“ತನುಶ್ರೀ ಪ್ರಕಾಶನ ವತಿಯಿಂದ ತೃತೀಯ ರಾಜ್ಯ ಸಾಹಿತ್ಯ ಸಮ್ಮೇಳನ”.

ಚಳ್ಳಕೆರೆ ಫೆಬ್ರುವರಿ.26

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೋಟರಿ ಬಾಲ ಭವನದಲ್ಲಿ ಇಂದು ತನುಶ್ರೀ ಪ್ರಕಾಶನ ಸಂಸ್ಥೆ ಸೋಲೇನಹಳ್ಳಿ ಮತ್ತು ತನುಶ್ರೀ ಸಾಂಸ್ಕೃತಿಕ ಕಲಾ ವೇದಿಕೆ,(ರಿ) ಚಿತ್ರದುರ್ಗ ಹಾಗೂ ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಗುಬ್ಬಿ ಇವರ ಸಹಯೋಗದೊಂದಿಗೆ ” ತೃತೀಯ ರಾಜ್ಯ ಸಾಹಿತ್ಯ ಸಮ್ಮೇಳನ 2024 ಪ್ರಥಮ ವಾರ್ಷಿಕೋತ್ಸವ ಹಾಗು ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ರಾಜ್ಯ ಮಟ್ಟದ ಕವಿ ಗೋಷ್ಠಿ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀಯುತ ಎ. ಸೋಮನಾಥ್ ರವರು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರು ಆದ ಶ್ರೀಯುತ ಗಣಪತಿ ಗೋ ಛಲವಾದಿ,ಬೆಂಗಳೂರು ಹಾಗೂ ಇನ್ನಿತರೆ ವೇದಿಕೆ ಮೇಲಿರುವ ಎಲ್ಲ ಗಣ್ಯ ಮಾನ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ತನುಶ್ರೀ ಪ್ರಕಾಶನ ಸಂಸ್ಥೆಯ ಪ್ರಕಾಶಕರು ಹಾಗೂ ರಾಜ್ಯಾಧ್ಯಕ್ಷರು ಆದ ಶ್ರೀಯುತ ರಾಜು ಎಸ್ ಸೋಲೆನಹಳ್ಳಿ ಇವರು ಪ್ರಾಸ್ತಾವಿಕ ನುಡಿಯಲ್ಲಿ ಸಂಸ್ಥೆಯ ನಡೆದು ಬಂದು ಹಾದಿ ಮತ್ತು ಬೆಳೆವಣಿಗೆ ಸಾಧನೆಯ ಬಗ್ಗೆ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಫಿವುಲ್ಲಾ ರವರು ಮಾತನಾಡಿ ನಮ್ಮ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಉಳಿಯಬೇಕಾದರೆ ಸಮಾಜದಲ್ಲಿ ಕವಿಗಳು ಮತ್ತು ಸಾಹಿತಿಗಳು ಬರೆಯುವಂತಹ ಕವಿತೆಗಳನ್ನು ಮತ್ತು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿ ಕೊಳ್ಳಬೇಕು ಅಲ್ಲದೆ ಇತ್ತೀಚಿನ ಮಕ್ಕಳು ಮೊಬೈಲ್ ಎಂಬ ಭೂತಕ್ಕೆ ದಾಸರಾಗಿರುವುದು ತುಂಬಾ ಬೇಸರದ ಸಂಗತಿ ಎಂದು ತಿಳಿಸಿದರು.

ನಂತರ ಗಣಪತಿ ಗೂ ಛಲವಾದಿ ಸಾಹಿತಿಗಳು ಮಾತನಾಡಿ ಹನ್ನೆರಡನೇ ಶತಮಾನದಲ್ಲಿ ಲಿಂಗ ತಾರತಮ್ಯ ನಿವಾರಣೆಗೆ ಬಸವಣ್ಣನವರು ನಡೆಸಿದ ಚಳುವಳಿಗಳು ಸಾಮಾಜಿಕ ಶಕ್ತಿಯಾಗಿ ಉಳಿದು ಕೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ನಂತರ ರಾಜು ಎಸ್ ಸೋಲೇನೆಹಳ್ಳಿ ರವರ ” ಪ್ರೇಮ ಸ್ಪರ್ಶ ” ಕು.ಸಿಂಚನ ಎಂ.ಎನ್ ಗೊರಹಳ್ಳಿ ರವರ ” ಭಾವನೆಗಳ ಬೆನ್ನೇರಿ ” ಮತ್ತು ರಮಾ ಫಣಿ ಭಟ್ ಗೋಪಿ ರವರ ವಿರಚಿತ ” ಆಕಾಶ ಬುಟ್ಟಿ ” ಎಂಬ ಮೂರು ಕವನ ಸಂಕಲನಗಳನ್ನು ಹಿರಿಯ ಸಾಹಿತಿಗಳು ಕವಿಗಳು ಆದ ಶ್ರೀಯುತ ಕೊರ್ಲ ಕುಂಟೆ ತಿಪ್ಪೇಸ್ವಾಮಿ ರವರು ಲೋಕಾರ್ಪಣೆ ಮಾಡಿ ಇಂತಹ ಸಾಹಿತ್ಯದ ಪುಸ್ತಕಗಳನ್ನು ಇಂದಿನ ಯುವ ಪೀಳಿಗೆ ಓದುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಒಬ್ಬ ಉತ್ತಮ ಪ್ರಜೆಯಾಗಿ, ಸುಸಂಸ್ಕೃತ ವ್ಯಕ್ತಿಯಾಗಿ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳಬಹುದು ಎಂದು ಸಲಹೆ ನೀಡಿದರು.ನಂತರ ಈ ಕಾರ್ಯಕ್ರಮದ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ವಾಣಿಶ್ರೀ.ಏಚ್ ನವೀನ್, ಸಾಹಿತಿಗಳು ನಿರ್ಮಾಪಕರು ಹಾಗೂ ವಕೀಲರು ಹೊಸಪೇಟೆ ಇವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿ ಇಂತಹ ನಿಮ್ಮ ಸಾಧನೆಗಳು ಮತ್ತು ಸೇವೆಗಳು ನಮ್ಮ ಕನ್ನಡ ನಾಡು ನುಡಿ, ಜಲ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಮತ್ತು ಉಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಶಂಸಿದರು.

ರಾಜ್ಯ ಮಟ್ಟದ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ಮುಖ್ಯ ಗೌರವ ಅಧ್ಯಕ್ಷರು ಆದ ಡಾ.ಮುಕುಂದ ರಾಜು ರವರು ವಹಿಸಿದ್ದರು, ಸಂಘಟನಾ ಸಂಚಾಲಕರು ಆದ ಶ್ರೀಯುತ ಕೋಡಿಹಳ್ಳಿ ಟಿ.ಶಿವಮೂರ್ತಿ, ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಅಂಜನ್ ಕುಮಾರ್,ಏಚ್.ಎಸ್ ಗೌಡರ, ಡಾ.ಬಸವರಾಜ್ ಪೂಜಾರ್ ಕೋಡಿಹಳ್ಳಿ,ಕು.ಸಿಂಚನ.ಎಂ.ಎನ್ ಗೊರಹಳ್ಳಿ,ಭರತ್.ಕೆ ಉಪಸ್ಥಿತರಿದ್ದರು, ಮೂವತ್ತಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಚಿದಾನಂದ ಮೂರ್ತಿ.ಎಂ ನರ್ಲಹಳ್ಳಿ ಸ್ವಾಗತಿಸಿದರು, ಮುಖ್ಯ ಸಂಚಾಲಕರು ಆದ ಶ್ರೀಯುತ ಡಿ. ಜೆ. ತಿರುಮಲ ಮತ್ತು ಕೋಡಿಹಳ್ಳಿ ಟಿ.ಶಿವಮೂರ್ತಿ ನಿರೂಪಿಸಿದರು, ಡಿ.ಬಸವರಾಜ್ ಕರುವಿನ ವಂದಿಸಿದರು.

ವರದಿ:ಶಿವಮೂರ್ತಿ.ಕೋಡಿಹಳ್ಳಿ.ಚಳ್ಳಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button