ಮೇವಿಲ್ಲದೆ ನರಳುತ್ತಿದ್ದ ದೇವರ ಎತ್ತುಗಳಿಗೆ ಮೇವು ಪೂರೈಕೆ ಮಾಡಿದ – ಶಾಸಕ ಡಾ. ಶ್ರೀ ನಿವಾಸ್.ಎನ್.ಟಿ
ಕೂಡ್ಲಿಗಿ ಫೆಬ್ರುವರಿ.13
ತಾಲೂಕಿನಲ್ಲಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಸಮುದಾಯಗಳೇ ಹೆಚ್ಚಾಗಿವೆ. ಒಂದೊಂದು ಸಮುದಾಯವೂ ಒಂದೊಂದು ದೇವರಿಗೆ ನಡೆದು ಕೊಂಡು, ಅದರ ವಿಭಿನ್ನ ಆಚರಣೆಗಳನ್ನು ತಾತ ಮುತ್ತಾನ ಕಾಲದಿಂದಲೂ ಆಚರಿಸುತ್ತಲೇ ಬಂದಿದ್ದಾರೆ. ಅದರಲ್ಲಿ ನಾಯಕ ಸಮುದಾಯದ ಜನರು ಗ್ರಾಮೀಣ ಸಂಸ್ಕೃತಿಯಂತೆ ಒಂದು ಕಟ್ಟೆ ಮನೆಯವರು ಮನೆ ದೇವರಿಗೆ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಮಾಡಿ ಕೊಂಡು ತಮ್ಮ ಹರೆಕೆ ಈಡೇರಿದ ಮೇಲೆ ಆ ಜನರು ಅಂದು ಕೊಂಡ ಹರಕೆಯನ್ನು ತೀರಿಸುವುದು ವಾಡಿಕೆ,
ಅದರಂತೆ ಗುಡೇಕೋಟೆ ಹೋಬಳಿ ಸೇರಿದಂತೆ ಹಲವೆಡೆ ಶ್ರೀಮರುಕುಂಟಲೇಶ್ವರ.
ಸೂರ್ಯ ಪಾಪನಾಯಕ, ಕಪ್ಪಳ ರಂಗಸ್ವಾಮಿ, ಗಾದ್ರಿಪಾಲ ನಾಯಕ ಸ್ವಾಮಿ, ಬೊಮ್ಮು ಲಿಂಗೇಶ್ವರ ಸ್ವಾಮಿಯ. ಅವರವರು ನಂಬಿಕೆಯ ದೇವರುಗಳನ್ನು ನಾಯಕ ಸಮುದಾಯದವರು ಪೂಜಿಸುತ್ತಾ ಬಂದಿದ್ದಾರೆ.
ಹೀಗೆ ಪೂಜಿಸುವ ಮನೆ ದೇವರಿಗೆ ಹರಕೆಯ ರೂಪದಲ್ಲಿ ಮನೆಯಲ್ಲಿಯೇ ಹುಟ್ಟಿದ ಹಸುವಿನ ಕರು, ಅಥವಾ ಹೋರಿ ಕರುವನ್ನು ಹರಕೆ ತೀರಿಸಲು ಬಿಟ್ಟಿದ್ದಾರೆ. ಆದರೆ ಹೀಗೆಬಿಟ್ಟ ಸುಮಾರು ಹಸುಗಳಿಗೆ ಅರಣ್ಯ ಭೂಮಿಯೇ ಆಸರೆ, ವರ್ಷದ ಮೊದಲಿಂದ ಕೊನೆಯವರೆಗೂ ಆ ಕಾಡು ಅರಣ್ಯ ಭೂಮಿಯ ಮೇವು ಮಾತ್ರವೇ ಇವುಗಳಿಗೆ ಆಸರೆ.

ಆದರೆ ಈ ವರ್ಷ ಮಳೆ ಸಮರ್ಪಕವಾಗಿ ಬಂದಿಲ್ಲ. ಹಾಗಾಗಿ ಅಷ್ಟೋ ಇಷ್ಟೂ ಬೆಳೆಯುತ್ತಿದ್ದ ಹುಲ್ಲೂ ಕೂಡಾ ಬೆಳೆದಿಲ್ಲ. ಅಲ್ಲದೆ ದೇವರ ಎತ್ತುಗಳ ರಕ್ಷಣೆಗಾಗಿ ಭಕ್ತರು ನೀಡಿದ ಹುಲ್ಲು ಸಪ್ಪೆಯೂ ಖಾಲಿಯಾಗಿದೆ. ಎನ್ನುವ ವಿಷಯವನ್ನು ಕೇಲವರು ಮುಖಂಡರು ತಿಳಿಸಲಾಗಿತ್ತು ಮಾನ್ಯ ಶಾಸಕರಿಗೆ ಇವೆಲ್ಲಾ ಕಾರಣಗಳಿಂದ ದೇವರ ಎತ್ತುಗಳು ಮೇವು ಇಲ್ಲದೆ ಅರಣ್ಯದಲ್ಲಿ ಪರದಾಡುತ್ತಿರುವ ಸ್ಥಿತಿಯನ್ನು ನೋಡಿ ಹೊನ್ನೂಡಿ ಪತ್ರಿಕೆಯ ವರದಿಗಾರರು ಸುದ್ದಿ ಬಿತ್ತನೆ ಮಾಡಿದ ಕೆಲವೇ ದಿನಗಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರು ಡಾ ಎನ್ ಟಿ ಶ್ರೀನಿವಾಸ್ ರವರು ಮನಗಂಡು ಮೂಕ ಪ್ರಾಣಿಗಳಿಗೆ ಐವತ್ತು ಟಾನ್ ಮೇವುವನ್ನು ತಮ್ಮ ಸ್ವಂತ ಹಣದಿಂದ ಕೊಡುವುದರ ಮೂಲಕ ಜನಗಳಿಗೆ ಕೊಟ್ಟ ಮಾತಿನಂತೆ ದೇವರ ಎತ್ತುಗಳಿಗೆ ಮೇವು ಈ ದಿನ ಮಂಗಳವಾರ ದಂದು ಕಳಿಸಲಾಗಿತ್ತು,
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ದ ಬ್ಲಾಕ್ ಅಧ್ಯಕ್ಷರು ಗುರುಸಿದ್ದನಗೌಡ್ರು, ಜಿಲ್ಲಾ ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷರು ಕಾವಲಿ ಶಿವಪ್ಪ ನಾಯಕ, ಮಲ್ಲಿಕಾರ್ಜುನ ಗೌಡ್ರು ಮುಖಂಡರು ಹಾಗೂ ಶಾಸಕರ ಆಪ್ತ ಸಹಾಯಕರಾದ ಮರಳುಸಿದ್ದಪ್ಪ ಇನ್ನೂ ಕೇಲವರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.
ಕೂಡ್ಲಿಗಿ