ನಾಡ ಹಬ್ಬ ಕನ್ನಡ ಹಬ್ಬ ಸಂಭ್ರಮ ದಿಂದ ಆಚರಿಸೋಣ – ಕೆ.ಜೆ ಕಾಂತರಾಜ್.
ತರೀಕೆರೆ ಫೆ.28

ಮಾರ್ಚ್ 7 ಮತ್ತು 8 ರಂದು ತರೀಕೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಾಡ ಹಬ್ಬ, ಕನ್ನಡ ಹಬ್ಬ ಸಂಭ್ರಮದಿಂದ ಆಚರಿಸೋಣ ಎಂದು ಉಪ ವಿಭಾಗಾಧಿಕಾರಿ ಡಾ, ಕೆ.ಜೆ ಕಾಂತರಾಜ್ ಹೇಳಿದರು. ಅವರು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲಾವಕಾಶ ತುಂಬಾ ಕಡಿಮೆ ಇದೆ ಎಲ್ಲಾ ಇಲಾಖೆಯವರು ಭಾಗವಹಿಸಬೇಕು ಯಶಸ್ವಿ ಮಾಡಬೇಕು ಎಂದು ಕರೆ ಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಮಾತನಾಡಿ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಮ್ಮೇಳನದಲ್ಲಿಯೇ ವಿಜೃಂಭಣೆಯಿಂದ ಆಚರಿಸೋಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಕುಂಭಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸ ಬೇಕು, ಪುಸ್ತಕ ಮಳಿಗೆಗಳನ್ನು ಸ್ಥಾಪಿಸಬೇಕು, ಶಿಕ್ಷಕರ ಜೊತೆಯಲ್ಲಿ ಪದವಿ ಪೂರ್ವ ಶಿಕ್ಷಣದ ವಿದ್ಯಾರ್ಥಿಗಳು ಭಾಗವಹಿಸಬೇಕು, ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಎಲ್ಲರೂ ಕೈ ಜೋಡಿಸಿದರೆ ರಾಜ್ಯದಲ್ಲಿಯೇ ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನ ಮಾದರಿ ಯಾಗಬೇಕು ಎಂದು ಹೇಳಿದರು. ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿ ದಳವಾಯಿ ರವರು ಮಾತನಾಡಿ ರಾಜಕೀಯ ಜನ ಪ್ರತಿನಿಧಿಗಳು ಒಳ್ಳೆಯ ಸಂದೇಶವನ್ನು ನೀಡಲಿ ರಾಜ್ಯದಲ್ಲಿಯೇ ಈ ಸಮ್ಮೇಳನ ಬೇರೆಯವರಿಗೆ ಮಾರ್ಗ ದರ್ಶನವಾಗಬೇಕು ಎಂದರು. ಕನ್ನಡ ಶ್ರೀ ಬಿಎಸ್ ಭಗವಾನ್, ಮಿಲ್ಟ್ರಿ ಶ್ರೀನಿವಾಸ್, ನವೀನ್ ಪೆನ್ನಯ್ಯ, ನಾಗೇನಹಳ್ಳಿ ತಿಮ್ಮಣ್ಣ, ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಸಂಘ ಸಂಸ್ಥೆಯವರು ಹಾಗೂ ಎನ್ ಆರ್ ಪುರ ತಾಲೂಕು ತಹಶೀಲ್ದಾರ್ ತನುಜಾ ಸವದತ್ತಿ ಮತ್ತು ಕಡೂರು ತಹಶೀಲ್ದಾರ್ ಮಂಜುನಾಥ್ ತರೀಕೆರೆ ತಹಶೀಲ್ದಾರ್ ಗ್ರೇಡ್ 2 ನೂರುಲ್ಲಾ ಉದಾ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಣ ಅಧಿಕಾರಿ ಡಾ, ದೇವೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಸಿಡಿಪಿಓ ಚರಣ್ ರಾಜ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು