ತೂಲಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಸಂವಿಧಾನ ಜಾಗೃತಿ ಜಾಥಾವು ಹಬ್ಬದ ಸಂಭ್ರಮ.
ತೂಲಹಳ್ಳಿ ಫೆಬ್ರುವರಿ.23

ದಿನಾಂಕ 22-02-2024ರ ಗುರುವಾರ ದಂದು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಡಿ ಭರಮನಗೌಡ ಸದಸ್ಯರುಗಳಾದ ಮಹೇಶ್ ಸಲೀಂ ಬಾಸ್ ಸೇರಿದಂತೆ ಡಾ. ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪ ಮಾಲೆ ಹಾಕುವುದರ ಮೂಲಕ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.ಕುಂಭ ಹೊತ್ತ ಮಹಿಳೆಯರು ಟ್ರಾಕ್ಟರ್ ಬೈಕ್ ಮೂಲಕ ಸಮಾಳ, ಡ್ರಂ ಸೆಟ್,ತಮಟೆ,ಮೇಳ,ಶಾಲಾ ಮಕ್ಕಳಿಂದ ಲೆಜಿನ್ ಡಂಬಲ್ಸ್ ಮತ್ತು ಹೂಬ್ಸ್ ಚಟುವಟಿಕೆಗಳ ಮೂಲಕ ಸಂವಿಧಾನ ಜಾಗೃತಿ ಹಾಡುಗಳಿಗೆ ನೃತ್ಯ ಮಾಡುತ್ತಾ ಹಾಗೂ ಇನ್ನೂ ಮುಂತಾದ ಸಕಲ ವಾದ್ಯಗಳೊಂದಿಗೆ ಸಂವಿಧಾನ ಜಾಗೃತಿ ಜಾಥಾ ಸ್ವಾಗತಿಸಿ ಮತ್ತು ತೂಲಹಳ್ಳಿ ಗ್ರಾಮದ ಪ್ರಮುಖ ಬೀದಿಯಲ್ಲಿ ವಿಜೃಂಭಣೆಯಿಂದ ಸಂವಿಧಾನ ಜಾಗೃತಿ ಜಾಥಾ ಅದ್ದೂರಿಯಾಗಿ ಹಬ್ಬದ ಸಡಗರ ಸಂಭ್ರಮವನ್ನು ಮೆರೆಯಿತು.ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳಾದ ಮರಿಯಪ್ಪ ಕಾರ್ಯಕ್ರಮದ ನಿರೂಪಣೆ ಮಾಡಿ ನಂತರ ಮುಖ್ಯ ಶಿಕ್ಷಕರಾದ ಜಿ ರಾಮಪ್ಪ ಶಿಕ್ಷಕರು ಸ್ವಾಗತಿಸಿದರು. ನಂತರ ಡಿವೈಎಸ್ಪಿ ಮಲ್ಲಪ್ಪ ಮಲ್ಲಾಪುರ,ಹೊಟ್ಟೆರ್ ಅಜ್ಜಪ್ಪ , ಪಂಚಾಯತಿ ಅಧ್ಯಕ್ಷರಾದ ಡಿ ಭರಮನಗೌಡ ಡಾ. ಬಿ.ಆರ್ ಅಂಬೇಡ್ಕರ್ ರವರ ಮೂರ್ತಿಗೆ ಪುಷ್ಪಮಾಲೆ ಹಾಕುವುದರ ಮೂಲಕ ಹಾಗೂ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ನೆರವೇರಿಸಿದರು.ಡಾ. ಬಿ ಆರ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ಎಂದರೆ ಏನು? ಸಂವಿಧಾನದ ಆಶಯಗಳೇನು? ಸಂವಿಧಾನದ ರಚನೆ ಏನು? ತಿಳಿಸುವ ಕಾರ್ಯಕ್ರಮ ಸಂವಿಧಾನ ಜಾಗೃತಿ ಜಾಥಾವನ್ನು ಇವತ್ತು ನಮ್ಮ ಸರ್ಕಾರ ಹಮ್ಮಿಕೊಂಡಿದೆ ಎಂದು ಹೊಟ್ಟೆರ್ ಅಜ್ಜಪ್ಪ ಹೇಳಿದ್ದರು.ಜಾತಿ ಧರ್ಮ ಮೇಲು ಕೇಳು ಎನ್ನದೆ ದೇಶದ ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಹ ನಮ್ಮ ಸಂವಿಧಾನ ಇಂತಹ ಸಂವಿಧಾನವನ್ನು ಈ ದೇಶಕ್ಕೆ ನೀಡಿದಂತಹ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರು ಕೇವಲ ಒಂದು ಜಾತಿಗೆ ಸೀಮಿತವಲ್ಲ ಇಡೀ ವಿಶ್ವಕ್ಕೆ ಮಹಾನ್ ವಿಶ್ವ ಜ್ಞಾನಿ ಮತ್ತುಈ ದಿನ ನಾವು ಮಹಿಳೆಯರು ಓದುವುದಷ್ಟೇ ಅಲ್ಲ ರಾಷ್ಟ್ರಪತಿ ಹುದ್ದೆಯಲ್ಲಿ ಇರ್ತಾರೆ.

ಹೀಗಾಗಿ ನಮ್ಮ ಭಾರತ ಸಂವಿಧಾನವನ್ನು ಅರಿತು ಕೊಳ್ಳಬೇಕಾಗಿದೆ ಗೌರವಿಸ ಬೇಕಾಗಿದೆ ಎಂದು ಡಿಎಸ್ಎಸ್ ಜಿಲ್ಲಾ ಸಂಚಲಕರಾದ ಬದ್ದಿ ಮರಿಸ್ವಾಮಿ ಹೇಳಿದರು.ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಕೇವಲ ಒಂದು ಜಾತಿಗೆ ಪರಿಗಣಿಸದೆ ವಿಶ್ವದ ನಾಯಕನಾಗಿ ಪ್ರತಿಯೊಂದು ಜಾತಿ ಧರ್ಮಕ್ಕೂ ಸಹ ಆತನ ಸಮಾನತೆ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪತ್ರಕರ್ತರಾದ ಗುರುರಾಜ್ ತಿಳಿಸಿದರು.ವಿಶೇಷವಾಗಿ ಶಾಲಾ ಮಕ್ಕಳಿಂದ ಸಂವಿಧಾನ ಜಾಗೃತಿ ಸಂಬಂಧಪಟ್ಟ ಸಂವಿಧಾನ ಪೀಠಿಕೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಆಶಯಗಳು ಹಾಗೂ ಮಹಾ ನಾಯಕ ಇಂತಹ ಹಾಡುಗಳಿಗೆ ನೃತ್ಯ ಮಾಡಿ ಜಾಗೃತಿ ಮೂಡಿಸುವುದರ ಜೊತೆಗೆ ಹಬ್ಬದ ಸಡಗರವನ್ನೇ ಮೆರೆದರು.ನಂತರ ಸಂವಿಧಾನ ಕುರಿತಂತೆ ಪ್ರಬಂಧ ಭಾಷಣ ಹಾಗೂ ಇತರೆ ಚಟುವಟಿಕೆಯಲ್ಲಿ ಪ್ರಥಮ ಮತ್ತು ದ್ವಿತೀಯ ಪಡೆದ ಮಕ್ಕಳಿಗೆ ಸಂವಿಧಾನ ಪುಸ್ತಕಗಳನ್ನು ನೀಡಲಾಯಿತು.ಇದಲ್ಲದೆ ದಲಿತ ಯುವಕರು ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬದ್ದಿ ಮರಿಸ್ವಾಮಿ ಇವರಿಗೆ ಶಾಲು ಹೂವಿನ ಹಾರ ಹಾಕುವುದರ ಮೂಲಕ ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ಜಗದೀಶ್ ನಿಬ್ಗೂರ್ ಡಿವೈಎಸ್ಪಿ ಮಲ್ಲಪ್ಪ ಮಲ್ಲಾಪುರ ವೆಂಕಟಸ್ವಾಮಿ ಸಿಪಿಐ ಗೀತಾಂಜಲಿ ಸಿಂಧೆ ಪಿಎಸ್ಐ ಮತ್ತು ಸಿಬ್ಬಂದಿ ಸಿಆರ್‌ಪಿ ಸಾರ್ ಮತ್ತು ಶಿಕ್ಷಕರು ಜಗದೀಶ್ ಪ ಪಂ ಸ ಕೊಟ್ಟೂರು ಶಾಕಿರಾಬೀ ಉಪಾಧ್ಯಕ್ಷರು ಪ್ರತಿಭಾ ಬಸವರಾಜ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಹೇಶ್ ಎಸ್ ಅಂಜಿನಪ್ಪ ಕವಿತಾ ಮತ್ತು ಇನ್ನುಳಿದ ಸದಸ್ಯರುಗಳು ಗ್ರಾಮ ಪಂಚಾಯಿತಿ ಪ್ರಶಾಂತ್ ಕುಮಾರ್ ಪಿಡಿಒ ಮತ್ತು ಸಿಬ್ಬಂದಿ ವರ್ಗ ಊರಿನ ಮುಖಂಡರಾದ ಮರಳಿಸಿದ್ದನಗೌಡ್ರು ದಿದ್ಗಿ ಸಿದ್ದನಗೌಡರು ಶಾಂತನಗೌಡ್ರು ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಹೊಟ್ಟೆರ್ ಬಸವರಾಜಪ್ಪ ಗೋಡೆ ಬಸವರಾಜ್ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಬಸವರಾಜ್ ಕೊಟ್ರೇಶ್ ಉಮೇಶ್ ಹಾಗೂ ಇತರರು ಉಪಸ್ಥಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು