ಸಂತ ಸೇವಾಲಾಲ್ ರು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ತರೀಕೆರೆ ಫೆಬ್ರುವರಿ.21
ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಸಹ ಲಂಬಾಣಿ ಸಮಾಜದ ಬಂಧುಗಳು ವಾಸವಾಗಿದ್ದರು, ಭಾಷೆ ಮಾತ್ರ ಒಂದೇ ದೈವ ಒಂದೇ ಸಂಸ್ಕೃತಿ ಒಂದೇ ಆಗಿದೆ ಎಂದು ಶ್ರೀ ಸೇನಾ ಭಗತ್ ಸ್ವಾಮೀಜಿ ರವರು ಹೇಳಿದರು. ಅವರು ಮಂಗಳವಾರ ಬಾವಿಕೆರೆ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಬಣಜಾರ ಸೇವಾ ಸಮಿತಿ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ್ ಮರಿಯಮ್ಮ ದೇವಿಯವರ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ನೂತನ ಗೃಹಪ್ರವೇಶ ಹಾಗೂ ಕಳಸ ಪ್ರತಿಷ್ಠಾಪನೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸಂತ ಸೇವಾಲಾಲ್ ಮಹಾರಾಜರು ತಮ್ಮ ಜೀವನವನ್ನೇ ಸಮಾಜದ ಅಭಿವೃದ್ಧಿಗೆ ಮುಡಿಪಾಗಿಟ್ಟವರು, ಬಂಜಾರ ಸಮಾಜದವರಿಗೆ ಅರಿವು ಮೂಡಿಸುವಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು. ಮಂಜು ಮಹಾರಾಜ ಸ್ವಾಮೀಜಿ ಆಶೀರ್ವಚನ ನೀಡಿ, ಕೊಟ್ಟ ಶಾಪ ಉಂಡ ಊಟ ವಾಪಸ್ಸು ಬರುವುದಿಲ್ಲ. ದೇವಸ್ಥಾನವನ್ನು ಕಟ್ಟಿಸಿದ್ದೀರಿ ಪ್ರತಿ ಅಮಾವಾಸ್ಯೆ ದಿವಸ ವಿಶೇಷವಾದ ಪೂಜೆ, ವ್ರತಗಳನ್ನು ಮಾಡುತ್ತೇವೆ ಎಂದು ಸಂಕಲ್ಪ ಮಾಡಿರಿ, ಬಡ ಮಕ್ಕಳ ವ್ಯಾಸಂಗಕ್ಕೆ ಅನುಕೂಲ ಮಾಡಿರಿ ದೇವರ ಸೇವೆ ಮಾಡಿದ ಪುಣ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶಾಸಕರಾದ ಜಿಎಚ್ ಶ್ರೀನಿವಾಸ್ ರವರ ಪುತ್ರಿ ರಚನಾ ಶ್ರೀನಿವಾಸ್ ಮಾತನಾಡಿ ಲಂಬಾಣಿ ಭಾಷೆ ಮತ್ತು ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದೆ ನಿಮ್ಮ ಸಂಸ್ಕೃತಿ ಭಾಷೆಯನ್ನು ಉಳಿಸಿ ಬೆಳೆಸಿರಿ ಎತ್ತಿ ಹಿಡಿಯುವ ಕೆಲಸ ಮಾಡಿರಿ, ನೀವೆಲ್ಲರೂ ಸಹ ನಮಗೆ ತೋರಿದ ಪ್ರೀತಿ ಅಭಿಮಾನಕ್ಕೆ ನಾವೆಂದು ಋಣಿಯಾಗಿದ್ದೇವೆ ನಿಮ್ಮ ಸಮಾಜಕ್ಕೆ ನಮ್ಮ ಸಹಕಾರ ಖಂಡಿತ ಇದೆ ಎಂದು ಹೇಳಿದರು. ಬಣಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಮಾತನಾಡಿ ಸಂತ ಸೇವಾಲಾಲ್ ಮಹಾರಾಜ್ ವ್ಯಕ್ತಿಯಾಗಿ ದೈವತ್ವವನ್ನು ತೋರಿಸಿಕೊಟ್ಟರು, ಕಾಯಕದಿಂದ ದುಡಿದು ಬದುಕಬೇಕೆಂದು ಉಪದೇಶ ನೀಡಿದ್ದಾರೆ. ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾಲಾಲ್ ಬಂಜಾರ್ ಸೇವಾ ಸಮಿತಿ ಅಧ್ಯಕ್ಷರಾದ ಸಾಮ್ಯ ನಾಯಕ ಮಾತನಾಡಿ 2010 ರಿಂದ ದೇವಸ್ಥಾನ ಕಟ್ಟಲು ಪ್ರಾರಂಭಿಸಿ ಬಹು ಕಷ್ಟಗಳನ್ನು ಅನುಭವಿಸಿ ದಾನಿಗಳಿಂದ ದೇನಿಗೆ ಪಡೆದು, ಶ್ರೀ ಕ್ಷೇತ್ರ ಧರ್ಮಸ್ಥಳ ವೀರೇಂದ್ರ ಹೆಗಡೆಯವರಿಂದಲೂ ಸಹ ಆರ್ಥಿಕ ಸಹಕಾರ ಪಡೆದು, ಶಾಸಕರಾದ ಜಿ ಎಚ್ ಶ್ರೀನಿವಾಸ್ ರವರಿಂದಲೂ ಸಹಕಾರ ಪಡೆದು ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು. ಬಂಜಾರ ಬಳಗದ ಅಧ್ಯಕ್ಷರಾದ ಬಿ ಕೃಷ್ಣ ನಾಯ್ಕ, ಶಿಕ್ಷಕರಾದ ಚನ್ನನಾಯಕ, ವಕೀಲರಾದ ಶೇಖರ್ ನಾಯ್ಕ, ಶಿವಶಂಕರ್ ನಾಯ್ಕ, ಪತ್ರಕರ್ತರಾದ ಪ್ರದೀಪ್ ನಾಯಕ್ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಮಹಾಬಲ, ಕರವೇ ನಾಗರಾಜ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಾಖ ವ್ಯವಸ್ಥಾಪಕರಾದ ಕುಸುಮಾದರ್ ರವರು ಉಪಸ್ಥಿತರಿದ್ದು ಈ ಸಮಾರಂಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್.ತರೀಕೆರೆ