ಸಂವಿಧಾನವೇ ನಮ್ಮ ದೇವರು ಸಂವಿಧಾನವೇ ನಮ್ಮ ಧರ್ಮಗ್ರಂಥ – ಬದ್ದಿ ಮರಿಸ್ವಾಮಿ.
ಅಂಬಳಿ ಫೆಬ್ರುವರಿ.22
ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮ ಪಂಚಾಯತಿಯಲ್ಲಿ 21-02-2024 ಬುಧವಾರ ದಂದು ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೊಳಲಮ್ಮ ಹನುಮಂತಪ್ಪನವರು ಮತ್ತು ಸದಸ್ಯರುಗಳೆಲ್ಲಾ ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕುವುದರ ಮೂಲಕ ಚಾಲನೆ ನೀಡಿದರು.ಎತ್ತಿನ ಗಾಡಿ ಟ್ರಾಕ್ಟರ್ ಡ್ರಂ ಸೆಟ್ ಸಮಾಳ ಮತ್ತು ತಮಟೆ ಕುಂಭ ಹೊತ್ತ ಮಹಿಳೆಯರು ಒಟ್ಟಿನಲ್ಲಿ ಸಕಲ ವಾದ್ಯಗಳೊಂದಿಗೆ ಅಂಬಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಯೊಂದು ಶಾಲೆಯ ಮಕ್ಕಳು ಸಂವಿಧಾನ ಜಾಗೃತಿ ರಥವು ಸೇರಿದಂತೆ ಯುವಕರು ನೃತ್ಯ ಮಾಡುವುದರ ಮೂಲಕ ಸಂವಿಧಾನದ ಜಾಗೃತಿಯ ಘೋಷಣೆ ಕೂಗುತ್ತಾ ಈ ಭಾಗದಲ್ಲಿ ಹೆಸರುವಾಸಿಯಾದ ಕಲ್ಲೇಶ್ವರ ದೇವಸ್ಥಾನದ ಮುಂದೆ ಸಭೆ ಸೇರಿ ಊರಿನ ಮುಖಂಡರಾದ ಭರಮರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬದ್ದಿ ಮರಿಸ್ವಾಮಿ ಪ್ರಪಂಚದಲ್ಲಿ ಅತಿ ದೊಡ್ಡದಾದ ಹಾಗೂ ಜಾತ್ಯತೀತ ಸಂವಿಧಾನ ನಮ್ಮದು ಇದನ್ನು ಜಾತಿ ಮತ ಪಂಥ ಎನ್ನದೆ ಸರ್ವ ಜನರಿಗೂ ಮಹಿಳೆಯರಿಗೂ ಮಕ್ಕಳಿಗೂ ವೃದ್ಧರಿಗೂ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಯು ಸ್ವತಂತ್ರವಾಗಿ ಬದುಕುವ ಹಕ್ಕನ್ನು ಈ ಸಂವಿಧಾನದಲ್ಲಿ ರಚಿಸಲಾಗಿದೆ.
ಇಂತಹ ಸಂವಿಧಾನದ ಅಂಗೀಕಾರ ಆಗಿ 75ನೇ ವರ್ಷದ ಸಂಭ್ರಮವನ್ನು ಸಂವಿಧಾನ ಜಾಗೃತಿ ಜಾಥನಮ್ಮ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ.ಈ ಸಂವಿಧಾನ ಜಾಗೃತಿ ಜಾಥವು ಕೇವಲ ಜಾಥವಷ್ಟೇ ಅಲ್ಲ ಇದು ಒಂದು ಜಾತ್ರೆಯಾಗಿ ಅದ್ದೂರಿಯಾಗಿ ನಡೆಯುತ್ತಾ ಬಂದಿದೆ ಸಂವಿಧಾನವೇ ದೇವರು ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂದು ಹೇಳಿದರು.ನಂತರ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ತಗ್ಗಿನಕೇರಿ ಕೊಟ್ರೇಶ್ ಸಂವಿಧಾನ ಜಾಗೃತಿ ಜಾಥ ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ಅರಿತು ಕೊಳ್ಳಬೇಕಾಗಿದೆ ಇದರಲ್ಲಿರುವ ವಿಷಯದ ಪ್ರತಿಯೊಬ್ಬರು ತಿಳಿಯಬೇಕಾಗಿದೆ ಇದರಂತೆ ನಡೆದು ಕೊಳ್ಳಬೇಕು ಎಂದು ಹೇಳಿದರು.ಮುರಾರ್ಜಿ ದೇಸಾಯಿ ವಿದ್ಯಾರ್ಥಿಗಳಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ನಮ್ಮ ದೇಶಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಒಂದು ನಾಟಕದ ಮೂಲಕ ಪ್ರದರ್ಶನ ಮಾಡಿ ಮಕ್ಕಳು ಅಚ್ಚುಕಟ್ಟಾಗಿ ಅರ್ಥವಾಗುವ ಹಾಗೆ ಪ್ರದರ್ಶನ ನೀಡಿ ಸಂವಿಧಾನ ಜಾಗೃತಿ ಮೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ದೇವೇಶ್ ಹಾಗೂ ಕಾರ್ಯದರ್ಶಿಗಳಾದ ಪ್ರದೀಪ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಸಮಾಜ ಕಲ್ಯಾಣ ಇಲಾಖೆ ಜಗದೀಶ್ ನಿಬ್ಗೂರ್ ಮತ್ತು ಸಿಬ್ಬಂದಿ ವರ್ಗ ಎಲ್ಲಾ ಶಾಲಾ ಶಿಕ್ಷಕರು ಮಕ್ಕಳು ಎಚ್ ಮಾರೇಶ್ ಕುಡಿತಿನಮಗ್ಗಿ ಹನುಮಂತಪ್ಪ ದೇವೇಂದ್ರಪ್ಪ ನಿಂಗರಾಜ್ ಮತ್ತು ಅಜಿತ್ ಕುಮಾರ್ ಮತ್ತು ಊರಿನ ಮುಖಂಡರು ಯುವಕರು ಮಹಿಳೆಯರು ಮಕ್ಕಳು ಎಲ್ಲರೂ ಈ ಸಂವಿಧಾನ ಜಾಗೃತಿ ಜಾಥದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು