“ಶರಣರ ಶಕ್ತಿ” ಚಲನ ಚಿತ್ರದ ಆಡಿಯೋ ಬಿಡುಗಡೆ.
ಹುಬ್ಬಳ್ಳಿ ಜೂನ್.12

ಶ್ರೀ ಶಾ ಫಿಲ್ಮ್ ಹುಬ್ಬಳ್ಳಿ ಅರ್ಪಿಸುವ ‘ಶರಣರ ಶಕ್ತಿ’ ತಡಿವ್ಯಾರ ನೋಡು ! – ಭಕ್ತಿ ಪ್ರಧಾನ ಕನ್ನಡ ಚಲನಚಿತ್ರದ ‘ಬಣ್ಣ ಕಳಚೈತಿ’ ಆಡಿಯೋ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ ಡಾ.ಕೆ.ಎಸ್.ಶರ್ಮ ಕಲ್ಯಾಣ ಮಂಟಪದಲ್ಲಿ ಜರುಗಿತು. ದಿವ್ಯ ಸಾನಿಧ್ಯ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮಿಗಳು ಶಿರಹಟ್ಟಿ, ಡಾ. ಶಿವಲಿಂಗ ಶಿವಾಚಾರ್ಯರು ಗಂಜಿಗಟ್ಟಿ. ತ್ರಿವಿಧ ದಾಸೋಹಿ ಬಸವಣ್ಣಜ್ಜನವರು ಕುಂದಗೋಳ. ಶರಣಬಸವ ಸ್ವಾಮೀಜಿಗಳು ಗಜೇಂದ್ರಗಡ. ಬಸಲಿಂಗಯ್ಯ ಶಾಸ್ತ್ರಿಗಳು ಸೂರಣಿಗಿ ಮಠ. ಭಕ್ತವೃಂದ ದಿವ್ಯಜ್ಞಾನ ಗುರುಕುಲ ಹುಬ್ಬಳ್ಳಿ ವಹಿಸಿದ್ದರು.ಅತಿಥಿಗಳಾಗಿ ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಮೀನಾಕ್ಷಿ ವಂಟ್ಮುರಿ, ಚೇತನ್ ಹಿರೇಕೆರೂರು. ಸುರೇಶ್ ಗೋಕಾಕ, ಗುರುನಾಥ್ ಉಳ್ಳಿಕಾಶಿ ಆಗಮಿಸಿದ್ದರು, ಬಸವಣ್ಣನ ಪಾತ್ರಧಾರಿ ಮಂಜುನಾಥ್ ಗೌಡ ಪಾಟೀಲ್, ಸಂಗೀತಾ ಹುಲ್ಲೂರು, ಅಮೃತ ಜೋಶಿ,ವಿನೋದ್ ದಂಡಿನ್, ಗಿರಿ ಗಂಧರ್ವ,ಗುರು, ವಿಶ್ವರಾಜ ರಾಜಗುರು, ಸಾಚಿ ಜೈನ್, ಲಕ್ಷ್ಮಿ ಅಂಗಡಿ, ಸಚಿನ್ ಮಾಗಣಗೇರಿ, ಗಿರೀಶ್ ಸವಡಿಜೋಶಿ,ಧ್ರುವ ಶರ್ಮಾ, ಭಾರ್ಗವ್ ಶರ್ಮ,ವೀರೇಶ್. ವಾಯ್, ಸಂಗೀತ ನಿರ್ದೇಶಕರಾದ ವಿನು ಮನಸು, ಛಾಯಾಗ್ರಹಕರಾದ ಮುಂಜಾನೆ ಮಂಜು, ನಿರ್ದೇಶಕರಾದ ದಿಲೀಪ್ ಶರ್ಮ ಮತ್ತು ನಿರ್ಮಾಪಕರಾದ ಶ್ರೀಮತಿ ಆರಾಧನಾ ಕುಲಕರ್ಣಿ ಅವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು ಚಿತ್ರಕ್ಕೆ ಮುಂಜಾನೆಮಂಜು ಛಾಯಾಗ್ರಹಣ , ಕೆ.ಕಲ್ಯಾಣ ಸಾಹಿತ್ಯ , ವಿನುಮನಸು ಸಂಗೀತ, ಆರ್.ಮಹಾಂತೇಶ ಸಂಕಲನ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ದಿಲೀಪ್ ಶರ್ಮ ಚಿತ್ರಕಥೆ ,ಸಂಭಾಷಣೆ ಜೊತೆಗೆ ಎರಡು ಹಾಡುಗಳನ್ನು ಬರೆದಿದ್ದು ಜೊತೆಗೆ ನಿರ್ದೇಶನ ಹೊಣೆ ಹೊತ್ತಿದ್ದಾರೆ. ಚಿತ್ರವನ್ನು ಶ್ರೀಮತಿ ಅರಾಧನಾ ಕುಲಕರ್ಣಿ ನಿರ್ಮಿಸಿದ್ದಾರೆ.
*****
ವರದಿಡಾ.ಪ್ರಭು ಗಂಜಿಹಾಳ
ಮೊ; ೯೪೪೮೭೭೫೩೪೬