ಹಿರಿಯೂರಿನಲ್ಲಿ ಐಶರ್ ಟ್ರಾಕ್ಟರ್ ಹಾಗೂ ಶ್ರೀ ಕಾಲ ಭೈರವೇಶ್ವರ ಟ್ರಾಕ್ಟರ್ಸ್ ನೂತನ ಶಾಖೆ ಶುಭಾರಂಭ.
ಹುಳಿಯಾರು ಫೆಬ್ರುವರಿ.20
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರು ಹಾಗೂ ಮೈಸೂರು ರಸ್ತೆಯಲ್ಲಿ ಶ್ರೀ ಮಂಜುನಾಥ ಎನ್ ಕ್ಲೇವ್ ನಲ್ಲಿ ನೂತನವಾಗಿ ಶ್ರೀ ಕಾಲ ಭೈರವೇಶ್ವರ ಟ್ರಾಕ್ಟರ್ ನೂತನ ಶಾಖೆಯನ್ನು ಸೀನಿಯರ್ ಮ್ಯಾನೇಜರ್ ಆದ ಶ್ರೀಯುತ ಶಂಕರ್ ಸರ್ ಮತ್ತು ಬೆಂಗಳೂರಿನ ಐಶರ್ ಟ್ರಾಕ್ಟರ್ ನ ಡಿ.ಎಂ. ಶ್ರೀಯುತ ವಿಶ್ವನಾಥ್ ಪಾಟೀಲ್ ಕೆ.ಎಂ ರವರು ಟೇಪ್ ಕಟ್ ಮಾಡುವ ಮೂಲಕ ನೂತನ ಶಾಖೆಯನ್ನು ಎಲ್ಲ ರೈತರು ಹಾಗೂ ಸಾರ್ವಜನಿಕರ ಉಪಸ್ಥಿಯಲ್ಲಿ ಉದ್ಘಾಟಿಸಿದರು. ನಂತರ ರೈತರ ಸಮ್ಮಿಲನ ಹಾಗೂ ಗ್ರಾಹಕರ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಸರ್ವಿಸ್ ಇಂಜಿನಿಯರ್ ಆದ ಶ್ರೀಯುತ ಧನುಷ್ ಸರ್, ನೂತನ ಶಾಖೆಯ ಮಾಲೀಕರಾದ ಶ್ರೀಯುತ ನಿರಂಜನ್ ಸರ್ ಮತ್ತು ವಿನೋದ್ ಸರ್ ಹಾಗೂ ಎಲ್ಲ ಗಣ್ಯಾತಿ ಗಣ್ಯರಿಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶ್ರೀಯುತ ಶಂಕರ್ ಸರ್ ಮಾತನಾಡಿ ಆಗರ್ಭ ಶ್ರೀಮಂತರು ಸಹ ಅನ್ನವನ್ನು ಅಲ್ಲದೆ ಚಿನ್ನವನ್ನು ತಿನ್ನಲಾರರು ಹಾಗಾಗಿ ರೈತರು ಈ ದೇಶದ ಬೆನ್ನುಲುಬು ಎನ್ನುವುದನ್ನು ನಾವು ನೀವೆಲ್ಲರೂ ಎಂದಿಗೂ ಸಹ ಮರೆಯಬಾರದು ಎಂದು ತಿಳಿಸಿದರು.
ನಂತರ ಬೆಂಗಳೂರಿನ ಪ್ರತಿಷ್ಠಿತ ಐಶರ್ ಟ್ರಾಕ್ಟರ್ ಕಂಪನಿಯ ಡಿ.ಎಂ.ಆದ ಶ್ರೀಯುತ ಕೆ.ಎಂ ವಿಶ್ವನಾಥ್ ಪಾಟೀಲ್ ಸರ್ ಮಾತನಾಡಿ ಐಶರ್ ಕಂಪನಿಯ ಟ್ರಾಕ್ಟರ್ ಗಳು ರೈತರಿಗೆ ತುಂಬಾ ಅನುಕೂಲ ಹಾಗೂ ತುಂಬಾ ರಿಯಾತಿ ದರದಲ್ಲಿ ಸುಲಭ ಕಂತುಗಳಲ್ಲಿ ರೈತರಿಗೆ ಸಿಗುವ ಏಕೈಕ ಕಂಪನಿ ಇದಾಗಿದೆ ಇದರ ಸದುಪಯೋಗ ಎಲ್ಲ ರೈತರು ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.ನಂತರ ಐಶರ್ ಟ್ರಾಕ್ಟರ್ ಕಂಪನಿಯ ಸರ್ವಿಸ್ ಇಂಜಿನಿಯರ್ ಆದ ಶ್ರೀಯುತ ಧನುಷ್ ಸರ್ ಮಾತನಾಡಿ ಈ ಟ್ರಾಕ್ಟರ್ ಗಳು ಎಲ್ಲ ರೈತರಿಗೆ ಅತೀ ಹೆಚ್ಚು ಮೈಲೇಜು ಹಾಗೂ ದೀರ್ಘಕಾಲಿಕ ಬಾಳಿಕೆ ಮತ್ತು ಉತ್ತಮ ಗುಣಮಟ್ಟದ ಇಂಜಿನ್ ಹೊಂದಿದೆ ಅಲ್ಲದೆ ಹತ್ತು ಬಾರಿ ಉಚಿತ ಸರ್ವೀಸ್ ಕೊಡುವುದರ ಮೂಲಕ ಎಲ್ಲ ರೈತರ ಮನ ಗೆದ್ದಿರುವ ಟ್ರಾಕ್ಟರ್ ಇದಾಗಿದೆ ಎಂದು ಇದರ ಮಹತ್ವವನ್ನು ತಿಳಿಸಿಕೊಟ್ಟರು.ಹಿರಿಯೂರಿನಲ್ಲಿ ನೂತನವಾಗಿ ಆರಂಭವಾದ ಕಾಲ ಭೈರವೇಶ್ವರ ಟ್ರಾಕ್ಟರ್ ಶೋ ರೂಂ ನ ಶಾಖೆಯ ಮಾಲೀಕರು ಆದ ಶ್ರೀಯುತ ನಿರಂಜನ್ ಸರ್ ಮಾತನಾಡಿ ಹಿರಿಯೂರಿನ ಎಲ್ಲ ರೈತರು ಇದರ ಸದುಪಯೋಗ ಪಡಿಸಿ ಕೊಳ್ಳಬೇಕು ಅಲ್ಲದೆ ನಮ್ಮ ಶಾಖೆಗಳು ಹೊಸದುರ್ಗದಲ್ಲಿ ಸಹ ತೆರೆಯಲಾಗಿದೆ ನಿಮ್ಮ ಅಕ್ಕ ಪಕ್ಕ ಊರಿನ ರೈತ ಬಾಂಧವರಿಗೂ ತಿಳಿಸಿ ಟ್ರಾಕ್ಟರ್ ಕೊಂಡು ಕೊಳ್ಳಲು ಸಹಕರಿಸಿ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.ಶ್ರೀಯುತ ಶಿವಮೂರ್ತಿ.ಟಿ ಕೋಡಿಹಳ್ಳಿ ಮಾತನಾಡಿ ಇತ್ತೀಚಿನ ಆಧುನಿಕ ಕೃಷಿ ಪದ್ಧತಿಗೆ ಬೇಕಾದ ಎಲ್ಲ ತಂತ್ರಾಶಗಳನ್ನು ಮತ್ತು ಟೆಕ್ನಾಲಾಜಿಯನ್ನು ಹಾಗೂ ಸುರಕ್ಷತೆಯನ್ನು ಈ ಐಶರ್ ಟ್ರಾಕ್ಟರ್ ಗಳು ಒಳಗೊಂಡಿವೆ ಇವು ” ರೈತ ಈ ದೇಶದ ಬೆನ್ನುಲುಬು” ಎಂಬುದು ಏಷ್ಟು ಸತ್ಯವೋ ಅದೇ ರೀತಿಯಲ್ಲಿ ನಮ್ಮ ಈ ಕಂಪನಿಯ ಟ್ರಾಕ್ಟರ್ ಗಳು ರೈತರಿಗೆ ಬೆನ್ನುಲುಬಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಅಷ್ಟೇ ಸತ್ಯವಾಗಿದೆ ಎಂದರೆ ತಪ್ಪಾಗಲಾರದು, ಈಗಾಗಲೇ ನೂರಕ್ಕೂ ಹೆಚ್ಚಿನ ಟ್ರಾಕ್ಟರ್ ಗಳು ರೈತರ ಭೂಮಿಗೆ ಪಾದಾರ್ಪಣೆ ಮಾಡಿ ಕೆಲಸ ಮಾಡುತ್ತಿವೆ,
ರೈತರಿಂದ ಸಹ ಒಳ್ಳೆಯ ಸ್ಪಂದನೆ ದೊರೆತಿದ್ದು ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ ಹಾಗಾಗಿ ನೀವು ಕೂಡ ಮುಂದಿನ ದಿನಗಳಲ್ಲಿ ಈ ಕಂಪನಿಯ ಬೆಳವಣಿಗೆಗೆ ಸಹಕಾರ ನೀಡಿ ಎಲ್ಲ ರೈತ ಬಾಂಧವರು ಹಾಗೂ ಗ್ರಾಹಕರು ಸರ್ವೊತೋಮುಖ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿ ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ಏಚ್.ಡಿ ಬಿ ಫೈನಾನ್ಸ್ ನ ಮಂಜುನಾಥ್,ಎಲ್ ಅಂಡ್ ಟಿ ಫೈನಾನ್ಸ್ ನ ವಿನೋದ್ ರೈತರಾದ ಶರಣಪ್ಪ,ಗಂಗಾಧರಪ್ಪ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು, ನಂತರ ಎಲ್ಲ ರೈತರಿಗೆ ಮತ್ತು ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು,ನಂತರ ಎಲ್ಲರಿಗೂ ಸಿಹಿ ಹಂಚಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು,ಸುಮಾರು 150 ಕ್ಕೂ ಹೆಚ್ಚು ರೈತರು ಹಾಗೂ ಗ್ರಾಹಕರು ಭಾಗಿಯಾಗಿದ್ದರು,ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಈ ಕಾರ್ಯಕ್ರಮದಲ್ಲಿ ಶ್ರೀಮತಿ ರಂಜಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು,ಶ್ರೀಮತಿ ಕೋಕಿಲಾ ರವರು ಸ್ವಾಗತಿಸಿದರು,ಶ್ರೀಮತಿರಮ್ಯಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು,ನಿರಂಜನ್ ರವರು ವಂದಿಸಿದರು.
ವರದಿ:ಶಿವಮೂರ್ತಿ.ಟಿ.ಕೋಡಿಹಳ್ಳಿ