ಸತತ 14 ವರ್ಷ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುವ ಸಂಸ್ಥೆಯ ಗುರು ವೃಂದಕ್ಕೆ ಸನ್ಮಾನ.

ಕಂದಗಲ್ಲ ಫೆಬ್ರುವರಿ.26

ಇಂದು ಸಾಧನೆಯ ಹಾದಿಯಲ್ಲಿ, ಸಾಗಬೇಕಾದರೆ ಈ ಆಧುನಿಕ ಯುಗದಲ್ಲಿ ಹಲವಾರು ಹಾದಿಗಳು ಕಾದು ಕುಳಿತಿವೆ. ಅದರಂತೆ ಮಕ್ಕಳು ಕೂಡ ಬಹುಮುಖಿ ಪ್ರತಿಭೆಗಳು, ಇಂದು ಆ ಪ್ರತಿಭೆಗಳನ್ನ ಹೊರ ತಂದು ಶಿಕ್ಷಣದ ಜೊತೆಗೆ ಕ್ರೀಡಾ , ಕಲೆ – ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳನ್ನು ಬೆಳೆಸಿಕೊಂಡು ಅವರ ಉತ್ತಮ ಭವಿಷ್ಯಕ್ಕಾಗಿ ಈ ವಿದ್ಯಾಸಂಸ್ಥೆಯ ಮುಖ್ಯಸ್ತರು ಶಿಕ್ಷಕರೆಲ್ಲರೂ ಶ್ರಮ ಪಡುತ್ತಿದ್ದಾರೆ ಅವರ ಪರಿಶ್ರಮ ನಿಜವಾಗಲೂ ಶ್ಲಾಘನೀಯ ಎಂದು ಶ್ರೀ ರಾಹುಲಧಣಿ ನಾಡಗೌಡ್ರ ಗ್ರಾಮದ ವಿಶ್ವಚೇತನ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ 14ನೇ ವಾರ್ಷಿಕ ಸ್ನೇಹ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೈದ್ಯರಾದ ಡಾ ಮಹಮ್ಮದ ಅರ್ಷದ ಬಾಗವಾನ ಹಾಗೂ ಡಾ ಸೈಯದ ಸಾದಿಯ ಇರಮ ಇವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು ಮತ್ತು ನೂತನವಾಗಿ ನಿರ್ಮಿಸಲಾದ ವಿಜಯ ಮಹಾಂತ ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ, ಸಾಂಸ್ಕೃತಿಕ – ಕಲೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳ ಜೊತೆಗೆ ಬಹುಮಾನಗಳನ್ನು ವಿತರಿಸಲಾಯಿತು. ಸ್ವಾಮಿ ವಿವೇಕಾನಂದರ ಮತ್ತು ಡಾ. ಪಂಡಿತ್ ಪುಟ್ಟರಾಜ ಗವಾಯಿಗಳವರ ರಂಗಸಜ್ಜಿಕೆಯಲ್ಲಿ ನಡೆದ ಸಾಂಸ್ಕೃತಿಕ ಉತ್ಸವ ಜನರ ಕಣ್ಮನ ಸೆಳೆಯಿತು..ಶ್ರೀಮತಿ ಕೆ.ಎಲ್ ಮನಹಳ್ಳಿ ಮತ್ತು ಸಂಸ್ಥೆಯ ಮುಖ್ಯಸ್ತರದ ಶ್ರೀ ಸಂಗಣ್ಣ.ಎಸ್. ಹವಲ್ದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎನ್ ಎಚ್ ಮುಕ್ಕಣ್ಣನವರ ಶಿಕ್ಷಣ ಸಂಯೋಜಕರಾದ ಸಿದ್ದು ಪಾಟೀಲ್, ಶರಣಯ್ಯ ಮಠ,ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸವರಾಜ ಅಳ್ಳೊಳ್ಳಿ, ಮಲ್ಲಿಕಾರ್ಜುನ್ ಪೊತನಾಳ, ಚಂದ್ರಶೇಖರ್ ಕಂಠಿ, ಮುತ್ತಣ್ಣ ಜಾಲಿಹಾಳ, ಆರ್ ಜಿ. ಪಾಟೀಲ್ ವೀರನಗೌಡ ಪಾಟೀಲ್, ಆರ್. ವಿ ಶೀಲವಂತರ್, ಗಂಗಾಧರ್ ಎಸ್ ಅರಮನಿ, ಸಿ. ಆರ್. ಪಿ ಶಾಂತಕುಮಾರ್ ಎಸ್.ಕೆ, ಎಸ್. ಎಸ್ ಕುಲಕರ್ಣಿ, ಪತ್ರಕರ್ತರಾದ ಗುರು ಗಾಣಿಗೇರ, ಶಿಕ್ಷಕರಾದ ದೇವಿದಾಸ ಬಂಡಾರಿ, ಮುಖ್ಯ ಗುರು ರೇಷ್ಮಾ ಗಾವಡಿ ಉಪಸ್ಥಿತರಿದ್ದರು. ಕಂದಗಲ್ಲಿನ ಶ್ರೀ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘದ ಸದಸ್ಯರಾದ ರಾಜು ಪರಾಸರ್ ಹಾಗೂ ವೆಂಕಣ್ಣ ಮಳ್ಳಿ ಮಹಿಳಾ ಸದಸ್ಯರಾದ ಶ್ರೀ ಮತಿ ವೀಣಾ ಶಿಂಪಿ ಹಾಗೂ ಕು ಭಾಗ್ಯಶ್ರೀ ಮಠ ರವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿರುವ ಸಂಸ್ಥೆಯ ಅಧ್ಯಕ್ಷರಿಗೆ ಮತ್ತು ಗುರು ವೃಂದಕ್ಕೆ ಸನ್ಮಾನಿಸಿ ಧನ್ಯವಾದಗಳನ್ನು ಅರ್ಪಿಸಿದರು. ಶಿಕ್ಷಕಿ ಮೀನಾಕ್ಷಿ ಎಚ್. ಹರಿಕಾಂತ ಸ್ವಾಗತಿಸಿದರು. ರೇಷ್ಮಾ ಮಕಾನದರ ಪ್ರಾರ್ಥಿಸಿದರು ಶ್ವೇತಾ ತುಂಬದ ನಿರೂಪಿಸಿದರು. ಶಿಕ್ಷಕಿಯರಾದ ಎನ್ ಎನ್. ನಾಯಕ ಮತ್ತು ಆಶಾ ಆನೆಹೊಸೂರು ವಂದಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಳಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button