ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಕಟ್ಟಡ ಫೆ. 28 ರಂದು ಉದ್ಘಾಟನೆ.
ಇಂಡಿ ಫೆಬ್ರುವರಿ.22
ಪಟ್ಟಣದ ಸಿಂದಗಿ ರಸ್ತೆಯ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ ಇಂಡಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಶತಮಾನೋತ್ಸವ ಕಟ್ಟಡ ಫೆ,28 ರಂದು ಲೋಕಾರ್ಪಣೆ ಗೊಳ್ಳಲಿದೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಹರಳಯ್ಯ, ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಪರಮಾನಂದ ಚಾಂದಕವಟೆ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘಕ್ಕೆ 1994 ರಲ್ಲಿ ನಡೆದಾಡುವ ದೇವರಾದ ಸಿದ್ದೇಶ್ವರ ಮಹಾ ಸ್ವಾಮಿಜೀಗಳು ಅಡಿಗಲ್ಲು ಹಾಕಿದ್ದಾರೆ ಅವರ ಪಾದ ಸ್ಪರ್ಶದಿಂದ ಇಂದು ಸಂಘ ಇಷ್ಟೊಂದು ಹೆಮ್ಮರವಾಗಿ ಬೆಳೆದಿದೆ ಎಂದರು. ಕಾತ್ರಾಳ-ಬಾಲಗಾಂವ್ ಮಠದ ಅಮೃತಾನಂದ ಮಹಾ ಸ್ವಾಮಿಗಳು ವಹಿಸಲಿದ್ದು,ನೈತೃತ್ವವನ್ನು ಶಾಸಕ ಯಶವಂತರಾಯಗೌಡ ಪಾಟೀಲ ವಹಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ, ಸಚಿವ ರಾಜಣ್ಣಾ, ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಆದ್ದರಿಂದ ಶಿಕ್ಷಕ ಬಂಧುಗಳು, ಗುರು ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೋಳಿಸಬೇಕು ಎಂದು ಮನವಿ ಮಾಡಿದರು ಶಿಕ್ಷಕ ಎಂ.ಎಂ ನೇದಲಗಿ, ವಾಯ್.ಟಿ ಪಾಟೀಲ, ಶಾರದಾ ಗಿರಣಿ, ಟಿ.ಕೆ. ಜಂಬಗಿ, ಡಿ.ಜಿ ರಾಠೋಡ, ಜೆ.ಎ. ಚವಡಿಹಾಳ, ಬಂಗಾರಪ್ಪ ಜಮಾದಾರ, ಎ.ಎಂ. ಶೇಖ, ಶ್ರೀದೇವಿ ಮುಗಳಿ, ಜಯರಾಮ ಚವ್ಹಾಣ, ಸಿ.ಎಸ್ ಝಳಕಿ, ಆನಂದ ಕೆಂಬಾವಿ, ಅನಿತಾ ರಾಠೋಡ, ವಿಜಯಲಕ್ಷ್ಮೀ ಡಿಸ್ಸೇ, ಜಯಶ್ರೀ ತೇಲಗ, ಅಂಬರೀಶ ರಾಠೋಡ, ಸುರೇಶ ಚವ್ಹಾಣ, ಕೆ.ಎಸ್ ಕಾಂಬಳೆ, ಜಟ್ಟೆಪ್ಪ ಮಾದರ, ಕೆ.ಎಂ. ಇಂಡಿ, ಸಿ.ಆರ್ ಮ್ಯಾಕೇರಿ ಸೇರಿದಂತೆ ಅನೇಕ ಶಿಕ್ಷಕ ಸಂಘದ ಪದಾಧಿಕಾರಿಗಳು ಇದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ