ಸಂವಿಧಾನ ಜಾಗೃತಿ ಜಾಥಾ ತೇರು ಮಾರ್ಕಬ್ಬಿನಹಳ್ಳಿ ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತ.
ಮಾರ್ಕಬ್ಬಿನಹಳ್ಳಿ ಫೆಬ್ರುವರಿ.17

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ತೇರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.ನಂತರ ರಥದೊಂದಿಗೆ ವಿಜೃಂಭಣೆಯಿಂದ ಡೊಳ್ಳು, ಹಲಿಗಿ ಭವ್ಯ ಮೆರವಣಿಗೆ ಮಾಡುತ್ತಾ.ಮಾರ್ಕಬ್ಬಿನಹಳ್ಳಿ ಗ್ರಾಮದ ಒಳಗಡೆ ದಲಿತಪರ ಸಂಘಟನಕಾರರು, ಶಿಕ್ಷಕರು, ಗ್ರಾಮ ಪಂಚಾಯತಿ ಅಧ್ಯಕ್ಷ ,ಸದಸ್ಯರು,ಶಾಲಾ ಮಕ್ಕಳು, ಗ್ರಾಮಸ್ಥರು.ತಾಲೂಕ ಆಡಳಿತ ,ಮೆರವಣಿಗೆಯ ಮೂಲಕ ರಸ್ತೆ ಉದ್ದಕ್ಕೂ ಶಾಲಾ ಮಕ್ಕಳ ಕುಣಿತ ಜೈಕಾರವನ್ನು ಹಾಕುತ್ತಾ ಸಾಗಿದರು.ದಲಿತರ ಓಣಿಯಲ್ಲಿ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾ ತೇರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಹಿಳೆಯರು ಕಳಸ ಬೇಳಗಿ ನಮಸ್ಕರಿಸಿದರು,ವೇದಿಕೆಯ ಕಾರ್ಯಕ್ರಮವನ್ನು ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜನೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವೇದಿಕೆಯ ಮೇಲೆ ಶಾಲಾ ಮಕ್ಕಳ ರಸ ಪ್ರಶ್ನೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೋಡಲ್ ಅಧಿಕಾರಿ ಎಮ್.ವಾಯ .ಮಲಕಣ್ಣವರ ವಹಿಸಿ ಕೊಂಡಿದ್ದರು . ಗ್ರಾಮ ಪಂಚಾಯತಿ ಅಬಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ್ ಕತ್ತಿ, ಸಂವಿಧಾನ ಪೀಠಿಕೆ ಓದಿದರು, ಸ್ವಾಗತ ಭಾಷಣ, ರಿಯಾಜ ದಿಂಡವಾರ ಮಾಡಿದರು .ಗ್ರಾಮ ಪಂಚಾಯತಿ ಅಧ್ಯಕ್ಷ ಬೋರಮ್ಮ ಭಜಂತ್ರಿ,ಕಾರ್ಯದರ್ಶಿ ಭೀಮನಗೌಡ ಬಿರಾದಾರ್, ದಲಿತ ಮುಖಂಡರಾದ ಅಭಿಷೇಕ್ ಚಕ್ರವರ್ತಿ,ಮಹಾಂತೇಶ ಹಾದಿಮನಿ, ಪ್ರಕಾಶ ಗುಡಿಮನಿ,ನಜಿರ ಬೀಳಗಿ, ರಮೇಶ ಹಳ್ಳಿ, ಗ್ರಾಮ ಪಂಚಾಯತಿ ಸದಸ್ಯರಾದ, ಮಹಾಂತೇಶಗೌಡ ಪಾಟೀಲ್, ನೂರಜಾನಭಿ ಬೀಳಗಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶಿವಾನಂದ್ ಮಾವಿನಗಿಡದ ಹಾಗೂ ಶರಣಪ್ಪ ಮಾಸ್ತ್ರ ಹಳ್ಳಿ, ಲಕ್ಷ್ಮಣ ಭಜಂತ್ರಿ, ಅಪ್ಪಣ್ಣ ಮಾದರ, ಮೈಬುಸಾಬ ಬೀಳಗಿ,ರವಿ ಹಳ್ಳಿ, ಮುಖೇಶ್ ಹಂದಿಗನೂರ, ಎಚ್ .ಎಸ್.ಡೋಮನಾಳ, ದಶರತ ಹಡಪದ,ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು,ದಲಿತಪರ ಸಂಟನೆಗಳು,ಗ್ರಾಮದ ಮುಖಂಡರು,ಪಂಚಾಯತಿ ಸಿಬ್ಬಂದ್ದಿಯರು, ಗ್ರಾಮಸ್ಥರು, ಇದ್ದರು.
ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ.