ಗಣಿತ ಲೆಕ್ಕದ ಪ್ರಶ್ನೆಗೆ ಕ್ಷಣ ಮಾತ್ರದಲ್ಲಿ ಉತ್ತರಿಸಿದ ಬಸವರಾಜ್ ಉಮ್ರಾಣಿ, ಬುದ್ದಿ ಶಕ್ತಿ ತಿಳಿದ ಮಕ್ಕಳು, ಆಶ್ಚರ್ಯ ಚಕಿತರು.
ಕೂಡ್ಲಿಗಿ ಫೆಬ್ರುವರಿ.21
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ವಿಶ್ವಚೇತನ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಭಾನುವಾರ ದಂದು ನಡೆದ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಮುಖ್ಯ ಅತಿಥಿಗಳಾಗಿ ಹಾಗೂ ವಿದ್ಯಾರ್ಥಿಗಳಿಗೆ ಗಣಿತ ವಿಷಯವಾಗಿ ಬಸವರಾಜ್ ಉಮ್ರಾಣಿ ರವರು ತಮ್ಮ ಎರಡು ಕಣ್ಣಿನ ಅಂಧಕಾರವನ್ನು ಮೆಟ್ಟಿನಿಂತ್ತು ಕರ್ನಾಟಕದ ಹ್ಯೂಮನ್ ಕಂಪ್ಯೂಟರ್ ಎಂದೇ ಹೆಸರಾಗಿರುವ ಇವರು ಗಣಿತದ ಎಂತ ಕಷ್ಟದ ಲೆಕ್ಕವಾದರೂ ಕ್ಷಣ ಮಾತ್ರದಲ್ಲಿ ಕೊಟ್ಟಿರುವಂತಹ ಲೆಕ್ಕದ ಪ್ರಶ್ನೆಯನ್ನು ಕೇಳಿಸಿ ಕೊಂಡು ತಮ್ಮ ಬುದ್ಧಿ ಶಕ್ತಿಯ ಚಲನದಿಂದ ಕಂಪ್ಯೂಟರ್ ಗಿಂತ ವೇಗವಾಗಿ ಉತ್ತರವನ್ನು ಹೇಳುವ ಚಮತ್ಕಾರ ತೋರಿಸುವ ವ್ಯಕ್ತಿ ಇವರು, ಇವರು ನೂರು ವರ್ಷದ ಯಾವುದೇ ದಿನಾಂಕವನ್ನು ಹೇಳಿದರೆ ಆ ಕ್ಷಣದಲ್ಲಿ ಆ ದಿನಾಂಕದ ವರ್ಷದಲ್ಲಿ ಬರುವ ದಿನದ ವಾರವನ್ನು ಹೇಳಬಲ್ಲ ಜ್ಞಾನ ಅವರ ಅಂಧಕಾರದ ಕತ್ತಲ ಸಮಸ್ಯೆ ಎಂಬ ಭ್ರಮೆಯಲ್ಲಿ ಇರುವವರಿಗೆ ಶಕ್ತಿ ತುಂಬುವ ಪ್ರೇರಣೆಯಾಗಿದ್ದಾರೆ.
ಎರಡು ಕಣ್ಣುಗಳುಳ್ಳ ಜನರಿಗೆ ಇವರ ಮಾರ್ಗದರ್ಶನವು ಉತ್ತಮ, ಅನಿಸುತ್ತೆ ಹಾಗೆ ಬೆಳಕಿನತ್ತ ತಮ್ಮ ಬುದ್ಧಿ ಶಕ್ತಿಯ ಬಲವನ್ನು ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನೆರೆದಂತ ವಿದ್ಯಾರ್ಥಿಳಿಗೂ ಹಾಗೂ ಪೋಷಕರು ಹಾಗೂ ಕಾರ್ಯಕ್ರಮ ದಲ್ಲಿ ನೆರೆದಂತವರು ಬಸವರಾಜ್ ಉಮ್ರಾಣಿ ಅವರು ಲೆಕ್ಕದ ಪ್ರಶ್ನೆ ಕೇಳಿದವರಿಗೆ ಉತ್ತರವನ್ನು ಹೇಳುತ್ತಿರುವುದನ್ನು ನೋಡಿದ ಹಾಗೂ ಅವರ ಬುದ್ಧಿ ಶಕ್ತಿಯನ್ನು ತಿಳಿದ ಮಕ್ಕಳು ಮತ್ತು ಪೋಷಕರು ಆಶ್ಚರ್ಯ ಚಕಿತರಾದರು.ಈ ಸಂದರ್ಭದಲ್ಲಿ ವಿಶ್ವಚೇತನ ಇಂಗ್ಲಿಷ್ ಮೀಡಿಯಾ ಶಾಲೆಯ ಸಂಸ್ಥಾಪಕರು ಕರಿಬಸಮ್ಮ, ಅನಿಲ್ ಕುಮಾರ್, ಕೂಡ್ಲಿಗಿ ಸ್ನೇಹಿತರ ಬಳಗದ ಅಧ್ಯಕ್ಷರಾದ ರೆಹಮಾನ್, ಪಟ್ಟಣ ಪಂಚಾಯತಿ ಸದಸ್ಯರಾದ ಶುಕುರು, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ ಈಶಪ್ಪ , ಹಿರೇಮಠ ವಿದ್ಯಾಪೀಠದ ಉಪನ್ಯಾಸಕರಾದ ದೇವಪ್ಪ, ಇನ್ನೂ ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ