‌ದಲಿತರಿಗೆ ಕ್ಷೌರ ನಿರಾಕರಣೆ, ಉಪ ವಿಭಾಗಾಧಿಕಾರಿಗಳಿಗೆ ಆರ್.ಪಿ.ಆಯ್ (ಅಟವಲೆ) ಸಂಘಟನೆಯಿಂದ ಮನವಿ.

ಇಂಡಿ ಫೆಬ್ರುವರಿ. 12

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಆರ್.ಎಸ್.ಬಿಕೆ ಗ್ರಾಮದಲ್ಲಿ ಹಲವಾರು ವರ್ಷಗಳಿಂದಲೂ ದಲಿತರಿಗೆ ಕ್ಷೌರ ಅಂಗಡಿ ಮಾಲಿಕರಾದ 1.ಶಿವಲಿಂಗ ಮಳಸಿದ್ಧ ನಾವಿ. 2.ಅಣ್ಣಪ್ಪ ಮೇತ್ರಿ. 3.ಅಶೋಕ ಮೇತ್ರಿ ಸದರಿಯವರು ಅದೇ ಗ್ರಾಮದ ನಿವಾಸಿಗಳಾಗಿದ್ದು.ಇವರು ತಮ್ಮ ಕ್ಷೌರಿಕ ಮಾಡುವ ವೃತ್ತಿಯಲ್ಲಿ ಕಾಯಕ ಮಾಡಿ ಕೊಂಡಿದ್ದು, ಕಾಯಕದಲ್ಲಿ ಇವರು ದೇಶದ ಕಾನೂನು ಗಾಳಿಗೆ ತೂರಿ, ಕೇವಲ ದಲಿತರನ್ನು ಹೊರತು ಪಡಿಸಿ ,ಸವಣಿ೯ಯರಿಗೆ ಮಾತ್ರ ಕ್ಷೌರ ಮಾಡುತ್ತಾರೆ.ಒಂದು ವೇಳೆ ದಲಿತರು ಕ್ಷೌರ ಮಾಡಿಸಿ ಕೊಳ್ಳಲು ಕ್ಷೌರ ಅಂಗಡಿ ಮಾಲೀಕರಿಗೆ ಕೇಳಿದರೆ ಅವರು ನೇರವಾಗಿ ಹೇಳುವುದೇನಂದರೆ ದಲಿತರಿಗೆ ನಾವು ಕ್ಷೌರ ಮಾಡುವುದಿಲ್ಲ.

ನೀವು ಈ ವಿಷಯವಾಗಿ ಅಪ್ಪಿ-ತಪ್ಪಿಯೂ ನಮ್ಮ ಹತ್ತಿರ ಬರಬೇಡಿ ಎಂದು ಹೇಳುತ್ತಾರೆ.ಇದರಿಂದ ನೊಂದ ದಲಿತರು ಆರ್ ಪಿ ಐ (ಅಟವಲೆ)ಸಂಘಟನೆಯ ಸದಸ್ಯರ ಮುಂದೆ ತಮ್ಮ ನೋವನ್ನು ಹೇಳಿದಾಗ , ಸದಸ್ಯರು ಸಮಿತಿಯ ಸಭೆಯಲ್ಲಿ ಸುಧೀಘ೯ವಾಗಿ ಚಚೆ೯ ಮಾಡಿ , ಕಾನೂನು ನಿಯಮದಡಿ ತಪ್ಪಿತಸ್ಥ ಕ್ಷೌರಿಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾದ ದಲಿತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮಾನ್ಯ ಉಪ ವಿಭಾಗಾಧಿಕಾರಿಗಳು ಇಂಡಿ ಇವರಿಗೆ ಆರ್ ಪಿ ಐ ಸಂಘಟನೆ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆರ್ ಪಿ ಐ (ಅಟವಲೆ)ಬೆಳಗಾವಿ ವಿಭಾಗ, ಹಾಗೂ ಇಂಡಿ ತಾಲೂಕಾ ಅಧ್ಯಕ್ಷರಾದ ನಾಗೇಶ ತಳಕೇರಿ. ಬಾಬುರಾಯ ಕಾಂಬಳೆ.ಶ್ರೀ ವಿರೂಪಾಕ್ಷಿ ಕಾಳೆ.ಆಕಾಶ ಮೇಲೀನಕೇರಿ.ಮರೇಪ್ಪ ಎಂಟಮನ.ವಿನೋದ ಹೊಸಮನಿ.ಸಂತೋಷ ಕಟ್ಟಿಮನಿ.ಇಮ್ರಾನ ವನಮಿಹಾಳ.ಸಿದ್ರಾಮ ಹೊಸಮನಿ.ರಾಕೇಶ ದೊಡಮನಿ.ಇತರರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button