ಸಂವಿಧಾನ ರಥ ಯಾತ್ರೆಯ ಸ್ವಾಗತಿಸುವಲ್ಲಿ ಬಹುತೇಕ ಅಧಿಕಾರಿಗಳು ಗೈರು – ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯ.

ಹುನಗುಂದ ಫೆಬ್ರುವರಿ.14

ಸಂವಿಧಾನ ಜಾಗೃತಿ ರಥ ಯಾತ್ರೆ ಪಟ್ಟಣಕ್ಕೆ ಆಗಮಿಸಿ ಒಂದುವರೆ ಗಂಟೆಯಾದರೂ ರಥ ಯಾತ್ರೆಯನ್ನು ಸ್ವಾಗತಿಸ ಬೇಕಾದ ತಹಶೀಲ್ದಾರ ಮತ್ತು ನೋಡಲ್ ಅಧಿಕಾರಿಗಳು ಸ್ಥಳಕ್ಕೆ ತಡವಾಗಿ ಬಂದು ಸಂವಿಧಾನ ಜಾಗೃತಿ ರಥ ಯಾತ್ರೆಗೆ ಅಪಮಾನ ಮಾಡಿದ್ದಲ್ಲದೇ ಸಂವಿಧಾನ ರಥ ಯಾತ್ರೆ ಆಗಮನ ಕುರಿತು ದಲಿತ ಮುಖಂಡರಿಗೆ ಮಾಹಿತಿ ನೀಡಿಲ್ಲ ಎಂದು ಕೆಂಡ ಮಂಡಲರಾದ ದಲಿತ ಮುಖಂಡರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸಂವಿಧಾನ ಜಾಗೃತಿ ಯಾತ್ರೆಯನ್ನು ಸ್ವಾಗತಿಸುವಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದ ನೋಡಲ್ ಅಧಿಕಾರಿ ಮತ್ತು ತಹಶೀಲ್ದಾರ ಹಾಗೂ ಗೈರಾದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಮಂಗಳವಾರ ಸಂವಿಧಾನ ಜಾಗೃತಿ ರಥ ಯಾತ್ರೆ ನಾಗೂರ ಗ್ರಾಮದಿಂದ ಹುನಗುಂದ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಸ್ಥಳದಲ್ಲಿ ಒಂದಿಬ್ಬರು ಅಧಿಕಾರಿಗಳನ್ನು ಬಿಟ್ಟರೇ ಸಂಬಂಧಪಟ್ಟ ಅಧಿಕಾರಿಗಳು ಗೈರಾಗಿದ್ದರು ಇನ್ನೂ ತಡವಾಗಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ನಿಂಗಪ್ಪ ಬಿರಾದಾರ ಮತ್ತು ನೋಡಲ್ ಅಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಪಿ.ಕೆ ಗುಡದಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಚ್.ಕಟ್ಟಮನಿ ಅವರನ್ನು ದಲಿತ ಮುಖಂಡರು ತರಾಟೆಗೆ ತಗೆದು ಕೊಂಡರು.

DOWNLOAD OUR APP

ಸಂವಿಧಾನ ರಥ ಯಾತ್ರೆಯ ಮೆರವಣೆಗೆಗೆ ವಾಧ್ಯ ಮೇಳವಿಲ್ಲ, ಯಾವುದೇ ಪೂರ್ವ ಸಿದ್ದತೆಯಿಲ್ಲ, ಪ್ರಮುಖವಾಗಿ ತಾಲೂಕ ಪಂಚಾಯತ ಇಓ ಮುರಳೀಧರ ದೇಶಪಾಂಡೆ ಗೈರಾಗಿದ್ದಾರೆ, ರಥ ಯಾತ್ರೆಯ ಬಗ್ಗೆ ದಲಿತ ಮುಖಂಡರಿಗೆ ಒಂದು ಮಾಹಿತಿಯಿಲ್ಲ,ಅಧಿಕಾರಗಳು ಉದ್ದೇಶ ಪೂರ್ವಕವಾಗಿ ಸಂವಿಧಾನಕ್ಕೆ ಮತ್ತು ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಒಂದು ಗಂಟೆಗೂ ಹೆಚ್ಚು ಸಮಯ ಅಧಿಕಾರಿಗಳೊಂದಿಗೆ ದಲಿತ ಮುಖಂಡರು ವಾಗ್ವಾದಕ್ಕೀಳಿದರು. ಇದರಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ಕೈಕೊಳ್ಳಬೇಕು ಎಂದು ದಲಿತ ಮುಖಂಡರಾದ ಹನಮಂತ ನಡುವಿನಮನಿ,ರವಿ ಮಾದರ,ರವಿ ಮಸ್ಕಿ,ರಾಜು ಈಟಿ,ಶಾಂತುಕುಮಾರ ಮೂಕಿ,ಶಾಂತಪ್ಪ ಮಸ್ಕಿ,ರಾಘು ಬಿಸನಾಳ,ಮುತ್ತಪ್ಪ ಮಸ್ಕಿ ಸೇರಿದ್ದಂತೆ ಅನೇಕ ಮುಖಂಡರು ಒತ್ತಾಯಿಸಿದರು. ಸಂವಿಧಾನ ಜಾಗೃತಿ ರಥ ಯಾತ್ರೆಗೆ ಸೂಕ್ತ ವ್ಯವಸ್ಥೆ ಮಾಡದೇ ಇರುವ ಪುರಸಭೆ ಮುಖ್ಯಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತಹಶೀಲ್ದಾರ ನಿಂಗಪ್ಪ ಬಿರಾದಾರ ತರಾಟೆಗೆ ತಗೆದು ಕೊಂಡ ಘಟನೆ ನಡೆಯಿತು. ಕೊನೆಗೆ ದಲಿತ ಮುಖಂಡರು ರಥ ಯಾತ್ರೆಯ ಮೆರವಣೆಗೆ ಕೆಲವೊಂದು ವಾಧ್ಯ ಮೇಳ ತರಿಸಿ ಮೆರವಣಿಗೆಯನ್ನು ಆರಂಭಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button