ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಹೊಸದಾಗಿ ನಾಡಕಚೇರಿ ಬಿಲ್ಡಿಂಗ್ ಉದ್ಘಾಟನೆ ಮಾಡಿದ ಶಾಸಕರು.
ರಾಂಪುರ ಜು .12

ಇಂದು ಮೊಳಕಾಲ್ಮುರು ತಾಲೂಕಾ ರಾಂಪುರ ಗ್ರಾಮದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಶಾಸಕರು ನಿರ್ಮಾಣ ಗೊಂಡಿರುವ 18 ಲಕ್ಷದ 50,000 ಅನುದಾನ ಬಿಡುಗಡೆ ಮಾಡಿಸಿ ಕೇವಲ ಐದು ತಿಂಗಳಲ್ಲೇ ನಾಡಕಚೇರಿ ಉಪ-ತಹಶಿಲ್ದಾರ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದರು. ತಹಶಿಲ್ದಾರ್ ಟಿ ಜಗದೀಶ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ, ಉಪಾಧ್ಯಕ್ಷರು ಖಾದರ್ ಸದಸ್ಯರು, ಪಿಡಬ್ಲ್ಯೂಡಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಮುಖಂಡರುಗಳು, ಅಭಿಮಾನಿಗಳು, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ತಿಪ್ಪೇಸ್ವಾಮಿ. ಹೊಂಬಾಳೆ.ಮೊಳಕಾಲ್ಮೂರು.