ದೇವರ ಹಿಪ್ಪರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲ್ಯೂ ಆಗಿ ಆಯ್ಕೆ.
ದೇವರ ಹಿಪ್ಪರಗಿ ಫೆಬ್ರುವರಿ.12

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಕುಮಾರ ವಿಕಾಸ ವಿವೇಕಾನಂದ ಪಾಟೀಲ ಹಾಗೂ ಕಾರ್ತಿಕ ಗೋವಿಂದ ರಾಠೋಡ ಇವರು ಇದೇ ತಿಂಗಳ ಅಂತ್ಯದಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕ್ರಿಕೆಟ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ತಂಡಕ್ಕೆ ಯುನಿವರ್ಸಿಟಿ ಬ್ಲ್ಯೂ ಆಗಿ ಆಯ್ಕೆಯಾಗಿದ್ದಾರೆ. ದೇವರ ಹಿಪ್ಪರಗಿಯ ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವ್ಹಿ.ಕೆ.ಪಾಟೀಲ ಇವರ ಹಿರಿಯ ಮಗನಾದ ವಿಕಾಸ ಹಾಗೂ ಹಿಟ್ಟಿನಹಳ್ಳಿ ತಾಂಡಾದ ಕಾರ್ತಿಕ ರಾಠೋಡ ವಿಜಯಪುರದ ಕೋಹಿನೂರ ಕ್ರಿಕೆಟ ಕೊಚಿಂಗ ಅಕಾಡೆಮಿಯಲ್ಲಿ ಶ್ರೀ ಸಲೀಮ ಬೇಪಾರಿ ಹಾಗೂ ಶ್ರೀ ಚಾಂದವಸೀಮ ಇವರಲ್ಲಿ ತರಬೇತಿ ಪಡೆಯುತ್ತಿದ್ದು, ಸದ್ಯಕ್ಕೆ ಬೆಂಗಳೂರಿನ ಕೆ.ಎಸ್.ಸಿ.ಎಯ ದ್ವಿತೀಯ ಲೀಗನಲ್ಲಿ ಆಡುತ್ತಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಅಶೋಕಕುಮಾರ ರಾ.ಜಾಧವ ಇವರು ಮಾರ್ಗದರ್ಶನ ನೀಡುತ್ತಿದ್ದು, ದಕ್ಷಿಣ ಭಾರತದ ಪಂದ್ಯಾವಳಿಯಲ್ಲಿಯೂ ಅಮೋಘ ಪ್ರದರ್ಶನ ನೀಡಲಿ ಎಂದು ಹಾರೈಸುತ್ತಾ, ಇಡೀ ಜಿಲ್ಲೆಗೆ, ತಾಲೂಕಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಕ್ಕಾಗಿ ಆಟಗಾರರಿಗೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಿಗೆ, ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ದೇವರ ಹಿಪ್ಪರಗಿಯ ಶಾಸಕರಾದ ಶ್ರೀ ರಾಜುಗೌಡ (ಭೀಮನಗೌಡ) ಪಾಟೀಲರು, ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಅಶೋಕ ಹೆಗಡೆ, ಪ್ರೋ.ಶಿವಪುತ್ರ ಜಾಲವಾದಿ, ವ್ಯವಸ್ಥಾಪಕರಾದ ಶ್ರೀಮತಿ ಪದ್ಮಜಾ ಬೆಳ್ಳಿಕಟ್ಟಿ, ಅಧೀಕ್ಷಕರಾದ ಜಗನ್ನಾಥ ಸಜ್ಜನ, ಸ್ಥಳೀಯ ಹಿರಿಯ ಕ್ರಿಕೆಟಿಗರಾದ ರಮೇಶ ಮಸಬಿನಾಳ, ಶ್ರೀಧರ ನಾಡಗೌಡ, ಪ್ರಕಾಶ ಮಲ್ಲಾರಿ, ಮುನೀರ ಅಹ್ಮದ ಮಳಖೇಡ, ಅಂಪೈರ ಶ್ರೀಕಾಂತ ಕಾಖಂಡಕಿ, ಬಶೀರ ಶೇಠ ಬೇಪಾರಿ, ರಿಯಾಜ ಯಲಿಗಾರ, ಕಾಶೀನಾಥ ಜಮಾದಾರ, ರಮೇಶ ಮ್ಯಾಕೇರಿ, ಪಿ.ಸಿ.ತಳಕೇರಿ ಇವರಲ್ಲದೇ, ಸ್ಥಳೀಯ ಅಪಾರ ಕ್ರೀಡಾ ಪ್ರೋತ್ಸಾಹಕರು, ಕಾಲೇಜಿನ ಎಲ್ಲಾ ಭೋದಕ-ಭೋದಕೇತರ, ಅತಿಥಿ ಉಪನ್ಯಾಸಕ ಸಿಬ್ಬಂದಿ ಹಾಗೂ ಎಲ್ಲಾ ವಿದ್ಯಾರ್ಥಿ ಬಳಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ