ಹಜರತ್ ಸೈಯದ್ ಶಾಹ್ ಮುರ್ತುಜಾ ಖಾದ್ರಿಯವವರ 155 ನೇ ಉರುಸು ಪತ್ರಕರ್ತರನ್ನು ನಿರ್ಲಕ್ಷಿಸಿದ ಆಡಳಿತಾಧಿಕಾರಿ.
ಇಲಕಲ್ಲ ಫೆಬ್ರುವರಿ.24.

ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಇಳಕಲ್ಲ ನಗರದ ಆರಾದ್ಯ ದೈವ ಸರ್ವ ಜನಾಂಗದ ಭಾವೈಕ್ಯತೆಗೆ ಇನ್ನೊಂದು ಹೆಸರೇ ಹಜರತ್ ಸೈಯ್ಯದ್ ಶಾಹ್ ಮುರ್ತುಜಾ ಖಾದರಿ ಉರುಸು. ಇಲ್ಲಿ ಹಿಂದಿನ ಆಡಳಿತ ಮಂಡಳಿಯ ವಿರುದ್ದ ಕೋರ್ಟ ಮೊರೆ ಹೋದ ಭಕ್ತರ ಸಮೂಹ, ಕಾರಣ ಕೋರ್ಟ ಈ ಬಾರಿ ಇಳಕಲ್ ತಾಲ್ಲೂಕಿನ ದಂಡಾಧಿಕಾರಿಯವರಿಗೆ ಮುರ್ತುಜಾ ಖಾದರಿಯವರ ದರ್ಗಾದ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಆದೇಶ ನೀಡಿದ್ದು ಸ್ವಾಗತಾರ್ಹ ಅವರು ದರ್ಗಾದ ಮುಸ್ಲಿಂ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಸಲಹಾ ಸಮೀತಿ ಮಂಡಳಿಯನ್ನು ನೇಮಕ ಮಾಡಿ ಕೊಂಡು ಪೂಜ್ಯರ ಗಂಧ, ಉರುಸು, ಜಿಯಾರತ ಮುಸ್ಲಿಂ ಧಾರ್ಮಿಕ ವಿಧಾನಗಳನ್ವಯ ನೆರವೇಸಲಿ ಅದಕ್ಕೆ ಯಾರ ತಕರಾರು ಇಲ್ಲಾ.ಆದರೆ ಇಲ್ಲಿನ ಆಡಳಿತಾಧಿಕಾರಿಯವರು ಹಿರಿಯ ಮತ್ತು ಸ್ಥಳೀಯ ಪತ್ರಕರ್ತರಿಗೆ ದರ್ಗಾ ಒಳಗಡೆ ಪ್ರವೇಶ ನಿಷೇಧಿಸಿ ಅಗೌರವ ತೋರಿಸಿದ್ದು ಖಂಡನೀಯ. ಇದಕ್ಕೆ ನೂತನವಾಗಿ ನಿಯೋಜಿಸಿರುವ ಸಲಹಾ ಸಮೀತಿಯವರು ಗೊತ್ತಿದ್ದು , ಕಣ್ಣಿದ್ದು ಕುರುಡರಾಗಿ ನಾಟಕೀಯ ಬೆಳವಣಿಗೆ ನಡೆದಿದ್ದಂತು ಸತ್ಯ.ಯಾವ ಮಾನ ದಂಡದಲ್ಲಿ ಪತ್ರಕರ್ತರನ್ನು ದೂರವಿಟ್ಟರು ಯಾಕೆ ಎಂಬ ಪ್ರಶ್ನೆ ನಿಗೂಢವಾಗಿದೆ.ಮತ್ತೊಂದೆಡೆ ತಲೆ ತಲಾಂತರದಿಂದಲೂ ಪೂಜ್ಯರ ಗಂಧ, ಉರುಸು, ಜಿಯಾರತ ಧಾರ್ಮಿಕ ವಿಧಿ ವಿಧಾನಗಳನ್ನು ಪೂಜ್ಯರ ವಂಶಸ್ಥರು ಮಾಡಿ ಕೊಂಡು ಬಂದಿರುವದು ಎಲ್ಲರಿಗೂ ತಿಳಿದ ಸಂಗತಿ. ಆಡಳಿತಾಧಿಕಾರಿಯವರು ದರ್ಗಾದ ಪೀಠಾಧಿಕಾರಿಗಳಿಗಳಿಗೆ ಹೊರಗಡೆ ನಿಲ್ಲಿಸಿ ಗಂಧದ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ್ದು ಭಕ್ತರ ಸಮೂಹದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯಿಂದ ಬೆಳಿಗ್ಗೆ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪೋಲಿಸ್ ಇಲಾಖೆಯವರು ಮಧ್ಯಸ್ತಿಕೆ ವಹಿಸಿ ಕೆಲ ಹಿರಿಯರ ಸಮ್ಮುಖದಲ್ಲಿ ತಿಳಿ ಗೊಳಿಸಿದರು. ಪೂಜ್ಯರ ಉರುಸು ಸುಗಮವಾಗಿ ಶಾಂತಿಯಿಂದ ನಡೆಯಲಿ ಎಂದು ದರ್ಗಾದ ಪೀಠಾಧಿಪತಿಗಳ ಭಕ್ತರ ಸಮೂಹ ಶಾಂತಿ ಮಾಡಿದ್ದಾರೆ.ಇಳಕಲ್ಲ ತಾಲ್ಲೂಕಿನ ದಂಡಾಧಿಕಾರಿಗಳು , ಮುರ್ತುಜಾ ಖಾದರಿ ದರ್ಗಾದ ಆಳಿತಾಧಿಕಾರಿಯವರಿಗೆ ಮತ್ತು ನೀಯೊಜನೆ ಗೊಂಡ ಸಲಹಾ ಸಮೀತಿಯವರಿಗೆ ಅವರ ಜವಾಬ್ದಾರಿಗಳು ಏನು ಎಂಬುದನ್ನು ತಿಳಿಸುವದಲ್ಲದೆ ಪತ್ರಕರ್ತರಿಗೆ ಅಗೌರವ ತೊರಿಸಿದಕ್ಕೆ ಕ್ಷಮೆ ಯಾಚಿಸಬೇಕು.ಇಲ್ಲದಿದರೆ ಹೋರಾಟ ಮಾಡಲಾಗುವದೆಂದು ಕಾನಿಪ ಸಂಘ, ರಾಜ್ಯ ಸಂಪಾದಕರ ಸಂಘ, ಅಖಿಲ ಭಾರತೀಯ ಸುರಕ್ಷಾ ಸಮೀತಿಯವರು ತಿಳಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ