ಬಂಜಾರ ಸಮಾಜ ಭಕ್ತಿಯ ಸಮಾಜ – ಬಸವ ಸೇವಾಲಾಲ್ ಸರ್ದಾರ್.
ತರೀಕೆರೆ ಫೆಬ್ರುವರಿ.22
ಆತ್ಮ ಶುದ್ಧವಾಗಿದ್ದರೆ ನಮ್ಮೊಳಗೆ ದೇವರಿದ್ದಾನೆ, ಕಾಶಿ ಧರ್ಮಸ್ಥಳ ಗಳಂತಹ ಪುಣ್ಯ ಕ್ಷೇತ್ರಗಳಿಗೆ ಹೋಗಿ ಬಂದರೆ ಸಾಲದು ಒಳ್ಳೆಯ ಮನಸ್ಸು ಇರಬೇಕು ಎಂದು ಚಿತ್ರದುರ್ಗದ ಬಂಜಾರ ಗುರುಪೀಠದ ಬಸವ ಸೇವಾಲಾಲ್ ಸರ್ದಾರ್ ಸ್ವಾಮೀಜಿ ಅವರು ಇಂದು ಗೋಪಾಲ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಮರಿಯಮ್ಮ ದೇವಿಯ ನೂತನ ದೇವಾಲಯ ಪ್ರವೇಶೋತ್ಸವ ಕಳಸ ಪ್ರತಿಷ್ಠಾಪನೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದರು. ಮನುಕುಲಕ್ಕೆ ಸಂತ ಸೇವಾಲಾಲ್ ರವರ ಆಶೀರ್ವಾದವಿದೆ, ಬಂಜಾರ ಸಮಾಜ ಭಕ್ತಿಯ ಸಮಾಜ. ಡಾ. ಬಿಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸಿ ನೀಡಿದ್ದಾರೆ, ಆದ್ದರಿಂದಲೇ ಸರ್ಕಾರಿ ಸವಲತ್ತುಗಳನ್ನು ನಾವು ಪಡೆದು ಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಕೆಂಚೇಶ್ವರ ಸ್ವಾಮಿ ತುಳಜಾ ಭವಾನಿ ಸಂಸ್ಥಾನ ಮಠ ಗೋಪಾಲ ಗ್ರಾಮದ ಮಂಜು ಮಹಾರಾಜ ಸ್ವಾಮೀಜಿ ಮಾತನಾಡಿ ರಂಗನಾಥ ಸ್ವಾಮಿ ಮತ್ತು ಸೇವಾಲಾಲರ ದಿವ್ಯ ಸಾನಿಧ್ಯದಲ್ಲಿ ನಾವಿದ್ದೇವೆ, ದೇವರು ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಎಲ್ಲವನ್ನೂ ದಯ ಪಾಲಿಸಿದ್ದಾನೆ. ಊರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ನನ್ನ ಸಹಕಾರವೂ ಇರುತ್ತದೆ, ಪ್ರೀತಿ ವಾತ್ಸಲ್ಯ,ನನ್ನ ಜನ,ಎಂಬುದು ಇರಬೇಕೇ ವಿನಹ ಜಾತಿ ಭೇದ ಎನ್ನುವುದಲ್ಲ. ಶ್ರಮಪಟ್ಟು ದೇವಸ್ಥಾನವನ್ನು ನಿರ್ಮಾಣ ಮಾಡಿದ್ದೇವೆ ಎಲ್ಲರ ಪ್ರೀತಿ ವಿಶ್ವಾಸ ದಿಂದಲೇ ಗೋಪಾಲ ಗ್ರಾಮದಲ್ಲಿ ಮಠ ಸ್ಥಾಪಿಸಿರುತ್ತೇನೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶಾಸಕ ಜಿ ಎಚ್ ಶ್ರೀನಿವಾಸರವರ ಪತ್ನಿ ವಾಣಿ ಶ್ರೀನಿವಾಸರವರು ಮಾತನಾಡಿ ದೇವಸ್ಥಾನ ಕಟ್ಟುವುದು ಎಷ್ಟು ಮುಖ್ಯವೋ ಪೂಜೆ ಪುನಸ್ಕಾರ ನಡೆಸಿ ಕೊಂಡು ಹೋಗುವುದು ಅಷ್ಟೇ ಮುಖ್ಯ ಎಂದು ಹೇಳಿದರು. ಬಂಜಾರ ಸಮಾಜವು ನಮಗೆ ತುಂಬಾ ಸಹಕಾರ ನೀಡಿದ್ದೀರಿ ನಿಮಗೆ ನಮ್ಮ ಸಹಕಾರ ಇರುತ್ತದೆ, ಈ ಗ್ರಾಮಕ್ಕೆ ಸ್ಮಶಾನವನ್ನು ಮಂಜೂರು ಮಾಡಿಸಿ ಕೊಟ್ಟಿರುವುದಾಗಿ ಹೇಳಿದರು . ಇದೇ ಸಂದರ್ಭದಲ್ಲಿ ವಿಧವಾ ವೇತನ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಗಳಿಗೆ ಮಂಜೂರಾತಿ ಪತ್ರವನ್ನು ವಿತರಿಸಿದರು. ಶಿಕ್ಷಕ ಚನ್ನನಾಯಕ ಪ್ರಸ್ತಾವಿಕವಾಗಿ ಮಾತನಾಡಿದರು. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕೆಂಪೇಗೌಡರು, ದಾವಣಗೆರೆ ಪಿಡಿಒ ರವಿ, ಗ್ರಾಮ ಪಂಚಾಯಿತಿ ಸದಸ್ಯ ಮಂಜಪ್ಪ, ಬಂಜಾರ ಸಂಘದ ಅಧ್ಯಕ್ಷರಾದ ರಾಮನಾಯ್ಕ ಮಾತನಾಡಿದರು. ಬಂಜಾರ ಬಳಗದ ತಾಲೂಕು ಅಧ್ಯಕ್ಷ ಬಿ ಕೃಷ್ಣನಾಯಕ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರನ್ನು ಹಾಗೂ ಗೋವಿ ಗೋವಿಂದ ನಾಯಕ, ವಾಲ್ಯನಾಯ್ಕ ( ನಾಯಕ್), ಮಂಜ ನಾಯಕ್(ಡಾವ್ ), ಶಂಕ್ರನಾಯ್ಕ ( ಕಾರಬಾರಿ ) ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲತಾ ಪಾಲಯ್ಯ, ಉಪಾಧ್ಯಕ್ಷರಾದ ಕವಿತಾ ರಂಗನಾಥ್, ಸದಸ್ಯರಾದ ದರ್ಶನ್, ಲೋಕೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು ಪಾವನಿ ಪ್ರಾರ್ಥಿಸಿ, ಭೀಮ ನಾಯ್ಕ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್.ತರೀಕೆರೆ