ಪಿ.ಎಸ್.ಐ ಸೋಮಪ್ಪಗೌಡ.ಶವಪ್ಪಗೌಡ.ಬಿರಾದಾರ ರವರಿಗೆ ಬೆಂಗಳೂರಿನಲ್ಲಿ ಜಾಂಭವ ಯುವ ಸೇನಾ ಸಂಘಟನೆ ವತಿಯಿಂದ ಸನ್ಮಾನ.
ದೇವೂರ ಫೆಬ್ರುವರಿ.13
ಸೋಮಪ್ಪಗೌಡ ಶಿವಪ್ಪಗೌಡ ಬಿರಾದಾರ ಇವರು ಮೂಲತ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ದೇವೂರ ಗ್ರಾಮದವರಿದ್ದು.

ಸುಮಾರು 18 ವರ್ಷಗಳ ಕಾಲ ಆರ್ಮಿ ಸರ್ವಿಸ್ ಕೋಡನಲ್ಲಿ ಹವಾಲ್ದಾರರಾಗಿ ಝಾನ್ಸಿ, ಚಂಡಿಗಡ ಹಾಗೂ ಇನ್ನೂ ಅನೇಕ ಕಡೆ ಕಾರ್ಯ ನಿರ್ವಹಿಸಿದ್ದಾರೆ .18 ವರ್ಷಗಳ ಕಾಲ ಆರ್ಮಿಯಲ್ಲಿ ಕಾರ್ಯನಿರ್ವಹಿಸಿ ಉತ್ತಮ ಅಧಿಕಾರಿ ಎನಿಸಿಕೊಂಡು 2018. ರಲ್ಲಿ ಪಿಎಸ್ಐ ಆಗಿ ನೇಮಕ ಗೊಂಡು ಚಂದ್ರ ಲೇಔಟ್ ಬೆಂಗಳೂರು.ಪಿ.ಎಸ್. ಐ. ಆಗಿ ಈಗ ಕರ್ತವ್ಯ ನಿರ್ವಹಿಸುತ್ತಿರುವ ಬಿರಾದಾರ ಸೋಮಪ್ಪಗೌಡರಿಗೆ ಬೆಂಗಳೂರಿನಲ್ಲಿ ಆತ್ಮೀಯವಾಗಿ ಜಾಂಭವ ಯುವ ಸೇನಾ ರಾಜ್ಯ ಉಪಾಧ್ಯಕ್ಷರಾದ ಡಾ.ಮಲಕಪ್ಪ ಬಾಗೇವಾಡಿ, ಮಹಾಂತೇಶ ಹಾದಿಮನಿ ,ಅಬ್ಬಾಸಲಿ ಬಾಗವಾನ್, ಕಗ್ಗೋಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಜ್ಜನ್ ಸರ್ ಹಾಗೂ ಸದಸ್ಯರು ಶಾಲು ಹೊದಿಸಿ ಸನ್ಮಾನ ಮಾಡಿ ಗೌರವಿಸಲಾಯಿತು.ನಂತರ ಪಿಎಸ್ಐ ಸೋಮಪ್ಪಗೌಡ ಬಿರಾದರ ರವರು ಅಬ್ಬಾಸಲಿ ಭಗವಾನ್ ರವರಿಗೆ ಆತ್ಮೀಯವಾಗಿ ತಬ್ಬಿಕೊಂಡರು , ಮಲಕು ಬಾಗೆವಾಡಿ ಯವರಿಗೆ ರಾಜಕೀಯದಲ್ಲಿ ಹೆಚ್ಚು ಹೆಚ್ಚು ಬೆಳೆಯಲೆಂದು ಹೇಳಿದರು. ಗ್ರಾಮದಲ್ಲಿ ಇರುವ ಎಲ್ಲರ ಬಗ್ಗೆ ಕಾಳಜಿ ವಹಿಸಿ ಮುಗುಳ್ನಗುತ್ತಾ ತಂಪು ಪಾನೀಯ ಕೂಡಿಸಿ ವಿಚಾರಿಸಿದರು. ಈ ಸಂದರ್ಭದಲ್ಲಿ ಕಗ್ಗೊಡ,ದೆವೂರ ಗ್ರಾಮ ಪಂಚಾಯತಿ ಅಧ್ಯಕ್ಷರು,ಸದಸ್ಯರು ಇತರರು ಇದ್ದರೂ.
ವರದಿ: ಮಹಾಂತೇಶ.ಹಾದಿಮನೆ.ವಿಜಯಪುರ