ಸಿದ್ದರಾಮೇಶ್ವರ 852 ನೇ. ಜಯಂತ್ಯೋತ್ಸವ ಕಾರ್ಯಕ್ರಮ ನಾಳೆ ಜರುಗುವುದು.
ಕಲಕೇರಿ ಫೆಬ್ರುವರಿ.20
ಕಲಕೇರಿ ಗ್ರಾಮದ ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಆವರಣದಲ್ಲಿ ಫೆ 21 ರಂದು ಬುಧವಾರ ಸಂಜೆ 5 ಗಂಟೆಗೆ ಶಿವಯೋಗಿ ಸಿದ್ದರಾಮೇಶ್ವರರ 852 ನೇ. ಜಯಂತ್ಯೋತ್ಸವ, ಶ್ರೀಭವಾನಿ ಕಂಪ್ಯೂಟರ ತರಭೇತಿ ಕೇಂದ್ರದ 20 ನೇ. ವರ್ಷದ ವಾರ್ಷಿಕೋತ್ಸವ ಸಮಾರಂಭ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಾಗಲಕೋಟೆಯ ಭೋವಿ ಗುರುಪೀಠದ ಇಮ್ಮಡಿ ಸಿದ್ರಾಮೇಶ್ವರ ಸ್ವಾಮಿಜಿಗಳು ವಹಿಸಲಿದ್ದು, ಕಲಕೇರಿಯ ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದ ಸಿದ್ದರಾಮ ಶಿವಾಚಾರ್ಯರು,ಗದ್ದುಗೇಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು ಸಾನಿದ್ಯ ವಹಿಸುವರು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕರಾದ ಸೊಮನಗೌಡ ಪಾಟೀಲ ಸಾಸನೂರ, ಉದ್ಯಮಿ ಆನಂದಗೌಡ ದೊಡ್ಡಮನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಪಾಟೀಲ,ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ ಸಿದ್ದರಾಮೇಶ್ವರರ ಪೋಟೊ ಪೂಜೆಯನ್ನು ನೇರವೆರಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ರಾಜಾಹ್ಮದ್ ಸಿರಸಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬೇಡರ್,ದಲಿತ ವಿಧ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ,ಶೀಲ್ಪಾ ಕುದರಗುಂಡ,ಲಲಿತಾ ದೊಡ್ಡಮನಿ,ರಾಮು ಹೋಸಪೇಟ,ಪಿಎಸ್ಐ ರೋಹಿಣಿ ಪಾಟೀಲ,ಪುಂಡಲಿಕ ಮುರಾಳ,ಸಿದ್ದು ಬಂಡಿವಡ್ಡರ, ಡಾ.ಶಶಿಕಾಂತ ಬಾಗೇವಾಡಿ,ಬಸವರಾಜ್ ಪಾಟೀಲ ಸೇರಿದಂತೆ ಇತರರು ಬಾಗವಹಿಸುವರು. ಸಂಜೆ 7 ಗಂಟೆಗೆ ತರಬೇತಿ ಕೇಂದ್ರದ ಮಕ್ಕಳು, ಕಲಾ ಸಿಂಚನ ಮೆಲೋಡಿಸ್ ತಂಡದವರಿಂದ ಸೌಂಸ್ಕ್ರತಿಕ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಹಣಮಂತ ವಡ್ಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭೋವಿ ಸಮಾಜದ ಎಲ್ಲಾ ಬಾಂಧವರುಎಲ್ಲಾ ಊರಿನ ಹಿರಿಯರು ನಾಗರಿಕರು ಬುಧವಾರ ನಡೆಯುವ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕೆಂದು ಕೋರಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟಿ