ನನ್ನ ಹಳ್ಳಿ ಹಂಪಿ …!

ನನ್ನ ಹಳ್ಳಿಯಿಂದ ಹಂಪಿ ಉತ್ಸವವನ್ನು ನೋಡಲು ಹಂಪಿಗೆ ಬಂದಾಗ ದೇವಾಲಯಗಳ ಕೆತ್ತನೆಯನ್ನು ನೋಡಿ ಅನಿಸಿದ್ದು ಒಂದೇ ಅದೆಷ್ಟು ಜ್ಞಾನವನ್ನು ತುಂಬಿಕೊಂಡಿದ್ದರು ಆ ನಮ್ಮ ಪೂರ್ವಜರು ಎಂದು. ಪ್ರತಿಯೊಂದು ಕಲ್ಲಿನ ಕೆತ್ತನೆಯೂ ಸಹ ಒಂದೊಂದು ಇತಿಹಾಸವನ್ನು ತಿಳಿಸುತ್ತದೆ. ಸುಲ್ತಾನ್ ರ ದಾಳಿಯಿಂದ ದ್ವಂಶವಾದ ಮೂರ್ತಿಗಳು ಸಹ ಹೇಳುತ್ತಿವೆ ವಿಜಯನಗರದ ವೈಭವವನ್ನು. ಅದೆಷ್ಟು ಸುಂದರತೆ ! ಪ್ರತಿ ಬಾರಿಯೂ ಹಂಪಿಗೆ ಬಂದಾಗ ಎಲ್ಲಿಲ್ಲದ ಸಂತೋಷ ಎಲ್ಲಿಲ್ಲದ ನೆಮ್ಮದಿ ಈ ನಮ್ಮ ಹಂಪಿಯಲ್ಲಿ. ವಿಜಯನಗರ ಇತಿಹಾಸವನ್ನು ತಿಳಿಯುವುದೇ ಅದ್ಭುತ. ಕಲ್ಲಿನ ಬೆಟ್ಟದಿಂದ ಆವೃತವಾದ ಈ ನಮ್ಮ ಹಂಪಿ ಅದ್ಭುತ ವಿಗ್ರಹ ಕೆತ್ತನೆಯ ತಾಣವಾಗಿದೆ. ಏನೋ ಒಂದು ತರ ರೋಮಾಂಚನ ಯಾವುದೋ ಜನ್ಮದಲ್ಲಿ ನಾ ಇಲ್ಲಿ ಹುಟ್ಟಿ ಜೀವನವನ್ನು ನಡೆಸಿದ್ದೆ ಎಂಬ ಕಲ್ಪನೆ . ವಿಗ್ರಹಗಳನ್ನ ಮುಟ್ಟುತ್ತಿರುವಾಗ ಅದೇನೋ ಸವಿ ನೆನಪು .ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಗಂಟೆ ಬಾರಿಸಿದಾಗ ಅದೆಂತ ಸುಮಧುರ ಶಬ್ದ ಎಂಬ ಭಾವನೆ. ಮತ್ತೊಮ್ಮೆ ಈ ನಮ್ಮ ಹಂಪಿಯು ವಿಜಯನಗರ ಸಾಮ್ರಾಜ್ಯವಾಗಬೇಕೆಂಬ ಬಯಕೆ. 500 ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಈ ನಮ್ಮ ವಿಜಯನಗರ ಸಾಮ್ರಾಜ್ಯ ಎಂದೆಂದಿಗೂ ಮರೆಯಲಾಗದ ತಾಣ. ಮೊನ್ನೆ ತರಗತಿಯಲ್ಲಿ ಹಂಪಿಯ ಇತಿಹಾಸವನ್ನು ಶಿಕ್ಷಕರು ಹೇಳುತ್ತಿರುವಾಗ ನನಗೆ ಗೊತ್ತಿಲ್ಲದೆ ನಾನು ವಿಜಯನಗರ ಸಾಮ್ರಾಜ್ಯದ ವೈಭವದಲ್ಲಿ ನನ್ನದೇ ಲೋಕದಲ್ಲಿ ತಲ್ಲಿನಲಾಗಿದ್ದೆ. ಬೇಸರದ ಸಂಗತಿ ಎಂದರೆ ನಮ್ಮ ಹಂಪಿಯಲ್ಲಿರುವ ದೇವಾಲಯಗಳು ಕಾಲಕ್ರಮೇಣ ಪಾಳು ಬೀಳುತ್ತಿವೆ , ದೇವರ ವಿಗ್ರಹಗಳಿಲ್ಲದೆ ಎಷ್ಟೋ ದೇವಾಲಯಗಳು ಬಿಕೋ ಎನ್ನುತ್ತಿವೆ. ದೇವಸ್ಥಾನದ ಆವರಣದಲ್ಲಿ ಅಸ್ವಚ್ಛತೆಯಿಂದ ಕೂಡಿರುವ ತಾಣಗಳು ನೋಡುಗರಲ್ಲಿ ನಕರಾತ್ಮಕ ಭಾವನೆ ಬೀರುತ್ತಿದೆ. ಈ ನಮ್ಮ ಹಂಪಿಯ ಪ್ರತಿಯೊಂದು ದೇವಾಲಯದಲ್ಲಿಯೂ ದೇವರ ವಿಗ್ರಹವನ್ನ ಸ್ಥಾಪಿಸಿ, ಸುತ್ತಮುತ್ತಲು ಸ್ವಚ್ಛತೆಯಿಂದ ನೋಡಿಕೊಂಡರೆ ,ಹಾಗೂ ದ್ವಂಶವಾಗಿರುವ ಮೂರ್ತಿಗಳನ್ನ ಸಾಧ್ಯವಾದಮಟ್ಟಿಗೆ ಸಂರಕ್ಷಣೆ ಮಾಡಿಕೊಂಡು ಬಂದರೆ .ಮುಂದಿನ ಪೀಳಿಗೆಯೂ ಸಹ ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವದ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ನನಗೆ ಅತ್ಯಂತ ಮೆಚ್ಚುಗೆಯ ಸ್ಥಳವೆಂದರೆ ಈ ನನ್ನ ಹಂಪಿ. ಹಂಪಿಯಲ್ಲಿರುವ ಪ್ರತಿಯೊಂದು ದೇವಾಲಯ, ಪ್ರತಿಯೊಂದು ವಿಗ್ರಹ ಚಿರಕಾಲ ಶಾಶ್ವತವಾಗಿ ಇರಬೇಕೆಂಬ ಬಯಕೆ. ವಿಜಯನಗರ ಜಿಲ್ಲೆಯಲ್ಲಿ ಹುಟ್ಟಿದಂತಹ ನಾವೇ ಧನ್ಯರು. ಹಂಪಿಯನ್ನ ಪ್ರೀತಿಸುವೆ ಗೌರವಿಸುವೆ !.ಕರೇಗೌಡ್ರು ದಿವ್ಯ ಕೊಟ್ಟೂರೇಶ್ವರ ಕಾಲೇಜು .ಕೊಟ್ಟೂರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್. ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button