ಸಂವಿಧಾನ ದಿನಾಚರಣೆ ಪ್ರಯುಕ್ತ ಬೌದ್ಧರ ಧಾರ್ಮಿಕ ಹಕ್ಕಿಗಾಗಿ ಬಿ.ಟಿ ಆಕ್ಟ್ -1949 ರದ್ದು ಗೊಳಿಸಿ – ಸಂಪೂರ್ಣವಾಗಿ ಬೌದ್ಧರಿಗೆ ನೀಡಲು ಮನವಿ.

ಬಳ್ಳಾರಿ ನ.22

ಬುದ್ಧ ಗಯಾ ಜಗತ್ತಿನ ಬೌದ್ಧರಿಗೆಲ್ಲ ಪರಮ ಪವಿತ್ರವಾದ ಸ್ಥಳ ರಾಜಕುಮಾರ ಸಿದ್ದಾರ್ಥ ಬೋಧಿ ಜ್ಞಾನ ಪಡೆದ ಭಗವಾನ್ ಬುದ್ಧನಾದ ಪಾವನ ಸ್ಥಳ ಈ ಕ್ಷೇತ್ರ ಬುದ್ಧನ ಕಾಲದಿಂದಲೂ ಪೂಜ್ಯನೀಯವಾಗಿದೆ ಸಾಮ್ರಾಟ ಅಶೋಕನು ಸೇರಿ ಈ ದೇಶದ ಅನೇಕ ರಾಜ್ಯ ಮಹಾ ರಾಜರು ಮತ್ತು ಧರ್ಮ ಶ್ರೀಲಂಕಾ ಥೈಲ್ಯಾಂಡ್ ಜಪಾನ್ ಮತ್ತು ಇನ್ನಿತರ ದೇಶಗಳ ರಾಜರು ಹಾಗೂ ಬೌದ್ಧ ಉಪಾಸಕರು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರದ್ದಾ ಪೂರಕ ಕೊಡುಗೆ ನೀಡಿರುವುದು ಇತಿಹಾಸ. ಭಾರತದಲ್ಲಿ ಹುಟ್ಟಿ ಏಷ್ಯಾ ಖಂಡದ ಎಲ್ಲಾ ದೇಶಗಳಲ್ಲಿ ಪರಿಸರಿಸಿ ಪ್ರಪಂಚದಾದ್ಯಂತ ವಿಜೃಂಭಿಸಿದ ಏಷ್ಯಾದ ಬೆಳಕು ಎಂದು ಪ್ರಖ್ಯಾತವಾದ ಬೌದ್ಧ ಧರ್ಮ ಕಾಲಾನುಕ್ರಮದಲ್ಲಿ ಮಾತೃ ಭೂಮಿಯಲ್ಲಿ ಮುಸ್ಲಿಂ ಮತ್ತು ಹಿಂದುಗಳ ಆಕ್ರಮಣಕ್ಕೆ ತುತ್ತಾಗಿ ಕಣ್ಮರೆಯಾಯಿತು ಕ್ರಿ ಶ 1150 ರಿಂದ ಕ್ರಿ.ಶ 1800 ನ್ನು ಬೌದ್ಧ ಚರಿತ್ರೆಯಲ್ಲಿ ಕತ್ತಲೆ ಯುಗ ಎಂದು ದಾಖಲಿಸಲಾಗಿದೆ ಈ ಕಾರಣ ಕಾಲಘಟ್ಟದಲ್ಲಿ ಶಂಕರಾಚಾರ್ಯರ ಪಂಥಕ್ಕೆ ಸೇರಿದ ಗೋಸಾಯಿ ಕಮಂಡಿ ಗಿರಿ ಎಂಬ ಶೃವ ಬ್ರಾಹ್ಮಣ ಬುದ್ಧಗಯಾದ ಮಾಬೂದಿ ಮಹಾ ವಿಹಾರ ಕ್ಷೇತ್ರವನ್ನು ಅಕ್ರಮಣ ಮಾಡಿ ತನ್ನ ನೆಲೆ ಸ್ಥಾಪಿಸಿದನು. ಆಗ ದೆಹಲಿಯಲ್ಲಿ ಮೊಘಲ್ ದೊರೆ ಅಕ್ಬರನ ಆಡಳಿತವಿಟ್ಟು ಮುಂದೆ ಮೊಘಲ್ ಸುಲ್ತಾನ್ ಷಾ ಆಲಮ್ (1719-1748) ಮಹಾಂತ ಲಾಲಗಿರಿಗೆ ಮಸ್ತಾಪೂರು ಮತ್ತು ತಾರಾಡಿಯಾ ಎಂಬ ಹಳ್ಳಿಗಳನ್ನು ದಾನ ಕೊಟ್ಟ ಈ ಹಳ್ಳಿಗಳ ಪಕ್ಕದಲ್ಲಿದ್ದ ಬೋದ ಗಯಾ ಕ್ಷೇತ್ರವನ್ನು ಮಹಾಂತರು ಸುಳ್ಳು ದಾಖಲೆ ಸೃಷ್ಟಿಸಿ ಸಂಪೂರ್ಣ ಕಬ್ಜಾ ಮಾಡಿದರು. ಬ್ರಿಟಿಷ್ ಆಡಳಿತ ಸಂದರ್ಭದಲ್ಲಿ ಜನರಲ್ ಕನಿಂಗ್ ಹ್ಯಾಮ್ ನೇತೃತ್ವದಲ್ಲಿ ಉತ್ಖನನ ಮತ್ತು ಸಂಶೋಧನೆ ನಡೆದು ಬೌದ್ಧ ಇತಿಹಾಸ ಜಗತ್ತಿಗೆ ಪರಿಚಯಿಸಲಾಯಿತು. ಡಾಕ್ಟರ್, ರಾಜೇಂದ್ರ ಲಾಲ್ ಮಿಶ್ರಾ ಜೆಡಿ ಬೆಗ್ಲರ್ ಅಸ್ಲೆ ವಿಲನ್ ಸರ್ ಗ್ರೀಸನ್ ಇನ್ನು ಮುಂತಾದ ಸಂಶೋಧಕರು ಬೌದ್ಧ ಇತಿಹಾಸ ಪುನರ್ ಪ್ರಕಟಿಸಿದರು. 1880 ರ ದಶಕದಲ್ಲಿ ಲೈಟ್ ಆಫ್ ಏಷಿಯಾದ ಲೇಖಕ ಎಡ್ವಿನ್ ಅರ್ನಾಲ್ಡ್ ಹಿಂದು ಬ್ರಾಹ್ಮಣರ ವಶದಲ್ಲಿರುವ ಬುದ್ಧ ಗಯಾದ ವಿಹಾರ ಬೌದ್ಧರಿಗೆ ಸೇರಬೇಕು ಎಂದು ಜಾಗತಿಕ ಮಟ್ಟದಲ್ಲಿ ಹೋರಾಟ ಆರಂಭಿಸಿದ್ದರು. ಮುಂದೆ ಶ್ರೀಲಂಕಾದ ಅನಾಗರಿಕ ದಮ್ಮ ಪಾಲರು 21 ನೇ. ಜನೇವರಿ 1891 ರಂದು ಬುದ್ಧ ಗಯಾಕ್ಕೆ ಬಂದು ಮಹಾ ಬೋಧಿ ಮಹಾ ವಿಹಾರದ ವಿಮೋಚನೆಗೆ ಸಂಕಲ್ಪ ತೊಟ್ಟು ಇಲ್ಲಿಯೇ ನೆಲೆಸಿ ಮಹಾ ಬೋಧಿ ಸೊಸೈಟಿಯನ್ನು ಸ್ಥಾಪಿಸಿ ಹೋರಾಟ ಆರಂಭಿಸಿದರು.

ಧಮ್ಮಪಾಲ್ ಮತ್ತವರ ಇಂಬಾಲಕರ ಮೇಲೆ ಮಹಾಂತೇಶ ಬೆಂಬಲಿಗರು ಹಲವು ಬಾರಿ ಮರಣಾಂತಿಕ ಹಲ್ಲೆ ಮಾಡಿದರು. ಆದರೂ ಜೀವದ ಹಂಗು ತೊರೆದು ಹೋರಾಟ ಮುಂದುವರಿಸಿದ್ದರು. ಭಾರತ ಸ್ವಾತಂತ್ರ್ಯ ಚಳುವಳಿಯ ಪರ್ವಕಾಲದಲ್ಲಿ ಅಂದಿನ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾದ ಮಹಾತ್ಮ ಗಾಂಧಿ ಜವಾಹರಲಾಲ್ ನೆಹರು ಡಾ, ರಾಧಾಕೃಷ್ಣನ್ ಮತ್ತು ಹಿಂದು ಮಹಾಸಭೆಯ ನಾಯಕರು ಬೌದ್ಧರ ಬೇಡಿಕೆ ನ್ಯಾಯಯುತವಾಗಿದೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಸಮಸ್ಯೆಗೆ ಪರಿಹಾರ ಮಾಡುತ್ತೇವೆ ಎಂದು ಜಗತ್ತಿನ ಬೌದ್ಧರಿಗೆ ಭರವಸೆ ಕೊಟ್ಟರು 1933 ರಲ್ಲಿ ಅನಾಗರಿಕ ಧಮ್ಮಪಾಲರು ನಿಧನರಾದರು 1947 ರ ಸ್ವಾತಂತ್ರ್ಯದ ನಂತರ ಬಿಹಾರ್ ವಿಧಾನ ಸಭೆಯಲ್ಲಿ ಟೆಂಪಲ್ ಆಕ್ಟ್ 1949 ಎಂಬ ಕಾಯ್ದೆ ಜಾರಿಗೆ ತಂದು ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ನಾಲ್ಕು ಜನ ಬೌದ್ಧರು ನಾಲ್ಕು ಜನ ಹಿಂದೂಗಳನ್ನು ಸೇರಿಸಿ ಬಿ.ಟಿ.ಎಂ.ಸಿ (ಬೋದಗಯಾ) ಟೆಂಪಲ್ ಮ್ಯಾನೇಜ್ಮೆಂಟ್ ಕಮಿಟಿ) ರಚಿಸಿ ಬೌದ್ಧರಿಗೆ ಅರ್ಧ ನ್ಯಾಯ ನೀಡಿದರು. ಬೌದ್ಧರು ತಮ್ಮ ಅಸಮಧಾನವನ್ನು ಪ್ರಕಟಿಸಿದರು. ಆದರೆ ರಾಷ್ಟ್ರೀಯ ನಾಯಕರು ಬೌದ್ಧರಿಗೆ ಪೂರ್ಣ ಪ್ರಮಾಣದ ನ್ಯಾಯ ನೀಡಲಿಲ್ಲ 1950 ಜನವರಿ 26 ರಂದು ಸವಿಧಾನ ಜಾರಿಯಾದ ಮೇಲೆ ಈ ಕಾನೂನು ಸಂವಿಧಾನದ ಕಲಂ 3-ರ ಪ್ರಕಾರ ರದ್ದಾಗದೆ ಮುಂದುವರೆದಿದೆ ಸಂವಿಧಾನದ ಕಲಂ 25-26-29 ರನ್ನು ಉಲ್ಲೇಖಿಸಲಾಗಿದೆ. ಈ ಸಂವಿಧಾನ ವಿರೋಧಿ ಬಿ.ಟಿ ಆಕ್ಟ್ 1949ರ ಅಡಿಯಲ್ಲಿ ಮಹಾಬೋದಿ ಮಹಾ ವಿಹಾರದ ಆಡಳಿತ ಮಂಡಳಿಯೊಳಗೆ ಸೇರದೆ ಹಿಂದೂ ಪುರೋಹಿತರು ಬೌದ್ಧ ಇತಿಹಾಸ ಮತ್ತು ಸಂಸ್ಕೃತಿಯ ನಾಶಕ್ಕೆ ಕೈ ಹಾಕಿದ್ದಾರೆ. ಬುದ್ದನ ವಿಗ್ರಹದ ಮುಂದೆ ಶಿವಲಿಂಗ ಇದೆ ಎಂದು ಸುಳ್ಳು ಸೃಷ್ಟಿಸಿದ್ದಾರೆ ಬುದ್ಧ ವಿಹಾರದ ಆವರಣದಲ್ಲಿ ಗಣಪತಿ ವಿಗ್ರಹವನ್ನಿಟ್ಟಿದ್ದಾರೆ ಹಲವು ಬೌದ್ಧ ಮೂರ್ತಿಗಳನ್ನು ಹಿಂದೂ ಕರಣ ಮಾಡಿದ್ದಾರೆ ಬುದ್ಧ ವಿಹಾರದ ಆವರಣದಲ್ಲಿ ಪಿಂಡ ದಾನ ಮಾಡಿ ಬೌದ್ಧ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ. ಶಿವ ಪುರಾಣ ವಿಷ್ಣು ಪುರಾಣ ಪ್ರವಚನ ಪ್ರಾರಂಭಿಸಿ ಬೌದ್ಧ ಇತಿಹಾಸ ತಿರುಚಿ ಬುದ್ಧನು ವಿಷ್ಣುವಿನ ಅವತಾರವೆಂದು ಸುಳ್ಳು ಹಬ್ಬಿಸಿ ಬೌದ್ಧರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಾಗಪುರದ ಬೌದ್ಧ ಧಮ್ಮ ದೀಕ್ಷಾ ಸಮರಂಭದಲ್ಲಿ ಬೋಧಿಸಿದ 22 ಪ್ರತಿಜ್ಞೆಗಳಲ್ಲಿ ಬುದ್ಧ ವಿಷ್ಣುವಿನ ಅವತಾರ ಎಂಬುದನ್ನು ನಾನು ನಂಬುವುದಿಲ್ಲ ಎಂದು ಬ್ರಾಹ್ಮಣರ ಕುತಂತ್ರ ಎಂದು ಘೋಷಿಸಿದ್ದಾರೆ.

ಡಾಕ್ಟರ್, ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತದ ಮಹಾ ಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನವನ್ನು 1992 ರಿಂದ ಬಂದಂತ ಆರ್ಯ ನಾಗರ್ಜುನ ಸುರೈ ಸಸಾಯಿಯವರ ನೇತೃತ್ವದಲ್ಲಿ ಅಂಬೇಡ್ಕರ್ ಅನುವಾಯಿಗಳು ಮುಂದುವರಿಸಿದರು. ರಾಷ್ಟ್ರ ಮಟ್ಟದಲ್ಲಿ ಹಲವು ಸುತ್ತಿನ ಹೋರಾಟಗಳು ಜರುಗಿದವು ಬಿಟಿ ಆಕ್ಟ್ 1949 ರ ಕಾಯ್ದೆಯಲ್ಲಿ ಹಾಗೂ ಬಿ.ಟಿ.ಎಂ.ಸಿ. ಯಲ್ಲಿ ಕೆಲವು ಬದಲಾವಣೆಗಳು ಆದವೇ ಹೊರತು ಪೂರ್ಣಾ ರದ್ದು ಆಗಲಿಲ್ಲ ಈ ಸಂಬಂಧ ಕಳೆದ 15 ವರ್ಷಗಳಿಂದ ಬೌದ್ಧರು ನಡೆಸಿದ ಕಾನೂನು ಹೋರಾಟಕ್ಕೂ ಇನ್ನೂ ಜಯ ಸಿಕ್ಕಿಲ್ಲ ಪ್ರಸ್ತುತ ಅಖಿಲ ಭಾರತ ಬೌದ್ಧ ವೇದಿಕೆ ಎಲ್ಲಾ ವಿಚಾರ ಧಾರೆಯ ಬೌದ್ಧ ಸಂಘ ಸಂಸ್ಥೆಗಳು ಹಾಗೂ ದೇಶದ ಅಂಬೇಡ್ಕರ್ ಅನುವಾಯಿಗಳನ್ನು ಒಂದೇ ವೇದಿಕೆಗೆ ತಂದು ಹೋರಾಟವನ್ನು ಆರಂಭಿಸಿದೆ. ಬೌದ್ಧರಿಗೆ ಯಾಕೇ ಈ ಅನ್ಯಾಯ? ಭಾರತದ ಸಂವಿಧಾನದ ಪ್ರಕಾರ ಎಲ್ಲಾ ಧರ್ಮಗಳು ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿದ್ದಾರೆ. ಸಿಖ್ ಗುರುದ್ವಾರ ಕಾಯ್ದೆ 1925 ರ ಪ್ರಕಾರ ಕೇಶಧಾರಿ ಸಿಖ್ ರಲ್ಲದವರು ಗುರುದ್ವಾರ ಆಡಳಿತ ಮಂಡಳಿ ಸದಸ್ಯರಾಗಲೂ ಸಾಧ್ಯವಿಲ್ಲ ದಿ ದರ್ಗಾ ಖ್ವಾಜಾ ಕಾಯ್ದೆ 1955 ರಂತೆ ಅನಾಪಿ ಮುಸ್ಲಿಮರು ಮಾತ್ರ ಅಜ್ಮೀರ್ ದರ್ಗಾ ಕಮಿಟಿ ಸದಸ್ಯತ್ವ ರಾಗುತ್ತಾರೆ ಒರಿಸ್ಸಾದ ಜಗನ್ನಾಥ ಮಂದಿರ ಕಾಯ್ದೆ 1905 ರ ಕೇರಳದ ಗುರುವಾಯುರ್ ದೇವಸ್ಥಾನದ ಕಾಯ್ದೆ 1978 ಮಧ್ಯ ಪ್ರದೇಶದ ಮಹಾ ಕಾಳೇಶ್ವರ ದೇವಸ್ಥಾನ ಕಾಯ್ದೆ (ಉಜ್ಜೈನಿ) 1982 ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರ ಕಾಯ್ದೆ (ವಾರಣಾಸಿ) 1983 ಕಾಶ್ಮೀರದ ಶ್ರೀ ಮಾತಾ ವೈಷ್ಣವಿ ದೇವಿ ಮಂದಿರ ಕಾಯ್ದೆ 1988 ರ ಮತ್ತು ತಿರುಪತಿ ಶ್ರೀಶೈಲ ಹಾಗೂ ಇನ್ನಿತರ ಹಿಂದೂ ಧಾರ್ಮಿಕ ಕ್ಷೇತ್ರಗಳ ಕಾನೂನು ಪ್ರಕಾರ ಕೇವಲ ಹಿಂದುಗಳು ಮಾತ್ರ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ ಆದರೇ ಬೋದ ಗಯಾ ಟೆಂಪಲ್ ಆಕ್ಟ್ 1949 ಪ್ರಕಾರ ಬೌದ್ಧರಿಗೆ ನಮ್ಮ ದೇವಾಲಯದ ನಿರ್ವಹಣೆ ಮಾಡಲು ಅಧಿಕಾರವಿಲ್ಲ ಬುದ್ಧ ವಿಹಾರ ಹಿಂದುಗಳ ನಿಯಂತ್ರಣದಲ್ಲಿದೆ ಇದು ಬೌದ್ಧ ಧರ್ಮೀಯರ ಮತ್ತು ಅಂಬೇಡ್ಕರ್ ಅನುಯಾಯಿಗಳು ಹಾಗೂ ಭಾರತದ ಸಂವಿಧಾನವಾದಿ ಪ್ರಗತಿಪರ ಚಿಂತಕರ ಸ್ವಾಭಿಮಾನದ ಪ್ರಶ್ನೆಯಾಗಿದೆ. ದೇಶವನ್ನಾಳುವ ಸರ್ಕಾರಗಳು ನವಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.

ಈ ದೇಶದ ಬೌದ್ಧ ಸಮುದಾಯ ಮತ್ತು ಅಂಬೇಡ್ಕರ್ ಅನುವಾಯಿಗಳು ಸಂವಿಧಾನ ದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೌದ್ಧರಿಗೆ ನಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಸಂವಿಧಾನದ ಕಲಂ 3. 25. 26. ಮತ್ತು 29 ಅನ್ನು ಜಾರಿ ಗೊಳಿಸಲು ಅಡ್ಡಿಯಾಗಿರುವ ಬಿ.ಟಿ ಆಕ್ಟ್ 1949 ಅನ್ನು ರದ್ದು ಪಡಿಸಿ ಬುದ್ಧ ಗಯಾದ ಮಹಾ ಬೋಧಿ ಮಹಾ ವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಒತ್ತಾಯಿಸಿ ಮಾನ್ಯ ರಾಷ್ಟ್ರಪತಿಗಳಿಗೆ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ ಎಂದು ಹನುಮೇಶಪ್ಪ (ಕಮಲ್ ರತ್ನ) ಬಂತೆಜಿ ಜಿಲ್ಲಾಧ್ಯಕ್ಷರು ಭಾರತೀಯ ಬೌದ್ಧ ಮಹಾಸಭಾಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಿ.ಶಿವಕುಮಾರ್ ಜಿಲ್ಲಾ ಅಧ್ಯಕ್ಷರು ಛಲವಾದಿ ಮಹಾಸಭಾ ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮಾನಯ್ಯ ಬಿ.ಗೋನಾಳ್ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ ಡಿ.ವೆಂಕಟೇಶ್ ಜಿಲ್ಲಾ ಜಂಟಿ ಕಾರ್ಯದರ್ಶಿ ಛಲವಾದಿ ಮಹಾಸಭಾ ಲಕ್ಷ್ಮಿಕಾಂತ್ ಸುಗ್ಗೆನಹಳ್ಳಿ ದಲಿತ ಮುಖಂಡರು ಉಪಸ್ಥಿತರಿದ್ದು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button