ನನ್ನ ಪ್ರೀತಿಯ ಗೆಳತಿ…..

ಒಂಟಿಯಾದ ಹೃದಯವ ಆವರಿಸಿದ ಅಪ್ಸರೆ
ಹೃದಯದಲಿ ಬಚ್ಚಿಟ್ಟು ಮುದ್ದಿಸಿದೆ ತಾರೆ
ನೋಡಿ ನಾಚುವೆ ಏಕೆ ಪ್ರೀತಿಸು ಬಾರೆ
ಪ್ರೀತಿಯ ಮನವ ಒಪ್ಪಿಸು ತೊಟ್ಟು ಸೀರೆ
ಒಂದು ದಿನ ಬೇಟಿಯಾಗದಿದ್ದರೆ ಗೆಳತಿ
ಜೀವವೇ ಹೋದಂತೆ ನನ್ನ ಒಡತಿ
ನೆನಪಾಗುವೆ ನಿತ್ಯ ಒಲವಿನ ಸಂಪ್ರೀತಿ
ಬೇರಾರು ಬೇಡ ನನಗೆ ನೀನೇ ಶ್ರೀಮತಿ
ಬದುಕಿನ ಬಂಡಿಯ ಒಂದು ಗಾಲಿ ನೀನು
ನಿನ್ನನ್ನೇ ನಂಬಿ ಬದುಕುವ ಗೆಳೆಯ ನಾನು
ನನಗೆ ನೀನಾಗಿಯೇ ನೀಡು ಖುಷಿಯನು
ಜೊತೆಯಾಗಿ ಕೂಡಿ ಬಾಳೋಣ ನಾನು ನೀನು
ದೇವರು ಕಳಿಸಿದ ಒಲವಿನ ರೂಪಸಿಯೇ
ಕತ್ತಲಲ್ಲಿ ಬೆಳಕು ಬೀರುವ ಮನದರಸಿಯೇ
ಪ್ರೀತಿಯ ಪಾಠ ಕಲಿಸುವ ಕಣ್ಣರಸಿಯೇ
ಸದಾ ಬಳಿ ಇರುವ ನೀನು ಜೀವದ ಸಂಗಾತಿಯೇ
ದುಃಖ ಪಡಬೇಡ ನನ್ನ ಖುಷಿ ನೀನು
ಭಯ ಪಡಬೇಡ ನನ್ನ ಧೈರ್ಯ ನೀನು
ಎಂದಿಗೂ ಸೋಲಬೇಡ ನನ್ನ ಗೆಲುವು ನೀನು
ಬಿಟ್ಟೋಗಬೇಡ ಗೆಳತಿ ನನ್ನ ಉಸಿರು ನೀನು
ಶ್ರೀ ಮುತ್ತು.ಯ. ವಡ್ಡರ ಶಿಕ್ಷಕರು
ಬಾಗಲಕೋಟ. 9845568484