04 ರಂದು ಕಾಯಕ ಯೋಗಿ ಶ್ರೀ ಶಿವ ಶರಣ ನೂಲಿ ಚಂದಯ್ಯನವರ – 918 ನೇ. ಅದ್ದೂರಿ ಜಯಂತ್ಯೋತ್ಸವ.
ಹುನಗುಂದ ಸ.03


ನಾಳೆ ಹುನಗುಂದ ನಗರದಲ್ಲಿ ಶಿವ ಶರಣ ನೂಲಿ ಚಂದಯ್ಯನವರ 918 ನೇ. ಅದ್ದೂರಿ ಜಯಂತೋತ್ಸವವನ್ನು ಮಾಡುವುದಾಗಿ ಸಮಾಜ ಅಧ್ಯಕ್ಷ ಎಸ್.ಎಸ್ ಸಂಗಮದ ಅವರು ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿದರು ಬೆಳಿಗ್ಗೆ 09:00 ಗಂಟೆ ಯಿಂದ ಶಿವ ಶರಣ ನೂಲಿ ಚಂದಯ್ಯ ನವರ ಭಾವ ಚಿತ್ರ ಮೆರವಣಿಗೆಯನ್ನು ಮುತ್ತೈದೆಯರಿಂದ ಕುಂಭ ಮೇಳ ಮೆರವಣಿಗೆ ಮೂಲಕ ನಗರದ ಪ್ರಮುಖ ಬಿದಿಗಳಲ್ಲಿ ಸಾಗಿ ವಿಜಯ ಮಹಾಂತೇಶ ಕಲ್ಯಾಣ ಮಂಟಪದಲ್ಲಿ 1:00 ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ನಂತರ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಭಜಂತ್ರಿ ಕಾರ್ಯಕ್ರಮದ ಉದ್ಘಾಟನೆಯನ್ನು ಜನಪ್ರಿಯ ಶಾಸಕರಾದ ಡಾ, ವಿಜಯಾನಂದ ಕಾಶಪ್ಪನವರ ಮಾಡಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳು, ಸಂಸದರು, ಮಾಜಿ ಶಾಸಕರು ಹಾಗೂ ರಾಜ್ಯ ಮಟ್ಟದ ಜಿಲ್ಲಾ ಮಟ್ಟದ ಕೊರಮ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ನಂತರ ಮಾತನಾಡಿದ ಸಮಾಜದ ಮಾಜಿ ಅಧ್ಯಕ್ಷರು ಬಿಜೆಪಿ ಪಕ್ಷದ ಮುಂಡರಾದ ಬಸವರಾಜ್ ಹುನಕುಂಟಿ ಮಾತನಾಡಿ ಜಿಲ್ಲೆಯ ಹಾಗೂ ಉಭಯ ತಾಲೂಕಿನ ಹುನಗುಂದ ನಗರದ ಇಲಕಲ್ಲ ತಾಲೂಕಿನ ಕೊರಮ ಸಮಾಜದ ಎಲ್ಲಾ ಮುಖಂಡರು ನಾಳೆ ಬೆಳಿಗ್ಗೆ 08:00 ಗಂಟೆಗೆ ಹುನಗುಂದ ನಗರದ ನಮ್ಮ ಸಮಾಜದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ ದಿಂದ ಭವ್ಯ ಮೆರವಣಿಗೆ ನಡೆಯಲಿದ್ದು ಮುತ್ತೈದೆಯರು ಬೇಗ ಬಂದು ಕುಂಭವನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಭಾಗವಹಿಸ ಬೇಕು.

ಕ್ಷೇತ್ರದ ಶಾಸಕರಾದ ಡಾ, ವಿಜಯಾಂದ.ಎಸ್ ಕಾಶಪ್ಪನವರು ಹಾಗೂ ಮಾಜಿ ಶಾಸಕರಾದ ಶ್ರೀ ದೋಡ್ಡನಗೌಡ.ಜಿ ಪಾಟೀಲ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಎಸ್.ಜಿ ನಂಜಯ್ಯನಮಠ, ಸಹಕಾರಿ ಧುರೀಣರಾದ ಶ್ರೀ ಆರ್,ಪಿ ಕಲಬುರ್ಗಿ, ಸೇರಿದಂತೆ ಅನೇಕ ಮುಖಂಡರು ನಾಳೆ ಉಪಸ್ಥಿತಿ ವಹಿಸಲಿದ್ದಾರೆ ಎಂದರು. ಈ ಪತ್ರಿಕಾ ಗೋಷ್ಠಿಯಲ್ಲಿ ಸಮಜದ ಮುಖಂಡರಾದ ಶ್ರೀ ತುಕಾರಾಮ.ಭಜಂತ್ರಿ, ಶ್ರೀ ಭೀಮಸಿ (ಮುತ್ತಣ್ಣ) ಭಜಂತ್ರಿ, ಶ್ರೀ ಮಹಾಂತೇಶ ಬಿಂಜವಾಡಗಿ, ಶ್ರೀ ಡಿ,ಬಿ ವಿಜಯಶಂಕರ್, ಶ್ರೀ ಸಂಗಪ್ಪ ಭಜಂತ್ರಿ, ಶ್ರೀ ರೋಮಣ್ಣ ಭಜಂತ್ರಿ, ಮುತ್ತಣ್ಣ ಭಜಂತ್ರಿ, ಶ್ರೀ ದೇವಪ್ಪ ಭಜಂತ್ರಿ, ಶ್ರೀ ಚಂದ್ರು ಭಜಂತ್ರಿ, ಶ್ರೀ ಯಶೋಧರ ಭಜಂತ್ರಿ, ಶ್ರೀ ಹನಮಂತ.ಎಚ್ ಹಿರೇಮನಿ, ಶ್ರೀ ಸುಭಾಸ್ ಭಜಂತ್ರಿ ಶ್ರೀ ಮಲ್ಲೇಶ ಹುನಗುಂದ, ಶ್ರೀ ನಿಂಗಪ್ಪ ಕೆಲೂರ, ಶ್ರೀ ದೇವೇಂದ್ರಪ್ಪ ಭಜಂತ್ರಿ ಶ್ರೀ ಮಾರುತಿ ಭಜಂತ್ರಿ ಶ್ರೀ ಗದ್ದೆಪ್ಪ ಭಜಂತ್ರಿ ಉಪಸ್ಥಿತರಿದ್ದರು.