ಸಂವಿಧಾನವನ್ನು ರಚಿಸಿದ 75.ನೇ ವರ್ಷದ ಅಮೃತ ಮಹೋತ್ಸವದ ನಿಮಿತ್ತ ಸಂವಿಧಾನ ಜಾಗೃತಿ ಜಾಥಾ ಬರ ಮಾಡಿಕೊಂಡರು.
ತೊದಲಬಾಗಿ ಫೆಬ್ರುವರಿ.14

ಜಮಖಂಡಿ ತಾಲೂಕಿನ ತೊದಲಬಾಗಿಯ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಆಗಮಿಸಿದ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ 75. ನೇ ವರ್ಷದ ಅಮೃತ ಮಹೋತ್ಸವದ ನಿಮಿತ್ತವಾಗಿ ಸಂವಿಧಾನ ಜಾಗೃತಿ ಜಾಥಾವನ್ನು ಬರ ಮಾಡಿಕೊಂಡರು.
ಆಗ ನಮ್ಮ ಶಾಲೆಯ ಪ್ರಾಂಶುಪಾಲರಾದಂಹ ಶ್ರೀ ಶಿವಾನಂದ ನಂದೆಪ್ಪಗೋಳ ಹಾಗೂ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಶ್ರೀ ಸಿ ಎಸ್ ಗಡ್ಡದೇವರಮಠ ವಸತಿ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಸೇರಿ ಅದ್ದೂರಿಯಾಗಿ ಸ್ವಾಗತಿಸಿ ಕೊಳ್ಳಲಾಯಿತು. ತಾಲೂಕ ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಪ್ರಾಂಶುಪಾಲರು ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವ ಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದರು. ಸಂವಿಧಾನ ಪೀಠಿಕೆಯನ್ನು ಓದಿಸುವ ಮೂಲಕ ಕಾರ್ಯಕ್ರಮವನ್ನು ಚಾಲನೆ ಮಾಡಲಾಯಿತು. ತದನಂತರ ಇಂದಿನ ದಿನಗಳಲ್ಲಿ ಸಂವಿಧಾನದ ಅವಶ್ಯಕತೆ, ಅರಿವು, ಹಾಗೂ ಮಹತ್ವದ ಕುರಿತಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀ ಸಿ ಎಸ್ ಗಡ್ಡದೇವರಮಠ ನಮ್ಮ ಶಾಲೆಯ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳಾದ ರಂಗೋಲಿ, ನಾಟಕ, ನೃತ್ಯ ,ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಮೂಡಿ ಬಂದವು ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಎಸ್ ಡಿ ಮಂಕಣಿ ಹಾಗೂ ಶ್ರೀಮತಿ ಎಸ್ ಪಿ ರಡ್ಡೆರಟ್ಟಿ. ಶ್ರೀ ಜಿ ವೈ ಗದ್ಯಾಳ ಸ್ವಾಗತಿಸಿದರು ಮತ್ತು ಶ್ರೀ ಎಸ್ ಎಸ್ ಅರ್ಜುನಗಿಯವರು ವಂದಿಸಿದರು.