ದಂತ ಚಿಕಿತ್ಸೆ ಶಿಬಿರದಲ್ಲಿ ದಂತ ಸುರಕ್ಷತಾ ತಪಾಸಣೆ.

ಕೊಟ್ಟೂರು ಫೆಬ್ರುವರಿ.21

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಾಪುರ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಸಮುದಾಯ ಆರೋಗ್ಯ ಕೇಂದ್ರ ಉಜ್ಜಿನಿ ಇವರ ಸಹಯೋಗದಲ್ಲಿ ಮಕ್ಕಳಿಗೆ ದಂತ ತಪಾಸಣೆ ಹಾಗೂ ದಂತ ಚಿಕಿತ್ಸೆ ಶಿಬಿರದಲ್ಲಿ ಹಲ್ಲುಗಳ ರಕ್ಷಣೆ ತೆಗೆದು ಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಕುರಿತು ದಂತ ವೈದ್ಯರಾದ ಡಾಕ್ಟರ್ ಲಕ್ಷ್ಮಿ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀದೇವಿ, ಉಷಾ, ಆಶಾ ಕಾರ್ಯ ಕರ್ತೆಯರಾದ ಸೃಷ್ಟಿ ಮತ್ತು ಯಶೋಧ ಶಾಲೆ ಮುಖ್ಯ ಗುರುಗಳಾದ ಡಿ ಎಮ್ ಮಂಜುಳಾ ಹಾಗೂ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button