ ಪದಗಳನ್ನು ತಂದಿದ್ದೇವೆ ಎಂದರೆ 12.ನೇ ಶತಮಾನದಲ್ಲಿ ನಮ್ಮ ಶರಣರು ನೀಡಿದಂತಹ ತತ್ವಗಳು ನಮ್ಮ ಸಂವಿಧಾನದಲ್ಲಿ ಅಳವಡಿಕೆಯಾಗಿವೆ ಕಾಯಕ ಶರಣರನ್ನು ದಲಿತ ವಚನಕಾರರು ಎಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಆದರೆ ನಮ್ಮ ಸರ್ಕಾರ ಈ ಶರಣರನ್ನು ಕೇವಲ ಒಂದು ಜಾತಿಗೆ ಸೀಮಿತ ವಾಗಬಾರದೆಂದು ಇವರೆಲ್ಲರೂ ಒಂದು ಜ್ಞಾನವನ್ನು ಕೊಟ್ಟಿದ್ದಾರೆ. ಜ್ಞಾನವನ್ನು ಹಂಚಲಿಕ್ಕೆ ಎಲ್ಲಾ ರೀತಿಯ ಸಮಾನತೆ ಯಾಗಲಿ ಎಂದು ಈ ಎಲ್ಲಾ ಕಾಯಕ ಶರಣರ ತತ್ವಗಳನ್ನು ವಚನಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿ ಕೊಳ್ಳೋಣ ಎಂದು ವಕೀಲರಾದ ಹನುಮಂತಪ್ಪನವರು ನುಡಿದರು.ಈ ಸಂದರ್ಭದಲ್ಲಿ ಹಾಲಸ್ವಾಮಿ ಕಂದಾಯ ನಿರೀಕ್ಷಕರು ಅಜ್ಜಪ್ಪ ಸಿಆರ್‌ಪಿ ಕೊಲ್ಲಾರಪ್ಪ ಜಿ ಕೊಟ್ರೇಶ್ ಭರ್ಮಪ್ಪ ಮತ್ತು ತಾಲೂಕು ಆಡಳಿತದ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button