ಕೊಟ್ಟೂರಿನಲ್ಲಿ 75 ನೇ. ಸಂವಿಧಾನ ಜಾಗೃತಿ ಜಾಥಾದ ವಿಜೃಂಭಣೆಯಿಂದ ಜರುಗಿತು.
ಕೊಟ್ಟೂರು ಫೆಬ್ರುವರಿ.20
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಶ್ರೀಮರಿಕೊಟ್ರೇಶ್ವರ ದೇವಸ್ಥಾನದ ಮುಂಭಾಗ ಭಾರತ ಸಂವಿಧಾನಕ್ಕೆ 75 ನೇ. ವರ್ಷದ ಸಂಭ್ರಮ ಅಂಗವಾಗಿ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥವನ್ನು ತಹಶೀಲ್ದಾರರಾದ ಅಮರೇಶ್ ಜಿ ಕೆ , ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಾದ ನಸುರುಲ್ಲಾ , ಸಮಾಜ ಕಲ್ಯಾಣ ಇಲಾಖೆ ಜಗದೀಶ್ ಮತ್ತು ದಲಿತ ಸಂಘಟನಾ ಮುಖಂಡರು ಹಾಗೂ ಇತರೆ ಸಂಘಗಳ ಮುಖಂಡರು ಸೇರಿದಂತೆ ಸಂವಿಧಾನ ಜಾಗೃತಿ ಜಾಥಾವನ್ನು ಚಾಲನೆ ನೀಡಿದರು.
ಈ ಪಟ್ಟಣದ ಎಲ್ಲಾ ಶಾಲಾ ಶಿಕ್ಷಕರು ಮಕ್ಕಳು ಹಾಗೂ ಕೊಟ್ಟೂರೇಶ್ವರ ಕಾಲೇಜಿನ ಎನ್ ಸಿ ಸಿ ಘಟಕ ಸೇರಿದಂತೆ ಎತ್ತಿನ ಗಾಡಿ ಟ್ರ್ಯಾಕ್ಟರ್ ಸಕಲ ವಾದ್ಯಗಳೊಂದಿಗೆ ಅಂಬೇಡ್ಕರ್ ಭಾವಚಿತ್ರ ಮತ್ತು ಸಂವಿಧಾನ ಜಾಗೃತಿ ಜಾಥಾದ ರಥ ಸೇರಿದಂತೆ ವಿಜೃಂಭಣೆಯಿಂದ ಬಸ್ ಸ್ಟ್ಯಾಂಡ್ ಗಾಂಧಿ ಸರ್ಕಲ್ ಉಜ್ಜಿನಿ ಸರ್ಕಲ್ ಇಂತಹ ಸ್ಥಳಗಳಲ್ಲಿ ಶಾಲಾ ಮಕ್ಕಳಿಂದ ಸಂವಿಧಾನ ಜಾಗೃತಿಯ ಹಾಡುಗಳಿಗೆ ಶಾಲಾ ಮಕ್ಕಳಿಂದ ನೃತ್ಯ ಯಕ್ಷಗಾನ ನೃತ್ಯ ಹಾಗೂ ಘೋಷಣೆಗಳ ಮೂಲಕ ಕೊಟ್ಟೂರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಬಸ್ ಸ್ಟ್ಯಾಂಡ್ ಹತ್ತಿರ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬದ್ದಿ ಮರಿಸ್ವಾಮಿ ಪ್ರತಿಯೊಂದು ಜೀವಿಗೂ ಹಾಗೂ ಮಕ್ಕಳಿಗೂ ವೃದ್ಧರಿಗೆ ಮಹಿಳೆಯರಿಗೂ ಸ್ವಾತಂತ್ರ್ಯ ಸಾಮಾನತೆ ಸಾರಿದ ನಮ್ಮ ಸಂವಿಧಾನ ಜಾಗೃತಿಯು ಕೆಲವೇ ವಿಷಯಕ್ಕೆ ಸೀಮಿತವಾಗದೆ ಈ ಜಾಗೃತಿಯು ಪ್ರತಿ ಹಳ್ಳಿಗಳಲ್ಲಿ ಹಾಗೂ ನಗರಗಳಲ್ಲಿಯೂ ಜಾತ್ರಾ ರೂಪದಲ್ಲಿ ಸಾಗಲಿ ಇನ್ನು ಮುಂದೆ ಸಂವಿಧಾನವೇ ಒಂದು ಹಬ್ಬ ಅದೇ ನಮಗೆ ದೇವರು ಧರ್ಮ ಎಲ್ಲಾ ಎಂದು ಹೇಳಿದರು.
ತದ ನಂತರಡಿ ಎಸ್ಎಸ್ ಜಿಲ್ಲಾ ಸಂಚಾಲಕ ತೆಗ್ಗಿನಕೇರಿ ಕೊಟ್ರೇಶ್ ಪ್ರಪಂಚದಲ್ಲಿ ಅತ್ಯಂತ ದೊಡ್ಡದಾದ ಸಂವಿಧಾನ ಒಂದು ಜಾತಿಗೆ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬ ಕಟ್ಟ ಕಡೆ ವ್ಯಕ್ತಿಗೂ ಕೂಡ ಸಮಾನತೆಯನ್ನು ಕಲ್ಪಿಸಿ ಕೊಡುವ ಮೂಲಕ ಒಂದು ಮಹಿಳೆ ಜವಾನ ಕೆಲಸದಿಂದ ರಾಷ್ಟ್ರಪತಿ ಆಗ್ತಾಳೆ ಅಂದರೆ ಅದು ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಎಂದು ಹೇಳಿದರು.ಈ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ರೀತಿಯಲ್ಲಿ ಸಹಕರಿಸಿದ ಯುವ ಮುಖಂಡರಾದ ಮಣಿ ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಎ ನಸುರುಲ್ಲಾ ಇವರಿಗೆ ದಲಿತ ಮುಖಂಡರಿಂದ ತಾಲೂಕಿನ ಅಧಿಕಾರಿಗಳ ಮೂಲಕ ಸನ್ಮಾನ ಮಾಡಲಾಯಿತು.ನಂತರ ಚಿದಾನಂದ ಗುರುಸ್ವಾಮಿ ಎಸಿ ಅವರು ಸಂವಿಧಾನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಈ ಸಂದರ್ಭದಲ್ಲಿ ವೆಂಕಟಸ್ವಾಮಿ ಸಿಪಿಐ ಗೀತಾಂಜಲಿ ಸಿಂಧೆ ಪಿಎಸ್ಐ ಹಾಗೂ ಸಿಬ್ಬಂದಿ ವರ್ಗದಿಂದ ಉತ್ತಮವಾದ ಬಂದೋಬಸ್ತ್ ,ರಕ್ಷಣೆ ನೀಡಿದರು.ಈ ಸಂದರ್ಭದಲ್ಲಿ ಎಲ್ಲಾ ಶಾಲಾ ಮಕ್ಕಳು ಶಿಕ್ಷಕರು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ದಲಿತ ಹಾಗೂ ಇತರೆ ಎಲ್ಲಾ ಸಂಘಟನಾಕಾರರು ಈ ಸಂವಿಧಾನ ಜಾಗೃತಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು