ಎಲ್ಲಾ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು – ತಹಸೀಲ್ದಾರ್ ಅಮರೇಶ್.ಜಿ.ಕೆ

ಕೊಟ್ಟೂರು ಫೆಬ್ರುವರಿ.12

ಕೊಟ್ಟೂರು ಯೋಜನಾ ವ್ಯಾಪ್ತಿಯಲ್ಲಿ 25 ಮಹಿಳಾ ಜ್ಞಾನ ವಿಕಾಸ ಕೇಂದ್ರಗಳ ತಾಲೂಕಾ ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಸೋಮವಾರ ದಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಟ್ಟೂರು ಆರಕ್ಷಕ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟಸ್ವಾಮಿ ಟಿ ಅವರು ನೆರವೇರಿಸಿ ಯಾವುದೇ ಸರ್ಕಾರ ಮಾಡದಿರುವ ಕೆಲಸವನ್ನು ಇಂದು ಧರ್ಮಸ್ಥಳ ಯೋಜನೆಯು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಈ ಕಾರ್ಯಗಳಲ್ಲಿ ಭಾಗಿ ಯಾಗುವುದು ಪುಣ್ಯವೇ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಎಚ್ ಕೆ ಡಿಸೋಜಾ ಅಧ್ಯಕ್ಷರು ದುರ್ಗಾಂಬಿಕ ಜ್ಞಾನ ವಿಕಾಸ ಕೇಂದ್ರ ರಾಜೀವ ನಗರ ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್ ಬಿ ಅವರು ವಹಿಸಿದ್ದರು.ಇವರು ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿ ಕೊಂಡಿದ್ದಾರೆ. ಜೊತೆಗೆ ಕುಟುಂಬವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಅಲ್ಲದೆ ಉಳಿತಾಯ,ಶಿಕ್ಷಣ ಆರ್ಥಿಕ ನಿರ್ವಹಣೆ ಮತ್ತು ಸ್ವಚ್ಛತೆ ಶಿಸ್ತು ಕೌಟುಂಬಿಕ ಜೀವನದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಜ್ಞಾನವನ್ನು ನೀಡುವ ಕಾರ್ಯಕ್ರಮವೇ ಜ್ಞಾನ ವಿಕಾಸ ಕಾರ್ಯಕ್ರಮ ಎಂದು ಹೇಳಿದರು.ಮುಖ್ಯ ಅತಿಥಿಗಳಾದ ಶ್ರೀ ಅಮರೇಶ್ ಜಿ ಕೆ (ಕೆ ಎ ಎಸ್) ಅವರು ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಮಾಡುತ್ತಿರುವ ಕೆಲಸಗಳು ಶ್ಲಾಘನೀಯವಾಗಿದೆ. ಎಲ್ಲಾ ಮಹಿಳೆಯರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಹಾಗೂ ಎಲ್ಲ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ವಿಜಯನಗರ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಜನಜಾಗೃತಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಎಚ್ ವಿಶ್ವೇಶ್ವರ ಸಜ್ಜನ್ ಹಾಗೂ ಶ್ರೀಮತಿ ಡಾಕ್ಟರ್ ಕುಸುಮ ಸಜ್ಜನ್ ಅವರು ಉಪಸ್ಥಿತರಿದ್ದು. ಈ ಸಂದರ್ಭದಲ್ಲಿ ಎಚ್ ವಿಶ್ವೇಶ್ವರ ಸಜ್ಜನ್ ಅವರು ನಿತ್ಯ ಆಹಾರದಲ್ಲಿ ಸಿರಿ ಧಾನ್ಯಗಳನ್ನು ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಶ್ರೀಮತಿ ಡಾಕ್ಟರ್ ಕುಸುಮಾ ಸಜ್ಜನ್ ಅವರು ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಬಹು ಮುಖ್ಯವಾಗಿದ್ದು ತಮ್ಮ ಪಾತ್ರಕನುಗುಣವಾಗಿ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿ ಕೊಂಡು ಹೋಗುತ್ತಾಳೆ ಎಂದು ಹೇಳಿದರು.ಉಳಿದಂತೆ ಕಾರ್ಯಕ್ರಮದಲ್ಲಿ ಕೊಟ್ಟೂರು ತಾಲೂಕಿನ ಯೋಜನಾಧಿಕಾರಿಗಳು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮೇಲ್ವಿಚಾರಕ ಹಂತದ ಸಿಬ್ಬಂದಿಗಳು ಕಚೇರಿ ಸಿಬ್ಬಂದಿಗಳು ಹಾಗೂ ಸಿ ಎಸ್ ಸಿ ಸೇವಾದಾರರು, ಸೇವಾ ಪ್ರತಿನಿಧಿಗಳು ಮತ್ತು 25 ಜ್ಞಾನ ವಿಕಾಸ ಕೇಂದ್ರಗಳ ಆಯ್ದ 500 ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ವಿಶೇಷತೆ ವಿವಿಧ ಸ್ಟಾಲ್ಗಳು ಹಾಗೂ ಕೇಂದ್ರದ ಸದಸ್ಯರಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ಜನ ಮಹಿಳೆಯರನ್ನು ಗುರುತಿಸಿ ಅವರಿಗೆ ಸನ್ಮಾನಿಸಲಾಯಿತು .ಜೊತೆಗೆ ವಿವಿಧ ಅನುದಾನಗಳ ಮಂಜೂರಾತಿ ಪತ್ರ ಮತ್ತು ವಿವಿಧ ಸೌಲಭ್ಯಗಳ ಸಾಂಕೇತಿಕ ವಿತರಣೆ ಮಾಡಲಾಯಿತು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button