ಮೂಗನೂರಲ್ಲಿ ಕೂಸಿನ ಮನೆ ಕೇಂದ್ರ ಉದ್ಘಾಟನೆ.
ಸುರಳಿಕಲ್ಲ ಫೆಬ್ರುವರಿ.18
![](https://i0.wp.com/sknewskannada.in/wp-content/uploads/2024/02/IMG-20240218-WA0049-1024x585.jpg?resize=708%2C404&ssl=1)
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸುರಳಿಕಲ್ಲ ಗ್ರಾಮದಲ್ಲಿ ಕೂಸಿನ ಮನೆ ಕೇಂದ್ರವನ್ನು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗಂಗೂಬಾಯಿ ಮೇಟಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಬಡಕನ್ನವರ ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು.ಮೂರು ವರ್ಷದ ಒಳಗಿನ ನರೇಗಾ ಕೂಲಿ ಕಾರ್ಮಿಕರ ಮಕ್ಕಳನ್ನು ಆರೈಕೆ ಮಾಡುವ ಕೇಂದ್ರವಾಗಿದ್ದು, ಈಗಾಗಲೇ ಆರೈಕೆದಾರರಿಗೆ ತರಬೇತಿ ನೀಡಿದ್ದು, ಕೂಲಿ ಕಾರ್ಮಿಕರ ಮಕ್ಕಳನ್ನು ಈ ಕೇಂದ್ರದಲ್ಲಿ ಪೋಷಣೆ ಮಾಡುವ ಉದ್ದೇಶ ಹೊಂದಿದೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಛಲವಾದಿ , ಉಮೇಶ್ ಮೇಟಿ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಬಡಕನ್ನವರ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಕಾಯಕ ಬಂಧುಗಳು ನರೇಗಾ ಕೂಲಿ ಕಾರ್ಮಿಕರು, ಶಿಶು ಆರೈಕೆದಾರರು, ಉಪಸ್ಥಿತರಿದ್ದರು.